ಜಾತಿ ವ್ಯವಸ್ಥೆ ತಂದವರು ಬ್ರಾಹ್ಮಣರಲ್ಲ: ಸಾಹಿತಿ,ಲೇಖಕರು ಆದ ಡಾ.ಕೆ.ಪಿ.ಪುತ್ತೂರಾಯ
Correspondent/Anekal/Mallikarjun/SM News Desk
ಆನೇಕಲ್ ೦೬: ತಾಲ್ಲೂಕಿನ ಅತ್ತಿಬೆಲೆಯ ಶ್ರೀ ಗಾಯತ್ರಿ ವಿಪ್ರ ವೃಂದದ ವತಿಯಿಂದ ಹಿರಿಯ ದಂಪತಿಗಳು ಮತ್ತು ಮಹಿಳಾ ಸಾಧಕರನ್ನು ಡಾ.ಕೆ.ಪಿ ಪುತ್ತೂರಾಯರು ಸನ್ಮಾನಿಸಿದರು.
. ಆನೇಕಲ್ : ಇತರ ಸಮುದಾಯಕ್ಕೆ ಸಿಗುವ ಮಿಸಲಾತಿಯಂತಹ ಸೌಲಭ್ಯಗಳು ಬ್ರಾಹ್ಮಣ ಸಮಾಜಕ್ಕೆ ಸಿಗುತ್ತಿಲ್ಲ,ಪ್ರತಿಭೆಯಿದ್ದರು ಪ್ರತಿಭಾವಂತರು ವಂಚಿತರಾಗುತ್ತಿದ್ದಾರೆ, ಇದರಿಂದ ಪ್ರತಿಭಾವಂತರು ವಿದೇಶಗಳಿಗೆ ತೆರಳುತ್ತಿದ್ದಾರೆ ಯಾವ ದೇಶಗಳಲ್ಲಿ ಪ್ರತಿಭಾವಂತರಿಗೆ ಮನ್ನಣೆ ಇಲ್ಲವೋ ಆ ದೇಶ ಸಂಪೂರ್ಣ ಅಭಿವೃದ್ಧಿಹೊಂದಲಾರದು ಎಂದು ಸಾಹಿತಿ,ಲೇಖಕರು ಆದ ಡಾ.ಕೆ.ಪಿ.ಪುತ್ತುರಾಯರು ನುಡಿದರು.
ಅವರು ತಾಲ್ಲೂಕಿನ ಅತ್ತಿಬೆಲೆಯ ಎಸ್.ಎನ್.ದತ್ತಿ ನಿಧಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಶ್ರೀ ಗಾಯತ್ರಿ ವಿಪ್ರ ವೃಂದದ ೧೬ನೇ ವಾರ್ಷಿಕೋತ್ಸವ ಮತ್ತು ಸರ್ವ ಸದಸ್ಯರ ಸಭೆ ಹಾಗೂ ಹಿರಿಯ ದಂಪತಿಗಳು,ಸಾಧಕರನ್ನು ಗೌರವಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಪ್ರಾಚೀನ ಕಾಲದಲ್ಲಿ ಬ್ರಾಹ್ಮಣ ಸಮಾಜಕ್ಕೆ ವಿಶೇಷ ಗೌರವವಿತ್ತು.ಆದರೆ ಇಂದು ಬ್ರಾಹ್ಮಣ ಸಮಾಜ ಕಡೆಗಣಿಸಲ್ಪಟ್ಟಿದೆ.ಇದಕ್ಕೆ ಕಾರಣ ಬ್ರಾಹ್ಮಣ ಪರವಲ್ಲದ ಸರ್ಕಾರಗಳ ನೀತಿ ಮತ್ತು ಇತರರು ನಮ್ಮನ್ನು ನೋಡುವ ರೀತಿ ಇದರ ಜೊತೆಗೆ ನಾವು ಕಾರಣರಾಗಿದ್ದೇವೆ.ಸರ್ಕಾರಗಳು ನಮ್ಮನ್ನು ನೋಡುವ ರೀತಿಯಿಂದ ಇಂದು ಬ್ರಾಹ್ಮಣ ಸಮಾಜ ಕಷ್ಠದಲ್ಲಿದೆ.ಇತರರಿಗೆ ಸಿಗುವ ಮಿಸಲಾತಿಯ ಸೌಲಭ್ಯ ಬ್ರಾಹ್ಮಣ ಸಮುದಾಯಕ್ಕೆ ಸಿಗುತ್ತಿಲ್ಲ,ಇದು ಪ್ರತಿಭೆಗೆ ವಿರುದ್ಧವಾದ ನೀತಿಯಾಗಿದೆ, ಇಂತಹ ನೀತಿಗಳಿಂದ ಬ್ರಾಹ್ಮಣ ಸಮಾಜವನ್ನು ಬಲಿಹಾಕಿದ್ದೀರಿ,ಇದರಿಂದಾಗಿಯೇ ಅಮೇರಿಕದಂತಹ ದೇಶಗಳಿಗೆ ವಲಸೆಹೋಗುತ್ತಿದ್ದಾರೆ.ಪ್ರತಿಭೆಗಳಿಗೆ ಮನ್ನಣೆ ನೀಡದ ದೇಶ ಅಭಿವೃದ್ದಿಹೊಂದಲಾರದು ಎಂದು ಡಾ.ಕೆ.ಪಿ.ಪುತ್ತುರಾಯ ಖಂಡಿಸಿದರು.
