ನಾವು ಗಿಡಮರಗಳೊಂದಿಗೆ ಬದುಕಬೇಕೆ ಹೊರತು ವೈಯಕ್ತಿಕ ಆಸ್ತಿ ಆಭರಣಗಳೊಂದಿಗಲ್ಲ - ಟಿ ವೈ ಜನಗೇರಿ
Correspondent/Anekal/Mallikarjun/SM News Desk
ಬೆಂಗಳೂರು,ಜೂ.22 : ನಾವು ಗಿಡಮರಗಳೊಂದಿಗೆ ಬದುಕಬೇಕೆ ಹೊರತು ವೈಯಕ್ತಿಕ ಆಸ್ತಿ ಆಭರಣಗಳೊಂದಿಗಲ್ಲ ಎಂದು ಗಸ್ತು ಅರಣ್ಯಪಾಲಕ ಟಿ ವೈ ಜನಗೇರಿ ಹೇಳಿದರು
ಸರ್ವೋದಯ ಯೋಗ ಫೌಂಡೇಶನ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಸಂಯುಕ್ತ ಆಶಯದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಸುಣವಾರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಕುರಿತು ಮಾತನಾಡಿದ ಅವರು ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಪರಿಸರವನ್ನು ಎಷ್ಟು ಸಾಧ್ಯವೊ ಅಷ್ಟು ಹಾಳು ಮಾಡಿ ಅಟ್ಟಹಾಸದಿಂದ ಮೆರೆಯುತ್ತಿದ್ದಾನೆ ನಮ್ಮ ವೈಯಕ್ತಿಕ ಸಭೆ ಸಮಾರಂಭಗಳಲ್ಲಿ ಗಿಡಗಳನ್ನು ವಿತರಿಸಿ ಅವುಗಳನ್ನು ಬೆಳೆಸಿ ಪರಿಸರವನ್ನು ರಕ್ಷಿಸಿಕೊಂಡರೆ ಮಾನವ ಕುಲಕ್ಕೆ ಒಳಿತಾಗುತ್ತದೆ ಇದರ ವನ್ಯಜೀವಿಗಳನ್ನು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ತಿಳಿಸಿದರು
ಆಚಾರ್ಯ ಶಿವಶಂಕರ ರೆಡ್ಡಿ ಮಾತನಾಡಿ ಪ್ರತಿನಿತ್ಯವೂ ಪರಿಸರ ದಿನಾಚರಣೆಯನ್ನು ಆಚರಿಸಬೇಕು ಕೇವಲ ಸಾಂಕೇತಿಕ ಆಚರಣೆ ಮಾಡಿದರೆ ಏನು ಪ್ರಯೋಜನವಾಗುವುದಿಲ್ಲ ಮನುಷ್ಯ ಪಂಚಭೂತಗಳಿಗೆ ತಲೆಬಾಗಿ ನಡೆದಾಗ ಪ್ರಕೃತಿಯು ತನ್ನ ಮುನಿಸನ್ನು ಬಿಟ್ಟು ಸದಾ ಶಾಂತಿಯಿಂದ ಎಲ್ಲವನ್ನು ದಯಪಾಲಿಸುತ್ತದೆ ಇಂದು ಆಹಾರ ಸರಪಳಿಯು ಬಹಳ ದುರ್ಬಲವಾಗಿರುವುದರಿಂದ ಅನೇಕ ಕಾಯಿಲೆಗಳು ನಮ್ಮನ್ನು ಕಾಡುತ್ತಿವೆ ಇದಕ್ಕೆಲ್ಲ ಪರಿಸರ ನಾಶವೇ ಕಾರಣವಾಗಿದೆ ಎಂದು ತಿಳಿಸಿದರು
