ಕ್ಷೇತ್ರದ ಹೂಡಿ  ಗ್ರಾಮದಲ್ಲಿ ಲಕ್ಷ್ಮಿ ವೆಂಕಟೇಶ್ವರಸ್ವಾಮಿಯ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನೆರವೇರಿತು.

Correspondent / Maqsood / White Field/ Bengaluru News desk

May 8, 2025 - 23:12
May 20, 2025 - 23:08
 0  33
ಕ್ಷೇತ್ರದ ಹೂಡಿ  ಗ್ರಾಮದಲ್ಲಿ ಲಕ್ಷ್ಮಿ ವೆಂಕಟೇಶ್ವರಸ್ವಾಮಿಯ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನೆರವೇರಿತು.

ಮಹದೇವಪುರ(ಮೇ 8) : ಕ್ಷೇತ್ರದ ಹೂಡಿ  ಗ್ರಾಮದಲ್ಲಿ ಲಕ್ಷ್ಮಿ ವೆಂಕಟೇಶ್ವರಸ್ವಾಮಿಯ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನೆರವೇರಿತು.

ಉತ್ಸವ ಮೂರ್ತಿಗೆ ಹೂವಿನ ಅಲಂಕಾರ ಮಾಡಿ, ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದರು ಕಂಸಾಳೆ, ಡೊಳ್ಳು ಕುಣಿತ, ತಮಟೆ, ಮಂಗಳವಾದ್ಯ ಸಹಿತ ಕಲಾ ತಂಡಗಳ ನೃತ್ಯ ಪ್ರದರ್ಶನ ನೆರೆದಿದ್ದ ಭಕ್ತರ ಪ್ರಮುಖ ಆಕರ್ಷಣೆ-ಯಾಗಿತ್ತು. ಹೂಡಿ,ತಿಗಳರಪಾಳ್ಯ,ಕೆ.ಆರ್.ಪುರ,ಮಹದೇವಪುರ ವರ್ತೂರು, ಸಿದ್ದಾಪುರ, ವೈಟ್‌ಫೀಲ್ಡ್, ತೂಬರಹಳ್ಳಿ, ನಲ್ಲೂರಹಳ್ಳಿ, ವರ್ತೂರು ಕೊಡಿ ಸುತ್ತ-ಮುತ್ತಲಿನ ಹಳ್ಳಿಗಳ ಜನರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ಭಕ್ತರಿಗೆ ಅನ್ನದಾಸೋಹ, ಪಾನಕ, ಮಜ್ಜಿಗೆ ವಿತರಿಸಲಾಯಿತು. ರಥೋತ್ಸವದಲ್ಲಿ ಹಾಗೂ ಕರಗ ಮಹೋತ್ಸವಕ್ಕೆ ರೆಡ್ಡಿ ಗುರುಪೀಠದ ಅಧ್ಯಕ್ಷ ವೇಮಾನಾನಂದ ಸ್ವಾಮಿಜಿ,ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ ಸೇರಿದಂತೆ ಸಾವಿರಾರು ಮಂದಿ ಸಾಕ್ಷಿಯಾದರು. ಈ ಸಂದರ್ಭದಲ್ಲಿ ಹೂಡಿ ಪಿಳ್ಳಪ್ಪ,ಎಚ್.ವಿ.ಮಂಜುನಾಥ್, ರಾಮಭಕ್ತ ಮಂಜುನಾಥ್, ಚಂದ್ರಶೇಖರರೆಡ್ಡಿ,ಅಶೋಕ್ ರೆಡ್ಡಿ,  ಶಾಂತರಾಜು,ಕಾವೇರಿ ನಗರ ರವಿ,ಪವನ್ ಇದ್ದರು.