ಜಗತ್ತಿಗೆ ಶಾಂತಿ ಸಾರುವ ಬ್ರಹ್ಮಾಕುಮಾರೀಸ್ ಸಹೋದರಿಯರ  ಸೇವೆಗೆ ಬೆಲೆ ಕಟ್ಟಲಾಗದು - ಸಂದೀಪ ಬಿ ರೆಡ್ಡಿ

Correspondent/Chikkaballapura/Krishnappa/SM News Desk

Aug 22, 2025 - 21:39
Aug 22, 2025 - 21:44
 0  18
ಜಗತ್ತಿಗೆ ಶಾಂತಿ ಸಾರುವ ಬ್ರಹ್ಮಾಕುಮಾರೀಸ್ ಸಹೋದರಿಯರ  ಸೇವೆಗೆ ಬೆಲೆ ಕಟ್ಟಲಾಗದು  - ಸಂದೀಪ ಬಿ ರೆಡ್ಡಿ
ಚಿತ್ರಸುದ್ದಿ :  ಬ್ರಹ್ಮಕುಮಾರಿ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂದೀಪ ಬಿ ರೆಡ್ಡಿ ಮಾತನಾಡಿದರು.

ಚಿಕ್ಕಬಳ್ಳಾಪುರ, ಆ 22- ಜಗತ್ತಿಗೆ ಶಾಂತಿ ಸಾರುವ ಬ್ರಹ್ಮಾಕುಮಾರೀಸ್ ಸಹೋದರಿಯರ  ಸೇವೆಗೆ ಬೆಲೆ ಕಟ್ಟಲಾಗದು, ಈ ಸಂಸ್ಥೆಗಳ ಮೂಲಕ  ಭಾವನಾತ್ಮಕ ದೌರ್ಬಲ್ಯವನ್ನು ನಿವಾರಿಸುವಲ್ಲಿ ಮತ್ತು ನಮ್ಮಗಳ ಆಂತರಿಕ ಅಸ್ತಿತ್ವದೊಂದಿಗೆ  ಸರಿದಾರಿಯ ಪರಿವರ್ತಕ ಶಕ್ತಿ ಕಂಡುಕೊಳ್ಳಬಹುದಾಗಿದೆ ಎಂದು  ಭಗತ್ ಸಿಂಗ್ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಸಂದೀಪ ಬಿ ರೆಡ್ಡಿ ಹೇಳಿದರು. 

ಅವರು ಚಿಕ್ಕಬಳ್ಳಾಪುರ ನಗರದ ಕೃಷ್ಣ ಟಾಕೀಸ್ ರಸ್ತೆಯಲ್ಲಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರ್ಯ ವಿಶ್ವವಿದ್ಯಾಲಯದ ಶಿವ ಪ್ರೇರಣಾ  ಭವನದಲ್ಲಿ ಗುರುವಾರ ರಾತ್ರಿ  ಆಯೋಜಿಸಿದ್ದ ರಕ್ಷಾ ಬಂಧನ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಈ ಸಂಸ್ಥೆಗಳಲ್ಲಿ ನಡೆಯುವ ಸರಳ ಧ್ಯಾನದಲ್ಲಿ ಪಾಲ್ಗೊಳ್ಳುವುದರಿಂದ ಸ್ಥಿತಿಸ್ಥಾಪಕತ್ವ ಮತ್ತು ಆಂತರಿಕ ಶಾಂತಿಯ ಪಠಣವಾಗಲಿದೆ ಇದು ನಮ್ಮ ದೈನಂದಿನ ಕೆಲಸಗಳಿಗೆ  ಪ್ರೇರಣೆ ಸಿಗಲಿದೆ ಎಂದ ಅವರು ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ರಕ್ಷಾ ಬಂಧನ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆದಿದೆ ನಾವೆಲ್ಲರೂ ಶ್ರೀ ಕೃಷ್ಣನಂತೆ ಸುಂದರ ಮತ್ತು ದೈವಿಕರಾಗೋಣ ಎಲ್ಲರಲ್ಲೂ  ಆಧ್ಯಾತ್ಮಿಕ ಸಂದೇಶ ನಿತ್ಯ ನಿರಂತರ  ಮೂಡಿಸುತ್ತಿರುವ  ಇಲ್ಲಿನ ಸಹೋದರಿಯರ  ಸೇವೆ ಆದರ್ಶಗಳನ್ನು ನಾವೆಲ್ಲ ಮೈಗೂಡಿಸಿಕೊಳ್ಳೋಣ ಎಂದರು.

