ಆರ್ಯವೈಶ್ಯ ಲೇಡೀಸ್ ಗ್ರೂಪ್ ಇಂಟರ್ನ್ಯಾಷನಲ್ ವಿಂಗ್ ವತಿಯಿಂದ ಅರ್ಥಪೂರ್ಣ ವಿನೂತನ ಮತ್ತು ವಿಶಿಷ್ಟ ಶೈಲಿಯಲ್ಲಿ  ಶಿಕ್ಷಕರ ದಿನಾಚರಣೆ

Correspondent/Chikkaballapura/Krishnappa/SM News Desk

Sep 6, 2025 - 22:10
 0  8
ಆರ್ಯವೈಶ್ಯ ಲೇಡೀಸ್ ಗ್ರೂಪ್ ಇಂಟರ್ನ್ಯಾಷನಲ್ ವಿಂಗ್ ವತಿಯಿಂದ ಅರ್ಥಪೂರ್ಣ ವಿನೂತನ ಮತ್ತು ವಿಶಿಷ್ಟ ಶೈಲಿಯಲ್ಲಿ  ಶಿಕ್ಷಕರ ದಿನಾಚರಣೆ
ಚಿತ್ರ ಸುದ್ದಿ : ವಾಸವಿ ವಿದ್ಯಾಸಂಸ್ಥೆಯಲ್ಲಿ ವಿಶಿಷ್ಟವಾಗಿ ಶಿಕ್ಷಕರ ದಿನಾಚರಣೆ ಮಾಡಿದ  ನಗರದ ಆರ್ಯವೈಶ್ಯ ಲೇಡೀಸ್ ಗ್ರೂಪ್ ಇಂಟರ್ನ್ಯಾಷನಲ್ ವಿಂಗ್