ಜಾತಿ ವ್ಯವಸ್ಥೆ ತಂದವರು ಬ್ರಾಹ್ಮಣರಲ್ಲ:
ಬ್ರಾಹ್ಮಣೇತರ ಇತರೆÀ ಸಮಾಜ ತಿಳಿದಂತೆ ಜಾತಿ ವ್ಯವಸ್ಥೆ ತಂದವರು ಬ್ರಾಹ್ಮಣರಲ್ಲ, ಜಾತಿ ವ್ಯವಸ್ಥೆಗೆ ಒಳಗಾದವರು ಬ್ರಾಹ್ಮಣರು.ಚಾತುರ್ವಣಗಳಿಂದ ಜಾತಿ ಬಂದಿದೆ.ಮೊದಲು ಬಂದದ್ದು ವರ್ಣ, ನಂತರ ಜಾತಿ ಬಂದಿದೆ.ಜನ್ಮಾಧಾರಿತವಾಗಿ ಜಾತಿ ಬಂದಿಲ್ಲ,ಕರ್ಮಾಧಾರಿತವಾಗಿ ಗುಣ ಸ್ವಭಾವ ಮತ್ತು ಶಕ್ತಿಸಾಮರ್ಥ್ಯದಿಂದ ವ್ಯವಸ್ಥೆ ಜಾತಿ ಬಂದಿದೆ,ಇದರಿAದ ಸಮಾಜವನ್ನು ನಾಲ್ಕು ಭಾಗಗಳಾಗಿ ವಿಗಂಡಿಸಲಾಗಿದೆ.ವಿದ್ಯೆ,ಬುದ್ದಿ,ಪ್ರಜ್ಞಾ ಬಲದಿಂದ ಸಮಾಜವನ್ನು ಮುನ್ನಡೆಸುವವರು ಬ್ರಾಹ್ಮಣರಾದರು,ಪರಿಶ್ರಮ ಮತ್ತು ಬಾಹುಬಲದಿಂದ ಸಮಾಜವನ್ನು ರಕ್ಷಿಸುವವರು ಕ್ಷತ್ರಿಯರಾದರು,ವ್ಯಾಪಾರ, ಕೃಷಿ,ವ್ಯವಹಾರ ಜ್ಞಾನದಿಂದÀ ಸಮಾಜದ ಆರ್ಥಿಕ ಸ್ಥಿತಿಯನ್ನು ಮೇಲೆತ್ತುವವರು ವೈಶ್ಯರಾದರು. ಇದನ್ನು ಹೊರತು ಪಡಿಸಿ ಉಳಿದವರು ಶೂದ್ರರಾದರು. ವೇದವ್ಯಾಸ,ವಾಲ್ಮೀಕಿ,ಶ್ರೀಕೃಷ್ಣ ಮುಂತಾದವರನ್ನು ಪೂಜಿಸುವವರು ಬ್ರಾಹ್ಮಣರು ಆದುದರಿಂದ ಬ್ರಾಹ್ಮಣರು ಜಾತಿವಾದಿಗಳಲ್ಲ ಎಂದು ಷ್ಪಷ್ಟಪಡಿಸಿದರು.
ಇದೇ ಸಂದರ್ಭದಲ್ಲಿ ಶ್ರೀಗಾಯತ್ರಿ ವಿಪ್ರವೃಂದದ ವತಿಯಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೀಜಿಸಲಾಗಿತ್ತು. ನೂತನ ದಿನದರ್ಶಿಕೆಯನ್ನು ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷ ಪಿ.ಕೃಷ್ಣಮೂರ್ತಿ,ಉಪಾಧ್ಯಕ್ಷೆ ನಾಗವಲ್ಲಿ ಗಿರಿಧರ್,ಕಾರ್ಯದರ್ಶಿ ಗುರುರಾಜ್ ಕಳ್ಳಿಹಾಳ್,ಖಜಾಂಚಿ ದತ್ತಾತ್ರಯ ನಾಡಿಗೇರ್,ಶಶಿಧರ್,ಕುಮಾರಸ್ವಾಮಿ.ಎನ್,ಸುಧೀರ್ ಅತ್ರಿ, ನಾಗೇಂದ್ರ ಡಿ.ಎಸ್,ಹನುಂತರಾವ್,ಕಿರಣ್,ಕೃಷ್ಣಮೂರ್ತಿ.ಎ.ಆರ್,ಗಿರೀಶ್,ಸತೀಶ.ಕಾರAತ,ವೆAಕಟೇಶ ಕುಲಕರ್ಣಿ,ವಿಜಯಕುಮಾರ, ನಾರಾಯಣ ಕೆ, ಜಗದೀಶ ಮಶಾಲಕರ್,ಅಂಬಿಕ,ವಿನುತಾ,ಮAಜುಳ, ವಿಮಲ ಸಂಘದ ವಿವಿಧ ಸ್ಥರದ ಪದಾಧಿಕಾರಿಗಳು ಭಾಗವಹಿಸಿದ್ದರು.