ಇದೆ ವೇಳೆ   ಪ್ರಜಾಪಿತ ಬ್ರಹ್ಮಕುಮಾರರೀಸ್ ಈಶ್ವರಿಯ ವಿಶ್ವ ವಿದ್ಯಾಲಯ  ಕರ್ನಾಟಕ-ಆಂಧ್ರ ಉಪ ವಲಯ ಸಹ ಸಂಚಾಲಕರಾದ ರಾಜಯೋಗಿನಿ  ಬಿ.ಕೆ. ಗೀತಾ ಬೆಹೆಂಜಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಶ್ರೀ ಕೃಷ್ಣ ಜನ್ಮಾಷ್ಟಮಿಯು ಶ್ರೀ ಕೃಷ್ಣನ ಜನ್ಮವನ್ನು ಆಚರಿಸುವ ಅತ್ಯಂತ ಮಹತ್ವದ ದಿನವಾಗಿದೆ. ಶ್ರೀ ಕೃಷ್ಣನು ತನ್ನ ದೈವತ್ವ, ಕಾಂತಿ ಮತ್ತು ಸುಂದರ ಗುಣಗಳಿಗಾಗಿ ಸ್ಮರಣೀಯನಾಗಿರುವ ಸುಂದರ ದೇವರು. ನಾವೆಲ್ಲರೂ ಶ್ರೀ ಕೃಷ್ಣನನ್ನು ಅವನ ವಿಶೇಷತೆಗಳಿಗಾಗಿ ತುಂಬಾ ಪ್ರೀತಿಸುತ್ತೇವೆ ಮತ್ತು ಅವನು ಒಳ್ಳೆಯತನ, ಆನಂದ ಮತ್ತು ಪ್ರೀತಿಯಿಂದ ತುಂಬಿರುವ ಅತ್ಯಂತ ವಿಶೇಷವಾದ ದೇವತಾಾತ್ಮ ಎಂದು ನಮಗೆ ತಿಳಿದಿದೆ ಮಸಂತ್ಯದಲ್ಲಿ  ನಮ್ಮ ಸಮಸ್ಯೆಗಳಲ್ಲಿ ಒಂದೊಂದು ದಿನ ಈ ಶ್ರೀ ಕೃಷ್ಣ ಜನ್ಮಾಷ್ಟಮಿ ಯನ್ನ ಆಚರಿಸುತ್ತಾ ಬಂದಿದ್ದೇವೆ  ಅದರಂತೆ  ಈ ಕೇಂದ್ರದಲ್ಲಿ  ರಾಖಿ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಿಸಿದ್ದು ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸುವಾಗ, ನಾವು ಅವನಿಂದ ಸ್ಫೂರ್ತಿ ಪಡೆದು ಅವನಂತೆ ಸುಂದರರಾಗಬೇಕು ಎಂದರು.

ಚಿಕ್ಕಬಳ್ಳಾಪುರ ಪೊಲೀಸ್ ಉಪ ಅಧೀಕ್ಷಕರಾದ ಎಸ್ ಶಿವಕುಮಾರ್ ಮಾತನಾಡಿ 130ಕ್ಕೂ ಅಧಿಕ ದೇಶಗಳಲ್ಲಿ ಇಂತಹ ಸಂಸ್ಥೆಗಳು ಜನರ ಒಳಿತಿಗಾಗಿ ಮಾಡುವ ಸೇವೆಯ ಪ್ರಯೋಜನವನ್ನ ಪಡೆದು  ಉತ್ತಮರಾಗೋಣ  ಸಮಾಜದಲ್ಲಿ ಶಾಂತಿ ಸೌಹಾರ್ದತೆ  ಎಲ್ಲರಲ್ಲೂ ಸದ್ಭಾವನೆ ಉಂಟುಮಾಡುವ  ನಿಟ್ಟಿನಲ್ಲಿ   ಈ ಸಂಸ್ಥೆಗಳು ಮಾಡುವ ಕಾರ್ಯ ಅನನ್ಯ ಎಂದರು. 