ಚಿಕ್ಕಬಳ್ಳಾಪುರ :  ನಗರದ ವಾಸವಿ ವಿದ್ಯಾಸಂಸ್ಥೆಯಲ್ಲಿ  ಆರ್ಯವೈಶ್ಯ ಲೇಡೀಸ್ ಗ್ರೂಪ್ ಇಂಟರ್ನ್ಯಾಷನಲ್ ವಿಂಗ್ ವತಿಯಿಂದ ಅರ್ಥಪೂರ್ಣ ವಿನೂತನ ಮತ್ತು ವಿಶಿಷ್ಟ ಶೈಲಿಯಲ್ಲಿ  ಶಿಕ್ಷಕರ ದಿನಾಚರಣೆ ಮಾಡಿದರು.
 ವಿದ್ಯಾಸಂಸ್ಥೆಯಲ್ಲಿ ನಡೆದ  ಶಿಕ್ಷಕರ ದಿನಾಚರಣೆ ಅಂಗವಾಗಿ ಶಾಲೆಗಳಲ್ಲಿ ವೃತ್ತಿ ಪರವಾಗಿ ಕೆಲಸ ಮಾಡುವ ಶಿಕ್ಷಕರು ಮಾತ್ರವಲ್ಲದೆ  ವಿವಿಧ ಕಡೆಗಳಲ್ಲಿನ ಟ್ಯೂಷನ್, ನೃತ್ಯ, ಟೈಲರಿಂಗ್, ವಿವಿಧ ರೀತಿಯ ಕೌಶಲ್ಯ ತರಬೇತಿ  ಕೇಂದ್ರಗಳಲ್ಲಿ ತರಬೇತಿ ಶಿಕ್ಷಕರಾಗಿ ಕೆಲಸ ಮಾಡಿದವರೂ ಸಹ ಶಿಕ್ಷಕರೇ  ಇದನ್ನು ಪರಿಗಣಿಸಿ  ಶಿಕ್ಷಕರ ದಿನಾಚರಣೆ ಅಂಗವಾಗಿ ಅವರನ್ನ  ಗುರುತಿಸಿ ಗೌರವಿಸಿ ಸನ್ಮಾನಿಸಲಾಯಿತು ಅದರಂತೆ   ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕ್ರಿಯಾಶೀಲವಾಗಿ  ಕಾರ್ಯನಿರ್ವಹಿಸಿ  ಭಾರತಿ ವಿದ್ಯಾ ಸಂಸ್ಥೆಯ ನಿವೃತ್ತ ಶಿಕ್ಷಕರಾದ, ನಳಿನಾಕ್ಷಿ, ಚಿತ್ರ ಕಲೆಯಲ್ಲಿ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಮತ್ತು ಲಿಮ್ಕಾ  ದಾಖಲೆ ಮಾಡಿದ ಶಿಕ್ಷಕಿ ಅನಿತಾ ಸಾಯಿ, ರೂಪ, ಪದ್ಮಿನಿಶ್ರೀಧರ್, ಮೌನಿಕಾ,  ಅಶ್ವಿನಿ,  ಮಣಿಕಂಠ,  ಐಶ್ವರ್ಯ ತೇಜಸ್ವಿನಿ  ಸೇರಿದಂತೆ  ವಿವಿಧ ಸಂಘ ಸಂಸ್ಥೆಗಳ ಮುಖ್ಯನ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ  25 ಕ್ಕೂ ಅಧಿಕ ಮಂದಿ ಶಿಕ್ಷಕರನ್ನು ಗೌರವಿಸಿ ಸನ್ಮಾನಿಸಲಾಯಿತು. 
 ಇದಕ್ಕೂ ಮುನ್ನ  ಆರ್ಯ ವೈಶ್ಯ ಲೇಡೀಸ್ ಗ್ರೂಪ್ ಇಂಟರ್ನ್ಯಾಷನಲ್ ಅಧ್ಯಕ್ಷರಾದ ಆಶಾರಾಣಿ ಮಾತನಾಡಿ, 
ಸುಭದ್ರ ಸಮಾಜ ಕಟ್ಟುವಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯವಾದುದು ವೃತ್ತಿಪರ ಶಿಕ್ಷಕರು ಮಾತ್ರವಲ್ಲದೆ  ಕೌಶಲ್ಯಾಧಾರಿತ ತರಬೇತಿ ಕೇಂದ್ರಗಳಲ್ಲಿ ಕೆಲಸ ಮಾಡುವ ಶಿಕ್ಷಕರಿಗೂ ವಿಶೇಷ ಸ್ಥಾನಮಾನವಿದೆ ಅವಿರತವಾಗಿ ಶ್ರಮಿಸಿ  ಈ ರೀತಿಯಾಗಿಯೂ  ವಿದ್ಯೆ ಕಲಿಸುತ್ತಿರುವ ಶಿಕ್ಷಕರ ಕಾರ್ಯವೈಖರಿಗೂ ಬೆಲೆ ಕಟ್ಟಲಾಗದು ಇಂತಹ ಶಿಕ್ಷಕರು  ಜೀವನದ ನಿಜವಾದ ಪ್ರೇರಣಾಶಕ್ತಿಗಳು ಎಂದರೆ ಅತಿಶಯೋಕ್ತಿಯಲ್ಲ  ಇಂತಹವರನ್ನು ಗುರುತಿಸಿ   ಪ್ರಸಕ್ತ ಸಾಲಿನಿಂದ  ವಾಸವಿ ವಿದ್ಯಾಸಂಸ್ಥೆಯಲ್ಲಿ     ಆರ್ಯವೈಶ್ಯ ಲೇಡೀಸ್ ಗ್ರೂಪ್ ಇಂಟರ್ನ್ಯಾಷನಲ್ ವಿಂಗ್ ಇಂತಹ ಶಿಕ್ಷಕರನ್ನು ಸಹ ಗೌರವಿಸಿ ಸನ್ಮಾನ ಮಾಡುವ ಕೆಲಸಕ್ಕೆ ಮುಂದಾಗಿದೆ  ನಿರಂತರವಾಗಿ ಇಂತಹ ಸೇವೆ ಮಾಡುವುದಾಗಿ ಆಶಾ ರಾಣಿ ಇದೇ ವೇಳೆ ಭರವಸೆ ನೀಡಿದರು.  

ಈ ಸಂದರ್ಭದಲ್ಲಿ  ವಾಸವಿ ವಿದ್ಯಾಸಂಸ್ಥೆಯಲ್ಲಿ  ಆರ್ಯವೈಶ್ಯ ಲೇಡೀಸ್ ಗ್ರೂಪ್ ಇಂಟರ್ನ್ಯಾಷನಲ್ ವಿಂಗ್ ಕಾರ್ಯದರ್ಶಿ ಸೌಮ್ಯ, ಪದಾಧಿಕಾರಿಗಳಾದ ಮೀನಾ, ಮಾನಸ ದೀಕ್ಷಿತಾ ತೇಜಸ್ವಿಸಿ ಐಶ್ವರ್ಯ ಸೇರಿದಂತೆ   ವಾಸವಿ ವಿದ್ಯಾ ಸಂಸ್ಥೆಯ ಸಹ ಶಿಕ್ಷಕರು  ಹಾಗೂ ಬೋದಕೇತರ ಸಿಬ್ಬಂದಿ ಇದ್ದರು.