ಸಿಮೆಂಟ್ ರಸ್ತೆ ನಿರ್ಮಾಣ ನೆಮ್ಮದಿಯ ನಿಟ್ಟುಸಿರು ಬಿಟ್ಟ ಜನತೆ
Correspondent/Chikkaballapura/Krishnappa/SM News Desk
ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದಿಂದ ಮುಷ್ಟೂರು-ಆದಿಯೋಗಿ ಗೇಟ್ ಮಾರ್ಗ ಎಸ್ ಗೊಲ್ಲಹಳ್ಳಿ ಕಡೆ ಹೋಗುವ ಎಕ್ಕುಟ್ಟೋದ ರಸ್ತೆ ಇದೀಗ ಸಿಮೆಂಟ್ ರಸ್ತೆಯಾಗಿ ಮಾರ್ಪಡುತ್ತಿರುವುದರಿಂದಾಗಿ ಜನತೆಗೆ ತುಸು ನಿರಾಳ ತರಲಾರಂಭಿಸಿದೆ.ಕಳೆದ ಎರಡು ದಶಕಗಳಿಂದಲೂ ಸಿಮೆಂಟ ರಸ್ತೆ ಇರಲಿ ಸರಿಯಾಗಿ ಜಲ್ಲಿ ಕಾಣದ ರಸ್ತೆಯಿಂದ ಈ ಭಾಗದಲ್ಲಿ ಹಾದುಹೋಗುವ ಜನತೆ ವ್ಯವಸ್ಥೆ ವಿರುದ್ಧ ಹರಿಹಾಯ್ದಿದ್ದರು.
ಇದೀಗ ನಗರದ ವಿನಾಯಕ ಕಲ್ಯಾಣ ಮಂಟಪದಿಂದ ಮುಸ್ಟೂರು ಹಾಗೂ ಮುಷ್ಟೂರಿನ ಕೆರೆಕಟ್ಟೆವರೆವಿಗೆ ಸುಸಜ್ಜಿತವಾಗಿ ಸಿಮೆಂಟ್ ರಸ್ತೆ ನಿರ್ಮಾಣ ಆಗುತ್ತಿರುವುದರಿಂದಾಗಿ ಈ ಭಾಗದಿಂದ ಹಾದು ಹೋಗುತ್ತಿದ್ದ ಜನತೆಗೆ ನೆಮ್ಮದಿಯ ನಿಟ್ಟುಸಿರು ಬಿಟ್ಟಂತಾಗಿದೆ
ಕಳೆದ ಹತ್ತು ದಶಕಗಳಿಂದಲೂ ರಸ್ತೆ ಟಾರ್ ಕಾಣದೆ ಗುಣಿ ಬಿದ್ದ ರಸ್ತೆಗಳಲ್ಲಿ ಎದ್ದು ಬಿದ್ದು ಹೋಗಬೇಕಾದ ಅನಿವಾರ್ಯತೆ ಉಂಟಾಗಿತ್ತು ಅಲ್ಲದೆ ಸಣ್ಣ ಮಳೆ ಬಂದರೂ ಜನ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು ರಸ್ತೆಯಲ್ಲಿ ಗದ್ದೆ ಪೈರು ನಾಟಿ ಮಾಡಬೇಕು ಅಂತಹ ಪರಿಸ್ಥಿತಿ ನಿರ್ಮಾಣ ಆಗಿತ್ತು ಇದರಿಂದಾಗಿ ಜನ ಬೇಸತ್ತು ವ್ಯವಸ್ಥೆ ವಿರುದ್ಧ ಕಿಡಿಕಾರಿ ಸಾಕಷ್ಟು ಬಾರಿ ಯಾತನೆಯನ್ನು ಅನುಭವಿಸಿದ್ದರು.
