ಒಂದೇ ಕುಟುಂಬದ ಮೂವರು ಮಾನಕ್ಕೆ ಅಂಜಿ ಆತ್ಮಹತ್ಯೆ !?
Correspondent/Mysore/Crime/SM News Desk
ಟಿ.ನರಸೀಪುರ,ಜೂ.22 : ಬಂಧು-ಬಳಗ ಎಲ್ಲರೂ ಖುಷಿಯಿಂದ ಮದುವೆ ಕಾರ್ಯದಲ್ಲಿ ಭಾಗಿಯಾಗಿದ್ದರು. ಕುಟುಂಬದಲ್ಲಿ ಮದುವೆ ಸಂಭ್ರಮ ಮನೆ ಮಾಡಿತ್ತು.ಆದರೆ ಯುವಕನೊಬ್ಬನ ಬೆದರಿಕೆಗೆ ಒಂದೇ ಕುಟುಂಬದ ಮೂವರು ಆತಹತ್ಯೆ ಮಾಡಿಕೊಂಡಿದ್ದು ಮದುವೆ ಮನೆ ಸೂತಕದ ಮನೆಯಾಗಿಬಿಟ್ಟಿದೆ. ಯುವಕನ ಬೆದರಿಕೆಗೆ ತಂದೆ,ತಾಯಿ ಹಾಗೂ ಮಗಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಿಕ ಘಟನೆ ತಾಲ್ಲೂಕಿನ ಕೆಂಪಯ್ಯನಹುಂಡಿಯಲ್ಲಿ ನಡೆದಿದ್ದು, ಇಂದು ಮಧ್ಯಾಹ್ನ ಬೆಳಕಿಗೆ ಬಂದಿದೆ.ತಂದೆ ಶಿವಣ್ಣ, ತಾಯಿ ನಾಗರತ್ನ ಹಾಗೂ ಮಗಳು ರಕ್ಷತಾ ಆತ್ಮಹತ್ಯೆ ಮಾಡಿಕೊಂಡ ಒಂದೇ ಕುಟುಂಬದ ದುರ್ದೈವಿಗಳು.
ಇಷ್ಟಕ್ಕೂ ಆಗಿದ್ದೇನು?:
ರಕ್ಷತಾಗೆ ಮದುವೆ ನಿಶ್ಚಯವಾಗಿದ್ದು ಗುರುವಾರ -ಶುಕ್ರವಾರ ಹಸೆಮಣೆ ಏರಬೇಕಾಗಿತ್ತು. ಆದರೆ ಅದೇ ಗ್ರಾಮದ ಯುವಕನೊಬ್ಬ ಯುವತಿಯನ್ನು ಇಷ್ಟಪಡುತ್ತಿದ್ದ ಎನ್ನಲಾಗಿದ್ದು, ಒಂದು ವೇಳೆ ನೀನು ಬೇರೆ ಯುವಕನೊಂದಿಗೆ ಮದುವೆಯಾದರೆ ಕಲ್ಯಾಣ ಮಂಟಪದ ಬಳಿ ಬಂದು ಗಲಾಟೆ ಮಾಡುತ್ತೇನೆಂದು ಬೆದರಿಕೆ ಸಂದೇಶ ಕಳುಹಿಸಿದ್ದಾನೆ.ಇದರಿಂದ ಇಡೀ ಕುಟುಂಬವೇ ಆಂತಕದಲ್ಲಿತ್ತು. ಮದುವೆ ಮಂಟಪದಲ್ಲಿ ಗಲಾಟೆ ನಡೆದರೆ ಮಾನ ಮಾರ್ಯದೆ ಹೋಗುತ್ತದೆ ಎಂದು ಹೆದರಿದ್ದು, ನಮ ಆತಹತ್ಯೆಗೆ ಆ ಯುವಕನೇ ಕಾರಣವೆಂದು ಆರೋಪಿಸಿ ಡೆತ್‌ನೋಟ್ ಬರೆದಿಟ್ಟು ಮನೆಯಲ್ಲೇ ವಿಷ ಸೇವಿಸಿ ಮೂವರು ಕೂಡ ಆತಹತ್ಯೆ ಮಾಡಿಕೊಂಡಿದ್ದಾರೆ. ಸುದ್ದಿ ತಿಳಿದು ಟಿ.ನರಸೀಪುರ ಪಟ್ಟಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