Bಸ್ಥಾನಿಕ ಸಂಚಾಲಕರಾದ  ರಾಜಯೋಗಿನಿ ಬಿಕೆ ಲಲಿತಾ ಅಕ್ಕ  ಆಗಮಿಸಿದ್ದ ಎಲ್ಲರಿಗೂ ತಿಲಕ ಇಟ್ಟು ಶುಭ ಕೋರಿದ ಅವರು ಪ್ರತಿನಿತ್ಯವೂ ನಮ್ಮನ್ನು ನಾವು ನೆನಪಿಸಿಕೊಳ್ಳಬೇಕು. ಈ ಸಮಯದಲ್ಲಿ ಭಗವಂತ ಆತ್ಮ, ತನ್ನ ಮತ್ತು ವಿಶ್ವ ನಾಟಕದ ಸುಂದರ ಜ್ಞಾನವನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಾನೆ. ಈ ಜ್ಞಾನವನ್ನು ನಮ್ಮ ಜೀವನದ ಭಾಗವನ್ನಾಗಿ ಮಾಡಿಕೊಳ್ಳುವ ಮೂಲಕ, ನಾವು ಶ್ರೀ ಕೃಷ್ಣನಂತೆ ಆಧ್ಯಾತ್ಮಿಕವಾಗಿ ರಾಜ ಮತ್ತು ದೈವಿಕರಾಗಬಹುದಾಗಿದೆ ಎಂದರು. 

ನಗರಸಭೆ ಸ್ಥಾಯಿ  ಸಮಿತಿ ನೂತನ ಅಧ್ಯಕ್ಷ ವಿ. ಸುಬ್ರಹ್ಮಣ್ಯಚಾರಿ ಮಾತನಾಡಿ  ಭಗವಂತನ ವಾಕ್ಯಗಳನ್ನು ಪ್ರತಿನಿತ್ಯ ಕೇಳುವುದರಿಂದ ನಮ್ಮ ಜೀವನ ಸುಂದರಮಯವಾಗಲಿದೆ ಎಂದರು. ಇದೇ ವೇಳೆ ನೂತನವಾಗಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ವಿ ಸುಬ್ರಹ್ಮಣ್ಯಚಾರಿ ಅವರನ್ನ ಗೀತಾ ಬೆಹೆಂಜಿ ಹಾಗೂ ಲಲಿತ ಅಕ್ಕ ಅವರು ವಿಶೇಷವಾಗಿ ಗೌರವಿಸಿ ಸನ್ಮಾನಿಸಿದರು. 

ಇದೆ ವೇಳೆ  ಅನೇಕ  ಪುಟಾಣಿ ಮಕ್ಕಳು ಶ್ರೀಕೃಷ್ಣ-ರಾಧೆ ವೇಷಧಾರಿಗಳಾಗಿ ಆಗಮಿಸಿ ಎಲ್ಲರ ಮನ ಸೋರೆಗೊಂಡರು.  
ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ನಿವೃತ್ತ ಸಬ್ ಇನ್ಸ್ಪೆಕ್ಟರ್ ಎಚ್ ನಂಜುಂಡಯ್ಯ, ಸ್ಥಾನಿಕ ಕೇಂದ್ರದ ಹಿರಿಯ ಸಹೋದರಿಯರಾದ ಬಿಕೆ ಸುಜಾತಕ್ಕ, ಚಿನ್ನಮ್ಮಕ್ಕ  ಲಕ್ಷ್ಮಿದೇವಕ್ಕ, ರೇಣುಕಾ   ಶ್ರೀದೇವಿ, ಶಿಕ್ಷಕ ಬಿಕೆ ಮಂಜುನಾಥ್, ಎನ್ ಎಂ ನಂಜುಂಡಾಚಾರಿ ಸೇರಿದಂತೆ ಇನ್ನಿತರ ಬಿ.ಕೆ.ಸಹೋದರ ಸಹೋದರಿಯರು ಇದ್ದರು.