ದಸರಾ ಹಬ್ಬದ ನೆಪದಲ್ಲಿ ವಾಷಿಂಗ್ ಸೆಂಟರ್‌ಗಳಲ್ಲಿ ಗ್ರಾಹಕರ ಸುಲಿಗೆ?
Correspondent/Bengaluru/SM News Desk
ಬೆಂಗಳೂರು18 : ದಸರಾ ಹಬ್ಬದ ಪ್ರಯುಕ್ತ ವಾಹನ ಪೂಜೆಗಾಗಿ ತಮ್ಮ ವಾಹನಗಳನ್ನು ಸ್ವಚ್ಛಗೊಳಿಸಲು ವಾಷಿಂಗ್ ಸೆಂಟರ್‌ಗಳಿಗೆ ತೆರಳುತ್ತಿರುವ ವಾಹನ ಮಾಲೀಕರಿಗೆ ಈ ಬಾರಿ ಬೆಲೆ ಏರಿಕೆಯ ಬಿಸಿ ತಟ್ಟಿದೆ.
ಹಬ್ಬದ ಸಂದರ್ಭದಲ್ಲಿ ವಾಹನ ತೊಳೆಯುವ ದರವನ್ನು ದುಪ್ಪಟ್ಟಿಗೂ ಹೆಚ್ಚು ಹೆಚ್ಚಿಸಿ, ವಾಹನಗಳನ್ನು ಸರಿಯಾಗಿ ಸ್ವಚ್ಛಗೊಳಿಸದೆ ಗ್ರಾಹಕರಿಂದ ದುಬಾರಿ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಹಣಕ್ಕೆ ತಕ್ಕ ಸೇವೆ ದೊರೆಯದೆ ಗ್ರಾಹಕರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಹಬ್ಬದ ಸಂಭ್ರಮದ ಸಮಯದಲ್ಲಿ ಗ್ರಾಹಕರ ಅನಿವಾರ್ಯತೆಯನ್ನು ದುರುಪಯೋಗಪಡಿಸಿಕೊಂಡು ಬೇಕಾಬಿಟ್ಟಿಯಾಗಿ ದರ ನಿಗದಿಪಡಿಸುವುದು ಮತ್ತು ಕಳಪೆ ಸೇವೆ ನೀಡುವುದು ಸರಿಯಲ್ಲ. ವಾಷಿಂಗ್ ಸೆಂಟರ್‌ಗಳ ಇಂತಹ ವರ್ತನೆಗೆ ಕಡಿವಾಣ ಹಾಕಲು ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
