ಚಿಕ್ಕಬಳ್ಳಾಪುರ: ಜಿಲ್ಲೆಯ ಜಂಗಮಕೋಟೆ ಹೋಬಳಿಯಲ್ಲಿ ಕೆಐಎಡಿಬಿ ಮಂಡಳಿ 13 ಹಳ್ಳಿಗಳ 2823 ಎಕರೆ ಜಮೀನು ಭೂಸ್ವಾಧೀನಕ್ಕೆ ಸಂಬಂಧಿಸಿ ಸರ್ಕಾರದ ನೀತಿ ನಿಯಮಾವಳಿಗಳಂತೆ ಜಮೀನು ನೀಡಲು ಒಪ್ಪಿಗೆ ಸೂಚಿಸಿರುವ ಪ್ರತಿ ರೈತರಿಗೂ ಉತ್ತಮ ಬೆಲೆ ನೀಡಿ ಜಮೀನು ನೀಡಿದ ಪ್ರತಿ ರೈತನ ಮನೆಗೊಂದು ಉದ್ಯೋಗ ತ್ವರಿತವಾಗಿ ನೀಡಲು ಕ್ರಮ ವಹಿಸಬೇಕು ಎಂದು ಆಗ್ರಹಿಸಿ ಜಂಗಮಕೋಟೆ ಹೋಬಳಿ ಕೆಎಡಿಪಿ ಜಮೀನುಗಳ ರೈತರ ಪರ ಹೋರಾಟ ಸಮಿತಿ ಪದಾಧಿಕಾರಿಗಳು ರೈತರು ಬೃಹತ್ ಪ್ರತಿಭಟನೆ ನಡೆಸಿತು.
ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಹೋರಾಟ ಸಮಿತಿಯ ಪದಾಧಿಕಾರಿಗಳು ಜಿಲ್ಲಾಡಳಿತ ಈಗಾಗಲೇ 13 ಹಳ್ಳಿಗಳಲ್ಲಿ ಘನ ಸರ್ಕಾರ ಈಗಾಗಲೇ ಈ ಭಾಗದ 13 ಹಳ್ಳಿಗಳಲ್ಲಿ ನಿಗದಿಪಡಿಸಿದ ಎಕರೆಯಷ್ಟು ಭೂ ಸ್ವದಿನಾಪಡಿಸಿ ಕೈಗಾರಿಕೆಗಳನ್ನ ಪ್ರಾರಂಭಿಸಲು ಘನ ಸರ್ಕಾರ ಅಧಿಸೂಚನೆ ಹೊರಡಿಸಿ ಎಲ್ಲ ರೈತರಿಗೂ ನೋಟಿಸ್ ನೀಡಿದ್ದು ಅದರಂತೆ ಸರ್ಕಾರದ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ತಾಲೂಕು ಆಡಳಿತ ಕೆಐಎಡಿಬಿ ಮಂಡಳಿ ಅಧಿಕಾರಿಗಳು ಸೇರಿದಂತೆ ಜಂಗಮಕೋಟೆ ಹೋಬಳಿಯ ಜ್ಯೋತಿ ಆಂಗ್ಲ ಶಾಲೆಯಲ್ಲಿ ಇನ್ನೂ 2823 ಎಕರೆ ಜಮೀನಿನಲ್ಲಿ ಸರ್ಕಾರಿ ಜಮೀನು ಬಿಟ್ಟು ಉಳಿದ ರೂ.1088 ಜನ ರೈತ ಖಾತೆದಾರರಿಗೆ ನೋಟಿಸ್ ನೀಡಿ ಅಭಿಪ್ರಾಯ ಸಂಗ್ರಹಣ ಮಾಡಿದ್ದು ಈ ಅಭಿಪ್ರಾಯ ಸಂಗ್ರಹಣದಲ್ಲಿ ಸರ್ಕಾರದ ಪರವಾಗಿ 370 ಮಂದಿ ರೈತರು ಬಿಳಿ ಚೀಟಿ ವಿರುದ್ಧವಾಗಿ 400 ಜನ ಕೆಂಪು ಚೇಟಿ 280 ಜನ ರೈತರು ಯಾವುದೇ ವಿರೋಧ ಇಲ್ಲದೆ ಗೈರು ಹಾಜರಾಗಿರುತ್ತಾರೆ ಎಂದು ಜಂಗಮಕೋಟೆ ಹೋಬಳಿ ಕೆ ಐ ಎ ಡಿ ಬಿ ಜಮೀನುಗಳ ರೈತ ಪರ ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕ ಪ್ರತಿಶ್ ಅವರು ಹೋರಾಟಗಾರರನ್ನ ಉದ್ದೇಶಿ ಮಾತನಾಡಿದರು ಮುಂದುವರೆದು ಮಾತನಾಡಿದ ಅವರು ತಮ್ಮ ಸರ್ಕಾರದ ಕಾನೂನು ನಿಯಮದಲ್ಲಿ ಗೈರು ಹಾಜರಿ ಆದವರನ್ನು ಸರ್ಕಾರಿ ಕೈಗಾರಿಕೆ ಸ್ಥಾಪನೆಗೆ ತಮ್ಮ ವಿರೋಧ ಇಲ್ಲ ಎಂದು ಗೈರು ಹಾಜರಾಗಿರುತ್ತಾರೆ ಹಾಗಾಗಿ ಒಟ್ಟು ಶೇಕಡ 60% ರಷ್ಟು ರೈತರು ಕೈಗಾರಿಕೆಯ ಪರವಾಗಿ ಬೆಂಬಲವನ್ನ ಕೊಟ್ಟಿರುತ್ತಾರೆ, ಇದನ್ನ ಆದರಿಸಿ ಅಧಿಕಾರ ಚಲಾವಣೆ ಮಾಡಿ ತ್ವರಿತ ಗತಿಯಲ್ಲಿ ಜಮೀನು ನೀಡಿದ ಪ್ರತಿ ಎಕರೆಗೆ ಎರಡು ಕೋಟಿ ಭೂ ಪರಿಹಾರ ನೀಡಬೇಕು ಜಮೀನು ನೀಡಿದ ಪ್ರತಿ ರೈತರ ಕುಟುಂಬದಲ್ಲಿ ಕಡ್ಡಾಯವಾಗಿ ಉದ್ಯೋಗ ನೀಡಿ ಈ ನಮ್ಮ ಹಿಂದುಳಿದ ತಾಲೂಕನ್ನ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಬೇಕು ಎಂಬ ಮನವಿಯನ್ನ ಜಿಲ್ಲಾಧಿಕಾರಿಗಳಿಗೆ ನೀಡಿದರು.
ಈ ಸಂದರ್ಭದಲ್ಲಿ ರೈತ ಮುಖಂಡರುಗಳಾದ ಬಿ.ಕೆ.ಮುನಿ ಕೆಂಪಣ್ಣ, ನಲ್ಲೇನಹಳ್ಳಿ, ಸುಬ್ರಮಣಿ, ಎಂ ಮುನಿರಾಜು, ಚೆನ್ನಪ್ಪ, ತಿರುಮಲಪ್ಪ ಗಂಗಪ್ಪ ಮುನಿಆಂಜಿನಪ್ಪ, ರವಿಕುಮಾರ್ ಕನಕನ್ನ ಹೊನ್ನಯ ಸೇರಿದಂತೆ ಇನ್ನಿತರ ರೈತರು ಇದ್ದರು.