ಸರ್ವೋದಯ ಯೋಗ ಫೌಂಡೇಶನ್ ನ ಸಂಸ್ಥಾಪಕ ಗುರುಗಳಾದ ಶ್ಯಾಮ್ ಜಿ ಮಾತನಾಡಿ ಮನುಷ್ಯ ದಿನಕ್ಕೆ ಏಳು ಕೆಜಿ ಆಮ್ಲಜನಕವನ್ನು ಬಳಕೆ ಮಾಡುತ್ತಾನೆ ಆದರೆ ಇದರ ಅರಿವಿಲ್ಲದೆ ಗಿಡಮರಗಳನ್ನು ನಾಶ ಮಾಡಿ ಬಂಗಲೆಗಳನ್ನು ಕಟ್ಟಿಕೊಂಡು ವಿಷ ಸೇವಿಸುವ ಪರಿಸ್ಥಿತಿಗೆ ಬಂದು ತಲುಪಿ ನಾನು ಶ್ರೀಮಂತನಾಗಿದ್ದೇನೆಂದು ತೋರ್ಪಡಿಕೆ ಜೀವನವನ್ನು ಮಾಡುತ್ತಿರುವುದು ಬಹಳ ಅಪರಾಧವಾಗಿದೆ ನಿಸ್ವಾರ್ಥ ಸೇವೆ ಯಾರು ಮಾಡುತ್ತಾರೋ ಅವರಿಗೆ ದೇವರು ಎಲ್ಲವನ್ನು ಕರುಣಿಸಿ ಉತ್ತಮ ಜೀವನವನ್ನು ದಯಪಾಲಿಸುತ್ತಾರೆ ಇದರಡೆಗೆ ಮನುಷ್ಯ ಸಾಗಿ ಬದುಕನ್ನು ಪಾವನಗೊಳಿಸಿಕೊಳ್ಳಬೇಕು ಮುಂದಿನ ದಿನಗಳಲ್ಲಿ ಯೋಗ ಧ್ಯಾನ ಪ್ರಾಣಾಯಾಮಗಳು ಸಮಾಜಕ್ಕೆ ಸಂಜೀವಿನಿ ಯಾಗಬಲ್ಲದು ಎಂದು ನುಡಿದರು
ಕಾರ್ಯಕ್ರಮದಲ್ಲಿ ಪ್ರೊ ವೆಂಕಟಸ್ವಾಮಿ ರೆಡ್ಡಿ ಆಚಾರ್ಯ ಮೋಹನ್ ರೆಡ್ಡಿ ಮಂಜುಳಾ ಗುರೂಜಿ ಪ್ರಕಾಶ್ ಉಪ ವಲಯ ಅರಣ್ಯ ಅಧಿಕಾರಿ ಆನೇಕಲ್ ತಾಲೂಕು
ಅಣ್ಣಿಗೇರಿ ವಲಯ ಅರಣ್ಯ ಅಧಿಕಾರಿಗಳು ಸ್ವಾಮಿಗಳಾದ ಶಿವಶಂಕರ್ ರೆಡ್ಡಿ ನಾರಾಯಣ ರೆಡ್ಡಿ ಪ್ರೊಫೆಸರ್ ಬೈರೇಗೌಡ ಪ್ರೊ ಅಂಬಿಕ ಪ್ರೊ ರಮೇಶ್ ಪ್ರೊ ಸತೀಶ್ ಪ್ರೊ ಆನಂದ್ (ಕಿಚನ್ ಕಿಂಗ್) ಪ್ರೊ ಪಂಪಾಪತಿ ಬಳಗಾರನಹಳ್ಳಿ ಗಂಗಪ್ಪ ಚಿತ್ರ ನಿರ್ದೇಶಕರಾದ ಗುಡ್ಡನಹಳ್ಳಿ ಮುನಿರಾಜಪ್ಪ ಇಚಂಗೂರು ಶಿವಣ್ಣ ರತ್ನಾಕ್ಕ ಚಿಲಿಪಿಲಿ ಸಂತೋಷ್ ಕಂಜರ ಪ್ರಕಾಶ್ ಡೋಲಾರ್ ಹನುಮಂತ ಕೋಲಾಟ ವೆಂಕಟಸ್ವಾಮಿ ರೆಡ್ಡಿ ಸುರೇಶ್ ರೆಡ್ಡಿ ಮೀನಮ್ಮ ದ್ಯಾನಿಗಳಾದ ದಿವಾಕರ್ ಸತ್ಯಪ್ರಿಯ ಮುರಳಿಕೃಷ್ಣ ಆರ್ ಪ್ರೇಮಾನಂದ್ ಪ್ರೇಮ ಶಂಕ್ರಪ್ಪ ವಿನುತಾ ವೆಂಕಟೇಶ್ ಸುಶೀಲ ವೀಣಾ ಕವಿತಾ ಪೂರ್ಣಿಮಾ ವೈಶಾಲಿ ಸಂಚನಾ ಪ್ರಕಾಶ್ ಸಿಂಚನ ಪ್ರಕಾಶ್ ಪಾಲ್ಗುಣಿ ಪ್ರಕಾಶ್ ಚಂದ್ರ ಸಿಂಧು ಕಸಾಪ ಅಧ್ಯಕ್ಷರಾದ ಆದೂರು ಪ್ರಕಾಶ್ ಅಪ್ಸರ ಆಲಿಖಾನ್ ಇದ್ದರು
