ಕೇರಳದ ಇಬ್ಬರು ಡ್ರಗ್‌ಪೆಡ್ಲರ್‌ಗಳು ಸೇರಿದಂತೆ ಆರು ಮಂದಿ ಬಂಧಿಸಿ 9.47 ಕೋಟಿ ಮೌಲ್ಯದ ಎಂಡಿಎಂಎ ವಶ

Correspondent/Crime/Bengaluru/SM News Desk

May 5, 2026 - 16:43
 0  14
ಕೇರಳದ ಇಬ್ಬರು ಡ್ರಗ್‌ಪೆಡ್ಲರ್‌ಗಳು ಸೇರಿದಂತೆ ಆರು ಮಂದಿ ಬಂಧಿಸಿ 9.47 ಕೋಟಿ ಮೌಲ್ಯದ ಎಂಡಿಎಂಎ ವಶ

ಬೆಂಗಳೂರು,ಮೇ 5 :  ಮಾದಕ ವಸ್ತು ಮಾರಾಟ ಪ್ರಕರಣಗಳಲ್ಲಿ ಕೇರಳದ ಇಬ್ಬರು ಡ್ರಗ್‌ಪೆಡ್ಲರ್‌ಗಳು ಸೇರಿದಂತೆ ಆರು ಮಂದಿಯನ್ನು ನಗರದ ಯಶವಂತಪುರ ಮತ್ತು ನಂದಿನಿ ಲೇಔಟ್‌ ಠಾಣೆ ಪೊಲೀಸರು ಬಂಧಿಸಿ 20.10 ಕೋಟಿ ಮೌಲ್ಯದ ಗಾಂಜಾ, ಎಂಡಿಎಂಎ ವಶಪಡಿಸಿಕೊಂಡಿದ್ದಾರೆ.

ಯಶವಂತಪುರ:
ರಸ್ತೆ ಬದಿ ಮಾದಕ ವಸ್ತುಗಳು ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಯಶವಂತಪುರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಸ್ಥಳೀಯ ನಾಲ್ವರನ್ನು ಬಂಧಿಸಿ 4.87 ಕೋಟಿ ಮೌಲ್ಯದ (ಮಾರುಕಟ್ಟೆ ಮೌಲ್ಯ 9.47 ಕೋಟಿ ) 4 ಕೆಜಿ 878 ಗ್ರಾಂ ಎಂಡಿಎಂಎ, 1.62 ಲಕ್ಷ ನಗದು, 4 ಮೊಬೈಲ್‌ ಹಾಗೂ 1 ಕಾರನ್ನು ವಶಪಡಿಸಿಕೊಳ್ಳಲಾಗಿದೆ.ಮತ್ತೊಂದು ಪ್ರಕರಣದಲ್ಲಿ 3.18 ಕೋಟಿ (ಮಾರುಕಟ್ಟೆ ಮೌಲ್ಯ 6.36 ಕೋಟಿ) ಮೌಲ್ಯದ 3 ಕೆಜಿ 180 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದಾರೆ.

ನಂದಿನಿ ಲೇಔಟ್‌ ಠಾಣೆ ಪೊಲೀಸರು ಕೇರಳದ ಇಬ್ಬರನ್ನು ಬಂಧಿಸಿ 2 ಕೋಟಿ ಮೌಲ್ಯದ (ಮಾರುಕಟ್ಟೆ ಮೌಲ್ಯ 4 ಕೋಟಿ) 5 ಕೆಜಿ 700 ಗ್ರಾಂ ಹೈಡ್ರೋ ಗಾಂಜಾ ವಶಪಡಿಸಿಕೊಳ್ಳಲಾಗಿದೆ.ಈ ಆರು ಮಂದಿಯನ್ನು ವಿಚಾರಣೆಗೆ ಒಳಪಡಿಸಿದಾಗ ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ಹೊರ ರಾಜ್ಯದ ಮತ್ತು ಸ್ಥಳೀಯ ಅಪರಿಚಿತರಿಂದ ಮಾದಕ ವಸ್ತುವನ್ನು ಕಡಿಮೆ ಬೆಲೆಗೆ ಖರೀದಿಸಿಕೊಂಡು ಬಂದು ಹೆಚ್ಚಿನ ಬೆಲೆಗೆ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದುದ್ದಾಗಿ ಹೇಳಿದ್ದಾರೆ.

ಈ ಪ್ರಕರಣಗಳಲ್ಲಿ ಆರೋಪಿಗಳಿಗೆ ಮಾದಕ ವಸ್ತು ಸರಬರಾಜು ಮಾಡುತ್ತಿದ್ದವರ ಪತ್ತೆಕಾರ್ಯ ಮುಂದುವರೆದಿದ್ದು, ಪ್ರಕರಣಗಳ ತನಿಖೆ ಪ್ರಗತಿಯಲ್ಲಿದೆ. ಈ ಕಾರ್ಯಾಚರಣೆಯನ್ನು ಇನ್‌್ಸಪೆಕ್ಟರ್‌ಗಳಾದ ಮಂಜುನಾಥ್‌, ಗಣಪತಿ ಹಾಗೂ ಸಿಬ್ಬಂದಿ ತಂಡ ಕೈಗೊಂಡು ಡ್ರಗ್‌ಪೆಡ್ಲರ್‌ಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.