ಗ್ರಾಮದ ಯುವ ಮುಖಂಡನ ಸಾಮಾಜಿಕ ಕಳಕಳಿ:
ಎಕ್ಕುಟ್ಟೋಗಿದ್ದ ಈ ರಸ್ತೆಯ ಯಾತನೆ ಕಂಡ ಮುಸ್ಟೂರು ಗ್ರಾಮದ ಯುವ ಮುಖಂಡ ಶ್ರೀಧರ್ ಎಂಬುವ ತನ್ನ ವೈಯಕ್ತಿಕ ಹಿತಾಸಕ್ತಿಯಿಂದ ರಸ್ತೆಗೆ ಒಂದಷ್ಟು ಜೆಲ್ಲಿ ಹಾಗೂ ಮಣ್ಣು ಹಾಕಿಸಿ ರಸ್ತೆಯ ಮೂಲಕ ಜನ ಸ್ವಲ್ಪ ದಿನ ಆದರೂ ಸುಧಾರಿಸಿಕೊಂಡು ಹೋಗುವಂತೆ ಮಾಡಿದ್ದ ಅಲ್ಲದೆ ಶಾಸಕ ಪ್ರದೀಪ್ ಈಶ್ವರ್ ಅವರ ಗಮನವನ್ನು ಸಹ ಸೆಳೆದು ಈ ರಸ್ತೆ ದುರಸ್ತಿ ಮಾಡಿಸಿಕೊಡಲು ಮನವಿಯನ್ನ ಸಲ್ಲಿಸಿದ್ದ ಮನವಿಯ ಮೇರೆಗೆ ಅವರು ತಮ್ಮ ಅನುದಾನದಲ್ಲಿ ರಸ್ತೆಯನ್ನು ಮಾಡಿಸಿ ಕೊಡುವ ಇಂಗಿತ ವ್ಯಕ್ತಪಡಿಸಿ ಅದರಂತೆ ಕಳೆದ 15 ದಿನಗಳಿಂದ ಈ ರಸ್ತೆ ವ್ಯವಸ್ಥಿತವಾಗಿ ಸಿಮೆಂಟ್ ರಸ್ತೆಯಾಗಿ ಮಾರ್ಪಡುತ್ತಿದೆ
ಇನ್ನು ಒಂದು ತಿಂಗಳ ವರವಿಗೆ ಸಿಮೆಂಟ್ ರಸ್ತೆಯ ಕಾಮಗಾರಿ ನಡೆಯುತ್ತಿದ್ದು ಈ ರಸ್ತೆಯ ಮೂಲಕ ಆದಿಯೋಗಿಶಿವ ವಡ್ರಪಾಳ್ಯ, ಆವಲಗುರ್ಕಿ ಆವಲಗುರ್ಕಿ ಎಸ್ ಗೊಲ್ಲಹಳ್ಳಿ ಮಾರ್ಗವಾಗಿ ಕೇತೇನಹಳ್ಳಿ ಗುಡಿಬಂಡೆಗೆ ಸಂಪರ್ಕ ಕಲ್ಪಿಸುವ ಈ ರಸ್ತೆ ಇನ್ನು ಕೆಲವೇ ದಿನಗಳಲ್ಲಿ ಸುಗಮ ಹಾದಿ ಕಲ್ಪಿಸಲಿದೆ. ರಸ್ತೆ ಗುಣಮಟ್ಟದಿಂದ ಕೂಡಿರುವಂತೆ ನೋಡಿಕೊಳ್ಳುವುದು ಅಲ್ಲದೆ ನಿಯಮಿತ ಹಾಗೂ ನಿಗದಿತ ವೇಳೆಗೆ ರಸ್ತೆ ಕಾಮಗಾರಿ ಪೂರ್ಣಗೊಳಿಸುವ ಕೊಡಬೇಕೆಂದು ಶಾಸಕ ಪ್ರದೀಪ್ ಈಶ್ವರ್ ಅವರು ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಸೂಚನೆ ನೀಡಿದ್ದು ಅದರ ಅನ್ವಯ ಸಾಮಾಜಿಕ ಬದ್ಧತೆಯುಳ್ಳ ಸಮಾಜ ಸೇವಕ ಮುಷ್ಟೂರಿನ ಶ್ರೀಧರ್ ಸಹ ಗುಣಮಟ್ಟದ ರಸ್ತೆ ಹಾಗೂ ನಿಗದಿತ ವೇಳೆಗೆ ಸಮರ್ಪಕವಾಗಿ ಮಾಡುತ್ತಿರುವುದರ ಬಗ್ಗೆ ಕಾಲ ಕಾಲಕ್ಕೆ ಶಾಸಕರಿಗೆ ಮಾಹಿತಿಯನ್ನು ನೀಡಿ ಸಾರ್ವಜನಿಕರ ಹಿತಾಸಕ್ತಿ ಬಯಸಿ ಕಾರ್ಯನಿರ್ವಹಿಸುತ್ತಿರುವುದು ಅವರ ಸಾಮಾಜಿಕ ಕಾಳಜಿ ಎತ್ತಿ ತೋರಿರಲಿದೆ
ಎಲ್ಲವೂ ಅಂದುಕೊಂಡಂತೆ ನಡೆದರೆ ಶಾಸಕ ಪ್ರದೀಪ್ ಈಶ್ವರ್ ಅವರು ನೀಡಿರುವ ಸೂಚನೆ ಪರಿಪಾಲಿಸಿದರೆ ಇನ್ನೊಂದು ತಿಂಗಳಲ್ಲಿ ಚಿಕ್ಕಬಳ್ಳಾಪುರದಿಂದ ಕೇತೇನಹಳ್ಳಿ ಕಡೆ ತೆರಳುವ ರಸ್ತೆ ಕಾಯಕಲ್ಪ ಮೋಕ್ಷ ಪ್ರಾಪ್ತಿಯಾಗಿ ಲೋಕಕಲ್ಯಾಣಕ್ಕಾಗಿ ಸಮರ್ಪಣೆಗೊಳ್ಳಲಿದೆ ಆಗ ಈ ರಸ್ತೆಯ ಮೂಲಕ ಆದಿಯೋಗಿ ಕಡೆ ಬೆಂಗಳೂರು ಸೇರಿದಂತೆ ಇತರೆಡೆ ಯಿಂದ ದಿನಂಪ್ರತಿ ಸಹಸ್ರಾರು ಸಂಖ್ಯೆಯಲ್ಲಿ ಹಾದು ಹೋಗುವ ಜನ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಲಿದೆ.
