ಶಾಲೆಯಂತೆ ಮನೆಗಳಲ್ಲೂ ಪೋಷಕರು ಮಕ್ಕಳಿಗೆ ಶಿಕ್ಷಣದ ಜೊತೆ ಜೊತೆ ಸಂಸ್ಕಾರ ಕಲಿಸುವ ಕೆಲಸ ಮಾಡಬೇಕು - ಆದಿಚುಂಚನಗಿರಿ ಶ್ರೀ ಶ್ರೀ ನಿರ್ಮಲಾನಂದನಾಥಮಹಾಸ್ವಾಮೀಜಿ
Correspondent / Krishnappa / Bengaluru rural / Karnataka /State news desk
ಚಿಕ್ಕಬಳ್ಳಾಪುರ : ಶಾಲೆಯಂತೆ ಮನೆಗಳಲ್ಲೂ ಪೋಷಕರು ಮಕ್ಕಳಿಗೆ ಶಿಕ್ಷಣದ ಜೊತೆ ಜೊತೆ ಸಂಸ್ಕಾರ ಕಲಿಸುವ ಕೆಲಸ ಮಾಡಬೇಕು ಎಂದು ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಡಾ ಶ್ರೀ ಶ್ರೀ ನಿರ್ಮಲಾನಂದನಾಥಮಹಾಸ್ವಾಮೀಜಿ ಹೇಳಿದರು.
ಅವರು ಚಿಕ್ಕಬಳ್ಳಾಪುರ ನಗರ ವಲಯದ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯ ಆವರಣದಲ್ಲಿ ಬಿ.ಜಿ. ಎಸ್ ಶಿಕ್ಷಣ ಸಂಸ್ಥೆಗಳ ನರ್ಸರಿ ಮತ್ತು ಎಲ್. ಕೆ ಜಿ ಮಕ್ಕಳಿಗೆ ಏರ್ಪಡಿಸಿದ್ದ ಜ್ಞಾನಾಂಕುರ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಶಿಕ್ಷಕರಂತೆಯೇ ಪೋಷಕರು ಸಹ ಮಕ್ಕಳನ್ನ ಬೆಳೆಸುವ ರೀತಿಯಲ್ಲಿ ಮಕ್ಕಳ ಪೋಷಣೆ ಮಾಡಬೇಕು ಯಾವುದೇ ಕಾರಣಕ್ಕೂ ಮಕ್ಕಳ ಮುಂದೆ ಜಗಳ ಮಾಡಬಾರದು ಕೆಟ್ಟ ಕೆಟ್ಟ ಪದಗಳನ್ನು ಅವರ ಮುಂದೆ ಮಾತನಾಡಬಾರದು ಖುಷಿ ಹಾಗೂ ಸಂತೋಷದಾಯಕ ಮಾತುಗಳನ್ನಾಡುವ ಮೂಲಕ ಮಕ್ಕಳ ಸಂತೋಷಕ್ಕೆ ಕಾರಣಕರ್ತರಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ಶ್ರೀಗಳು ಗುರು ಶಿಷ್ಯರ ಸಂಬಂಧ ತಿಳಿಸುವ “ಅಸತೋಮ ಸದ್ಗಮಯ” ಎಂಬ ಮಂತ್ರ ಮತ್ತು ಓಂಕಾರ ಹೇಳಿಕೊಡುವ ಮೂಲಕ ಪುಟ್ಟ ಮಕ್ಕಳಿಗೆ ಅಕ್ಷಾಭ್ಯಾಸ ಮಾಡಿಸಿದರು.
