ಜನಾಶಾ ಯೋಜನೆಗಳನ್ನು ಜನರಿಗೆ ತಲುಪಿಸಿ ಅವರ ಬದುಕು ಸುಂದರವಾಗಿಸುವಂತೆ ಮಾಡಬೇಕು - ವೈ.ಎಂ. ಮೂರ್ತಿ
Correspondent/Chikkaballapura/Krishnappa/SM News Desk
ಚಿಕ್ಕಬಳ್ಳಾಪುರ ಸೆ.6 : ಜನರ ಜೀವನ ಮಟ್ಟವನ್ನು ಸುಧಾರಿಸಲು ಜನಾಶಾ ಅನೇಕ ಯೋಜನೆಗಳನ್ನು ತಯಾರು ಮಾಡಿದ್ದು ಈ ಯೋಜನೆಗಳನ್ನು ಜನರಿಗೆ ತಲುಪಿಸಿ ಅವರ ಬದುಕು ಸುಂದರವಾಗಿಸುವಂತೆ ಮಾಡಬೇಕು ಎಂದು ಜನಾಶಾ ಸೌತ್ ನಿಧಿ ಲಿ., ಹಿರಿಯಅಭಿವೃದ್ಧಿ ಯೋಜನಾಧಿಕಾರಿ ವೈ.ಎಂ. ಮೂರ್ತಿ ತಿಳಿಸಿದರು.
ಅವರು ಚಿಕ್ಕಬಳ್ಳಾಪುರ ನಗರದ ಜನಾಶಾ ಸೌತ್ ನಿಧಿ ಕಾರ್ಯಾಲಯದಲ್ಲಿ ನಡೆದ ಚಿಕ್ಕಬಳ್ಳಾಪುರ ಜಿಲ್ಲಾ ಪ್ರತಿನಿಧಿಗಳ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿ, ವೃತ್ತಿ ಜೀವನ ಆರಂಭದ ದಿನಗಳಲ್ಲೇ ಉಳಿತಾಯಕ್ಕೆ ನೀಡುವ ಗಮನ ನಿವೃತ್ತ ಜೀವನವನ್ನು ಸುಂದರವಾಗಿಡುತ್ತದೆ. ಜತೆಗೆ, ನೆಮ್ಮದಿ ಮತ್ತು ನಿಶ್ಚಿಂತೆಯ ಇಳಿಗಾಲ ನಿಮ್ಮದಾಗುತ್ತದೆ ಎಂಬುದರ ಕುರಿತು ಮತ್ತು ನಮ್ಮ ಜನಾಶಾ ಲಾಭದಾಯಕಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಇದೆ ವೇಳೆ ಪ್ರತಿನಿಧಿಗಳಿಗೆ ಕಿವಿಮಾತು ಹೇಳಿದ ಅವರು ಜನರ ಬಳಗೆ ಜನಾಶಾ ಯೋಜನೆಗಳನ್ನು ತಲುಪಿಸಿದ್ದೂ ಅಲ್ಲದೆ ಇದರಿಂದ ಜನತೆಯ ಆರ್ಥಿಕತೆ ಮಟ್ಟ ಹೆಚ್ಚು ಮಾಡುವಲ್ಲಿ ಶ್ರಮಿಸಿ ಇಡೀ ಕರ್ನಾಟಕದಲ್ಲಿಯೇ ನಾಲ್ಕನೇ ಸ್ಥಾನ ಪಡೆದ ಚಿಕ್ಕಬಳ್ಳಾಪುರದ ಎಂ ಮುನಿರಾಜು ಅವರ ಕಾರ್ಯ ವೈಖರಿಯನ್ನ ಶ್ಲಾಘಿಸಿ ಅವರು ಪದೋನ್ನತಿ ಪಡೆದ ಹಿನ್ನೆಲೆ ಪ್ರಶಂಸೆ ವ್ಯಕ್ತಪಡಿಸಿದರು.
