ಮಾಲೂರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಚುನಾವಣೆಗೆ ಬಾ ಎಂದು ಏಕವಚನದಲ್ಲಿ ಮಾತನಾಡುವುದು ಸರಿಯಲ್ಲ -ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ ಲಕ್ಷ್ಮೀ ನಾರಾಯಣ್

Correspondent /Srinath / Malur Taluk/Kolar Disrict/Karnataka State/PoliticalNews

May 22, 2025 - 20:06
 0  65
ಮಾಲೂರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಚುನಾವಣೆಗೆ ಬಾ ಎಂದು ಏಕವಚನದಲ್ಲಿ ಮಾತನಾಡುವುದು ಸರಿಯಲ್ಲ  -ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ ಲಕ್ಷ್ಮೀ ನಾರಾಯಣ್

ಮಾಲೂರು: ಮಾಲೂರು ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ಧರ್ಜೇಗೆರಿಸಿದ್ದು ಈ ದಿನವನ್ನು ಮಾಲೂರು ತಾಲ್ಲೂಕಿನ ಇತಿಹಾಸ ಪುಠದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಬೇಕಾದಂತ ದಿನವಾಗಿದೆ ಇದರ ಶ್ರೇಯಸ್ಸು, ಕೀರ್ತಿ ತಾಲ್ಲೂಕಿನ ಜನಪ್ರಿಯ ಶಾಸಕರಿಗೆ ಸಲ್ಲುತ್ತದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ ಲಕ್ಷ್ಮೀ ನಾರಾಯಣ್ ಅವರು ತಿಳಿಸಿದರು.

