ಪಂಚಾಯತಿ ಸಿಇಒ ಕಾರು ಚಾಲಕ ಬಾಬು ಆತ್ಮಹತ್ಯೆ ಪತ್ನಿಗೆ ಪರಿಹಾರ ಜಿಲ್ಲಾಧಿಕಾರಿ ಆದೇಶ ...

Correspondent/Karnataka/Chikkaballapura/Krishnappa/SM News Desk

Aug 13, 2025 - 22:35
 0  6
ಪಂಚಾಯತಿ ಸಿಇಒ ಕಾರು ಚಾಲಕ ಬಾಬು ಆತ್ಮಹತ್ಯೆ ಪತ್ನಿಗೆ ಪರಿಹಾರ ಜಿಲ್ಲಾಧಿಕಾರಿ ಆದೇಶ ...

ಚಿಕ್ಕಬಳ್ಳಾಪುರ : ಇಲ್ಲಿನ ಜಿಲ್ಲಾ ಪಂಚಾಯತಿ ಸಿಇಒ ಕಾರು ಚಾಲಕ ಬಾಬು ಆತ್ಮಹತ್ಯೆ ಹಿನ್ನೆಲೆಯಲ್ಲಿ ಆತನ ಪತ್ನಿಗೆ ಪರಿಹಾರ ಧನ ಹಾಗೂ ಅವರ ತಾಯಿಗೆ ರಾಜ್ಯ ಸರ್ಕಾರದ ನೌಕರರಿಗೆ ಅನ್ವಯಿಸುವಂತೆ ಪ್ರತಿ ತಿಂಗಳು ವೇತನ ನೀಡಲು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ನಗರದ ಬಾಪೂಜಿನಗರ ನಿವಾಸಿ ಪರಿಶಿಷ್ಟ ಜಾತಿಯ ಬಾಬು ಅವರು ದೌರ್ಜನ್ಯದಿಂದ ಮೃತಪಟ್ಟಿದ್ದಾರೆ ಸರ್ಕಾರಿ ಆದೇಶದ ಪ್ರಕಾರ ಮೃತರ ಪತ್ನಿ ಶಿಲ್ಪ ಹಾಗೂ ಅವಲಂಬಿತರಿಗೆ ಪರಿಹಾರ ಧನ ಮಂಜೂರು ಮಾಡಲಾಗಿದೆ ಜೊತೆಗೆ ಸರ್ಕಾರಿ  ಆದೇಶದ ಅನ್ವಯ ರಾಜ್ಯ ಸರ್ಕಾರ ಅಥವಾ ಕೇಂದ್ರಾಡಳಿತ ಪ್ರದೇಶದ ನೌಕರರಿಗೆ ಅನ್ವಯಿಸುವಂತೆ ಪ್ರತಿ ತಿಂಗಳು 5000 ಮೂಲವೇತನ ಮತ್ತು ಅದಕ್ಕೆ ಅನುಗುಣವಾಗಿ ತುಟಿಭತ್ಯೇ ನೀಡಲು ಅನುಮತಿ ನೀಡಲಾಗಿದೆ ಈ ಮೂಲಕ ಮೃತ ಕುಟುಂಬದ ಆರ್ಥಿಕ ಸ್ಥಿರತೆಗಾಗಿ ಪರಿಹಾರ ಧನ ಹಾಗೂ ಮಾಸಿಕ ಪಿಂಚಣಿಯನ್ನು ಮಂಜೂರು ಮಾಡುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.