ಮತ್ತೋರ್ವ ಹಿರಿಯ ಅಭಿವೃದ್ಧಿ ಅಧಿಕಾರಿ ಭಾಗ್ಯ ಮಾತನಾಡಿ, ಜನರ ಕಷ್ಟ ಕಾಲಕ್ಕೆ ಜನಾಶ ಯೋಜನೆಗಳು ಅತ್ಯಂತ ಪ್ರಣಾಮಕಾರಿಯಾಗಿ ಫಲ ನೀಡಲಿವೆ ಇಲ್ಲಿನ ಯೋಜನೆಗಳ ಬಗ್ಗೆ ನಾವು ಸಮರ್ಪಕವಾಗಿ ಅರಿತು ಜನತೆಗೆ ಮಾಹಿತಿ ನೀಡುವುದು ನಮ್ಮ ಆದ್ಯ ಕರ್ತವ್ಯ ಆಗಬೇಕು ನಾವು ಪರಿಪೂರ್ಣರಾಗಿ ಇದ್ದರೆ ಮಾತ್ರ ನಮಗೂ ಸಹ ಲಾಭದಾಯಕ ಸಂಸ್ಥೆಯನ್ನು ಬೆಳೆಸಿದರೆ ನಾವೆಲ್ಲ ಬೆಳೆದಂತೆ ಎಂಬುದರ ಜ್ಞಾನ ಪ್ರತಿಯೊಬ್ಬರೂ ಹೊಂದ ಬೇಕು ಎಂದರು.
ಜನಾಶಾ ಸೌತ್ ನಿಧಿ ಲಿ ನ ಇನ್ನಿತರ ಯೋಜನೆ ಹಾಗೂ ಪ್ರಯೋಜನಗಳ ಬಗ್ಗೆ ಹಿರಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಜಿ.ರವಿ, ಟಿ. ಭಾಗ್ಯಮ್ಮ, ಸರಿತಾ ಡಿಎನ್. ಹಾಗೂ ಎಂ ವಿಶ್ವನಾಥ್ ಸವಿಸ್ತಾರವಾಗಿ ಮಾಹಿತಿ ನೀಡಿದರು.
ಇದೆ ವೇಳೆ ನಡೆದ ಸರಳ ಕಾರ್ಯಕ್ರಮದಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ ಪದೋನ್ನತಿಗೊಂಡ ಎಂ ಮುನಿರಾಜು ಅವರನ್ನು ಪ್ರತಿನಿಧಿಗಳ ಸಮ್ಮುಖದಲ್ಲಿ ಗೌರವಿಸಿ ಸನ್ಮಾನಿಸಲಾಯಿತು.
ನೂತನ ಅಭಿವೃದ್ಧಿ ಅಧಿಕಾರಿ ಎಂ ಮುನಿರಾಜು ಈ ಸಂಸ್ಥೆ ಕಾರ್ಯಕಲಾಪಗಳು ಸೇರಿದಂತೆ ಮೇಲಾಧಿಕಾರಿಗಳು ಆಗಿಂದಾಗೆ ನೀಡಿದ ಸಲಹೆಯಂತೆ ಕಾರ್ಯನಿರ್ವಹಿಸಿದಾಗ ಮಾತ್ರ ನಮ್ಮನ್ನ ಸಂಸ್ಥೆ ಗುರುತಿಸಲಿದೆ ಜನತೆಗೆ ನಮ್ಮ ಸಂಸ್ಥೆಯ ಬಗ್ಗೆ ನಿಖರವಾದ ಮಾಹಿತಿಯನ್ನ ಸ್ಪಷ್ಟವಾಗಿ ನೀಡಬೇಕು ಆಗ ನಮ್ಮಗಳ ಮೇಲೆ ಒಳ್ಳೆಯ ಅಭಿಪ್ರಾಯ ಜನರಲ್ಲಿ ಮೂಡುತ್ತದೆ ಎಂದು ತನ್ನ ಅಭಿಪ್ರಾಯ ಮಂಡಿಸಿದರು.
ಜನಾಶಾ ಸೌತ್ ನಿಧಿ ಲಿಮಿಟೆಡ್ ನ ದೇವನಹಳ್ಳಿ ಚಿಕ್ಕಬಳ್ಳಾಪುರ ಬಾಗೇಪಲ್ಲಿ ಚಿಂತಾಮಣಿ ಗೌರಿಬಿದನೂರು ಶಿಡ್ಲಘಟ್ಟ ಸೇರಿದಂತೆ ಇನ್ನಿತರ ಕಡೆಗಳ ಸುಮಾರು ನೂರಕ್ಕೂ ಅಧಿಕ ಮಂದಿ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.