ನಗರದ ಮಾರಿಕಾಂಭಾ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಸೇರಿ ಸಿಹಿಹಂಚಿ ಸಂಭ್ರಮಿಸಿ ನಂತರ ಕಾಂಗ್ರೆಸ್ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮಾಲೂರು ಪುರಸಭೆಯನ್ನು ನಗರಸಭೆಯನ್ನಾಗಿ ಮಾಡುವುದು ಬಹುದಿನಗಳ ಬೇಡಿಕೆಯಾಗಿದ್ದು ಆದರಂತೆ ಪ್ರಸ್ತಾವನೆ ಸಲ್ಲಿಸಿಲಾಗಿತ್ತು. ಈ ವಿಷಯವನ್ನು ಶಾಸಕ ಕೆವೈ ನಂಜೇಗೌಡ ಅವರು ಬಹಳ ಕಾಳಜಿವಹಿಸಿ ಸಂಬಂಧಪಟ್ಟ ಸಚಿವರು, ಹಾಗೂ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಂತ್ರಿಗಳ ಬಳಿ ಚರ್ಚಿಸಿ ನಿರಂತರವಾದ ಪರಿಶ್ರಮದಿಂದ ಇಂದು ಕ್ಯಾಬಿನೇಟ್ ಸಭೆಯಲ್ಲಿ ಮಾಲೂರು ಪುರಸಭೆಯನ್ನು ನಗರಸಭೆಯನ್ನಾಗಿ ಘೋಷಿಸಿದ್ದು. ಈ ದಿನವನ್ನು ಮಾಲೂರು ಇತಿಹಾಸ ಪುಠಗಳಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಬೇಕಾದ ದಿನ. ಇನ್ನೂ ಈ ಅವಕಾಶವನ್ನು ಮಾಲೂರು ಜನತೆಗೆ ಕಲ್ಪಿಸಿದ ಮಾನ್ಯ ಮುಖ್ಯಂತ್ರಿಗಳಾದ ಸಿದ್ದರಾಮಯ್ಯನವರಿಗೆ, ಉಪ ಮುಖ್ಯಮಂತ್ರಿಗಳಾಧ ಡಿಕೆ ಶಿವಕುಮಾರ್ ಅವರಿಗೆ ಫೌರಡಳಿತ ಸಚಿವರಾದ ರಹೀಮ್ ಖಾನ್ ಅವರಿಗೆ ಹಾಗೂ ಮುಖ್ಯವಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಬೈರತಿ ಸುರೇಶ್ ಅವರಿಗೆ ಹಾಗೂ ಶಾಸಕ ಕೆವೈ ನಂಜೇಗೌಡ ಅವರಿಗೆ ತಾಲ್ಲೂಕಿನ ಜನತೆಯ ಪರವಾಗಿ ಧನ್ಯವಾದಗಳನ್ನು ತಿಳಿಸುತ್ತೇನೆ. ಇನ್ನೂ ಮುಖ್ಯವಾಗಿ ಇತ್ತಿಚ್ಚೀಗೆ ಸಾಮಾಜಿಕ ಜಾಲತಾಣಗಳಲ್ಲಿ ಶಾಸಕರ ಬಗ್ಗೆ ಕೆಲ ವಿರೋಧ ಪಕ್ಷದವರು ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಾ ಧಮ್ಮು, ತಾಕತ್ತು ಎಂಬ ಅಸಂವಿಧಾನಿಕ ಪದ ಬಳಕೆ ಮಾಡಿದ್ದು ಇದ್ದನ್ನು ನಾವು ತೀರ್ವವಾಗಿ ಖಂಡಿಸುತ್ತಿದ್ದು ವಿರೋಧ ಪಕ್ಷದವರು ಆಡಳಿತ ಪಕ್ಷದ ನೆರಳಂತೆ ಕೆಲಸ ಮಾಡಬೇಕು ಇವರಿಗೆ ಅದರ ಪರಿಜ್ಞಾನವೇ ಇಲ್ಲ. ಇತ್ತಿಚ್ಚಿಗೆ ಎಲ್ಲಾ ಕಡೆ ಸತತವಾಗಿ ಮಳೆ ಬೀಳುತ್ತಿರುವುದರಿಂದ ರಸ್ತೆಗಳು ಗುಂಡಿ ಬೀಳುವುದು ಸರ್ವೇ ಸಾಮಾನ್ಯ ಈಗಾಗಲೇ ಮಾಲೂರು ತಾಲ್ಲೂಕಿನಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿದ್ದು. ಆದರೆ ಆ ಎಲ್ಲಾ ಕಾಮಗಾರಿಗಳ ಬಗ್ಗೆ ಮಾತನಾಡದೇ ಮಳೆ ಸಮಯವನ್ನೇ ರಾಜಕೀಯವಾಗಿ ಬಳಸಿಕೊಳ್ಳಲು ಮಾಲೂರು,ಹೊಸೂರು ಮುಖ್ಯ ರಸ್ತೆಗೆ ಎರಡು ಲಾರಿ ಜಲ್ಲಿ ಹಾಕಿಸಿ ಪ್ರಚಾರ ತೆಗೆದುಕೊಂಡು ಶಾಸಕರ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾ ಧಮ್ಮು, ತಾಕತ್ತಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಚುನಾವಣೆಗೆ ಬಾ ಎಂದು ಏಕವಚನದಲ್ಲಿ ಮಾತನಾಡುವುದು ಸರಿಯಲ್ಲ ಇಷ್ಟಕ್ಕೂ ರಾಜೀನಾಮೇ ಕೇಳುವ ನೈತಿಕತೆ ನಿಮಗಿಲ್ಲ ಶಾಸಕರ ಧಮ್ಮ, ತಾಕತ್ತು ಈ ಹಿಂದಿನ ಎರಡೂ ಚುನಾವಣೆಯಲ್ಲಿ ತೋರಿಸಿದ್ದಾರೆ. ಇನ್ನಾದರು ವಿರೋಧ ಪಕ್ಷದವರು ಅವರ ಸ್ಥಾನದ ಗೌರವವನ್ನು ಉಳಿಸಿಕೊಂಡು ಈ ರೀತಿಯಾಗಿ ಮಾತನಾಡುವುದನ್ನು ಬಿಡಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಜನತೆ ತಮಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದರು.