ಉನ್ನತ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾಕ್ಟರ್ ಸುಧಾಕರ್ ಮಾತನಾಡಿ ಮಕ್ಕಳನ್ನ ವಿದ್ಯಾವಂತರನ್ನಾಗಿ ಮಾಡಲು ತಂದೆ ತಾಯಿಗೆ ಮಗುವಿಗೆ ಮೊದಲ ಪಾಠಶಾಲೆಯಂತೆ ಇರಬೇಕು ತಾಯಿಯಿಂದ ಪ್ರಾರಂಭವಾದ ಪಾಠ ಸರಿಯಾದ ದಾರಿಯಲ್ಲಿ ಸಾಗಿದರೆ ಮಕ್ಕಳು ಅತ್ಯುನ್ನತ ಸ್ಥಾನ ತಲುಪಲು ಸಾಧ್ಯ ಆಗಲಿದೆ, ಮಕ್ಕಳು ಕಷ್ಟಪಟ್ಟು ಕಲಿಯುವುದಕ್ಕಿಂತ ಇಷ್ಟಪಟ್ಟು ಕಲಿಯುವ ಹವ್ಯಾಸ ರೂಢಿಸಿಕೊಳ್ಳಬೇಕು ಆ ವಾತಾವರಣವನ್ನ ಮನೆಯಲ್ಲಿಯೇ ಮೊದಲು ಮಾಡಬೇಕು ಅದೇ ರೀತಿ ತಾಯಿ ಮಕ್ಕಳ ತಪ್ಪುಗಳನ್ನು ತಿದ್ದುವ ಸಮಾಜದಲ್ಲಿ ಆತ್ಮವಿಶ್ವಾಸ ಮಾಡಿಸುವ ಕಾರ್ಯ ಮಾಡಬೇಕು ಎಂದರು.
ಬಿಜಿಎಸ್ ಶಿಕ್ಷಣ ಸಂಸ್ಥೆಗಳ ಮುಖ್ಯ ಆಡಳಿತಗಾರ ಡಾಕ್ಟರ್ ಎನ್ ಶಿವರಾಮ ರೆಡ್ಡಿ ಮಾತನಾಡಿ ಮಕ್ಕಳಿಗೆ ಮನೆ ಎಷ್ಟು ಮುಖ್ಯವೋ ಶಾಲಿಯೋ ಅಷ್ಟೇ ಮುಖ್ಯ ಮಕ್ಕಳು ತಾಯಿಯ ಗರ್ಭದಿಂದಲೇ ಕಲಿಯುತ್ತಿರುವ ಅಂಶಗಳನ್ನು ಚಿಗುರೊಡೆಯುವಂತೆ ಮಾಡುವುದೇ ಈ ಜ್ಞಾನಂಕುರ ಕಾರ್ಯಕ್ರಮದ ಬಹುಮುಖ್ಯ ಉದ್ದೇಶ, ವಿದ್ಯಾವಂತರು ತಪ್ಪು ಮಾಡಬಹುದು ಆದರೆ ಸಂಸ್ಕಾರವಂತರು ಎಂದಿಗೂ ತಪ್ಪು ಮಾಡುವುದಿಲ್ಲ ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖ ಮಠದ ಮಂಗಳನಾಥ ಸ್ವಾಮೀಜಿ ಮಾತನಾಡಿ ಮನೆಯಲ್ಲಿ ತಂದೆ ತಾಯಿ ಉತ್ತಮ ವಾತಾವರಣ ಹಾಗೂ ಸಂಸ್ಕಾರ ಕಲಿಸಿದಾಗ ಭವಿಷ್ಯದಲ್ಲಿ ಮಕ್ಕಳು ಉತ್ತಮ ಪ್ರಜೆಗಳಾಗಿ ಹೊರ ಹೊಮ್ಮಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ದುಬೈನ ರಶ್ಮಿ ಮಾತನಾಡಿದರು ಈ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಬಿ ಶಿಲ್ಪಾ ತಹಸೀಲ್ದಾರ್ ಅನಿಲ್ ಮುಖ್ಯ ಶಿಕ್ಷಕ ಡಿಸಿ ಮೋಹನ್ ಕುಮಾರ್ ಸಂಸ್ಥೆಗಳ ವಿವಿಧ ಶಾಲಾ ಕಾಲೇಜುಗಳ ಪ್ರಾಂಶುಪಾಲರು ಮುಖ್ಯೋಪಾಧ್ಯಾಯರು ಹೋದಕ್ಕೆ ತರ ಸಿಬ್ಬಂದಿ ಇದ್ದರು