ಈ ವೇಳೆ ಮಾತನಾಡಿದ ಮಾಸ್ತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯನರಸಿಂಹ ಅವರು ಶಾಸಕ ಕೆವೈ ನಂಜೇಗೌಡ ಅವರು ಎರಡನೇ ಬಾರಿ ಶಾಸಕರಾಗಿ ಆಯ್ಕೆಯಾದ ಮೇಲೆ ರಾಜ್ಯ ಸರ್ಕಾರದ ಸಂಪೂರ್ಣ ಸಹಕಾರ ಪಡೆದು ತಾಲ್ಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಸುಮಾರು 2200 ಕೋಟಿ ಅನುದಾನವನ್ನು ತಂದು ತಾಲ್ಲೂಕಿನಲ್ಲಿ ಹಲವಾರು ವಿನೂತನ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಆದರ ಜೊತೆಗೆ ಇಂದು ಬಹುದಿನಗಳ ಬೇಡಿಕೆಯಾಗಿದ್ದ ಮಾಲೂರು ಪುರಸಭೆಯನ್ನು ನಗರಸಭೆಯಾನ್ನಾಗಿಸಲು ತುಂಬಾ ಶ್ರಮ ಪಟ್ಟು ಇಂದು ನಗರಸಭೆ ಎಂದು ಘೋಷಣೆ ಮಾಡಿಸಿದ್ದಾರೆ ಈಗಿರುವಾಗ ಕೆಲ ವಿರೋಧ ಪಕ್ಷದವರು ಶಾಸಕರ ಅಭಿವೃದ್ಧಿ ಕಾಮಗಾರಿಗಳನ್ನು ಸಹಿಸಲಾರದೇ ವಿರೋಧ ಪಕ್ಷ ಮಾಡಬೇಕಾದ ಕೆಲಸದ ಬಗ್ಗೆ ಅರಿವು ಇಲ್ಲದೆ ಮಳೆಯ ಸಂಧರ್ಬವನ್ನು ರಾಜಕೀಯಕ್ಕೆ ಬಳಕೆ ಮಾಡಿಕೊಂಡು ಜನಕ್ಕೆ ತಪ್ಪು ಸಂದೇಶ ಕೊಡುವುದಲ್ಲಿ ತಮ್ಮ ರಾಜಕೀಯ ಬೆಳೆ ಬೇಯಿಸಿಕೊಳ್ಳುತ್ತಿದ್ದಾರೆ. ಇನ್ನೂ ಹೊಸೂರು ಮಾಲೂರು ಮುಖ್ಯ ರಸ್ತೆಗೆ ಎರಡು ಲಾರಿ ವೆಟ್ ಮಿಕ್ಸ್ ಹಾಕಿ ಪ್ರಚಾರ ತೆಗೆದುಕೊಂಡರು ಮತ್ತೇ ಮಳೆ ಬಂದು ಎಲ್ಲಾ ಹೋಗಿದೆ ಆಯಾ ಕೆಲಸವನ್ನು ಆಯಾ ಇಲಾಖೆಯೇ ಮಾಡಬೇಕು ನೀವು ಸಾರ್ವಜನಿಕ ರಸ್ತೆಗೆ ಹೋಗಿ ಅವೈಜ್ಞಾನಿಕವಾಗಿ ಜಲ್ಲಿ ಹಾಕಿ ಬಂದು ಶಾಸಕರನ್ನು ಏಕವಚನದಲ್ಲಿ ಮಾತಾನಾಡುವುದು ಸರಿಯಲ್ಲ ಅಸಂವಿಧಾನಿಕ ಪದಬಳಕೆ ಮಾಡುವುದನ್ನು ಮೊದಲು ಬಿಟ್ಟು ತಾಲ್ಲೂಕಿನ ಅಭಿವೃದ್ಧಿಗೆ ಸಹಕರಿಸಿ ಎಂದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯರಾದ ಅಂಜನಿ ಸೋಮಣ್ಣ, ದರಕಾಸ್ತು ಸಮಿತಿ ಸದಸ್ಯ ಆನೇಪುರ ಹನುಮಂತಪ್ಪ, ಮಾಲೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಧುಸೂಧನ್, ಕೆಪಿಸಿಸಿ ಸದಸ್ಯ ಪ್ರದೀಪ್ ರೆಡ್ಡಿ, ನಾರಾಯಣ ಸ್ವಾಮಿ, ಯೋಜನಾ ಪ್ರಾಧಿಕಾರ ಅಧ್ಯಕ್ಷ ನಯೀಮ್ ಉಲ್ಲಾ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಛಲವಾದಿ ಸತೀಶ್ ರಾಜಣ್ಣ, ತಾಲ್ಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಂಜಿನಪ್ಪ, ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಅಶ್ವಥ್ ರೆಡ್ಡಿ, ಮೈಲಾಂಡಹಳ್ಳಿ ನಾರಾಯಣಸ್ವಾಮಿ, ಶಬ್ಬೀರ್, ರಾಮಮೂರ್ತಿ, ದೊಡ್ಡಿ ವಸಂತ್, ತನ್ವೀರ್ ಸೇರಿದಂತೆ ಇನ್ನಿತರ ಮುಖಂಡರು ಇದ್ದರು.