ಮಾಲೂರು ಮುಖ್ಯರಸ್ತೆಯಲ್ಲಿ ತುಂಬಿ ಹರಿಯುತಿರುವ ಚರಂಡಿ ಕೊಳಚೆ ನೀರು ಸಾರ್ವಜನಿಕರ ಓಡಾಟಕ್ಕೆ ತುಂಬ ತೊoದರೆ

Correspondent/Srinath/Malur/SM News Desk

Mar 11, 2026 - 08:28
 0  57
ಮಾಲೂರು ಮುಖ್ಯರಸ್ತೆಯಲ್ಲಿ ತುಂಬಿ ಹರಿಯುತಿರುವ ಚರಂಡಿ ಕೊಳಚೆ ನೀರು ಸಾರ್ವಜನಿಕರ ಓಡಾಟಕ್ಕೆ ತುಂಬ ತೊoದರೆ

ಮಾಲೂರು : ನಗರದ ರಾಜೀವ್ ನಗರ ದಿಂದ ಮಾಲೂರುಗೆ ಹೋಗುವ ಮುಖ್ಯರಸ್ತೆಯಲ್ಲಿ ತುಂಬಿ ಹರಿಯುತಿರುವ ಚರಂಡಿ ಕೊಳಚೆ ನೀರು ಸಾರ್ವಜನಿಕರ ಓಡಾಟಕ್ಕೆ ತುಂಬ ತೊoದರೆಯಾಗಿದೆ.ನಗರಸಭೆಯಲ್ಲಿ ಹಿಂದುಳಿದ ನಗರಗಳನ್ನುಹಿಂದೆ ಬಿಟ್ಟು ಸ್ವಚ್ಚತೆಯ ಕಾರ್ಯವೈಕರಿ  ಮರೀಚಿಕೆಯಾಗಿದೆ.ಕೇವಲ ಮುಂದುವರೆದ ವಾರ್ಡ್ ಗಳು ತಾಲ್ಲೂಕು ಕಚೇರಿ ಸುತ್ತಮುತ್ತ ಹಾಗೂ ಬಸ್ ನಿಲ್ದಾಣದ ಅಕ್ಕ ಪಕ್ಕದ ರಸ್ತೆಗಳಿಗೆ ಮಾತ್ರ ಸೀಮಿತ ವಾಗಿದೆ.      

ಮಾಲೂರು ನಗರವು ದಿನ ದಿಂದ ದಿನಕ್ಕೆ ಬೆಳೆಯುತಿದ್ದು ಜನಸಂಖ್ಯೆಯು ಹೆಚ್ಚಾಗುತಿದೆ ಸರ್ಕಾರ ಅರೋಗ್ಯ, ನೈರ್ಮಲ್ಯ ಮೂಲ ಭೂತ ಸೌಕರ್ಯಗಳ ಅಭಿವೃದ್ಧಿಗೆ ಕೋಟ್ಯಂತರ ರೂಪಾಯಿಗಳ  ಅನುದಾನ ಕೊಡುತಿದ್ದರು ಅಧಿಕಾರಿಗಳು ಸರಿಯಾಗಿ ಸದ್ಭಾಳಿಕೆ ಮಾಡುತಿಲ್ಲ ಎಂದು ನಗರ ವಾಸಿಗಳ ಮಾತಾಗಿದೆ. ನಗರ ಸಭೆಯಲ್ಲಿ ಹಿಂದುಳಿದ ನಗರಗಳಾದ ಸಮತಾನಗರ,ಇಂದ್ರನಗರ, ಹನುಮoತನಗರ, ರಾಜೀವ್ ನಗರಗಳ ವಾಸಿಗಳ ಪರಿಸ್ಥಿತಿ ಹೇಳಲು ತೀರದ ಚರಂಡಿಗಳು ತುಂಬಿ ತ್ಯಾಜ್ಯ ನೀರು ನಿಂತು ಸೊಳ್ಳೆ,ಜಿರಳೆಗಳ ಉತ್ಪತಿ ಯಾಗಿ ಅವುಗಳ ಕಾಟ ತಾಳಲಾಗದೆ ಆಗಿದೆ. ಕೆಲವು ಕಡೆ ಕೊಳಚೆ ನೀರು ರಸ್ತೆಯಲ್ಲಿ ಹರಿಯುತಿದೆ ಇತ್ತೀಚೆಗೆ ಚರಂಡಿಗಳ ಸ್ವಚ್ಚತೆ ಮಾಡುವ ನಗರ ಸಭೆ ಸಿಬ್ಬಂದಿಯೇ ಕಾಣುತಿಲ್ಲ ಯಾರದು ಮಂತ್ರಿಗಳು, ಎಂ ಎಲ್ ಎ ಬರ್ತಾರೆ ಅಂದ್ರೆ ಮುಖ್ಯರಸ್ತೆಯನ್ನ ಮಾತ್ರ ಶೃಂಗಾರ ಮಾಡತ್ತಾರೆ,ಊರ ಒಗೆ ಮಾತ್ರ ಗಬ್ಬು ನಾಥ ಬಿರುತಿದೆ.      

ಹನುಮoತ ನಗರ ಮತ್ತು ರಾಜೀವ್ ನಗರಗಳ ಒಳಗೆ ಚರಂಡಿಗಳು ಕ್ಲಿನಿಂಗ್ ಮಾಡಿ ಸುಮಾರು ದಿನಗಳೇ ಕಳೆದಿದೆ ಕೆಲವು ಕಡೆ ಚರಂಡಿಗಳಲ್ಲಿ ಕಸ ಕಡ್ಡಿ,ಮಣ್ಣು ತುಂಬಿ ಮುಚ್ಚಿ ಹೋಗಿದೆ ಮಾಲೂರು -ಲಿಂಗಾಪುರ ಮುಖ್ಯ ರಸ್ತೆ ರಾಜೀವ್ ನಗರದವರಿಗೆ ಕೆಲವು ಕಡೆ ನೀರಿನ ಪೈಪು ಡ್ಯಾಮೇಜ್ಆಗಿ ನೀರು ಪೋಲಾ ಗುತಿದೆ ಚರಂಡಿಗಳಲ್ಲಿ  ಕೊಳಚೆ ನೀರು ನಿoತ್ತು ರಸ್ತೆಯಲ್ಲಿ ಹರಿದು ಜನರು ಮತ್ತು ವಾಹನಗಳು ಓಡಾಡಲು ತುಂಬ ಅನಾನುಕೂಲ ವಾಗಿದೆ ಚುನಾವಯಿತ ಸದಸ್ಯರ ಅವಧಿ ಮುಗಿದು ಅಧಿಕಾರ ಇಲ್ಲದ ಕಾರಣ ಸಂಬಂಧ ಪಟ್ಟ ಅಧಿಕಾರಿಗಳು ನಗರ ಸಭೆ ನೂತನ ಪೌರಾಯುಕ್ತರಾದ ಮಹದೇವ್ ಎಲ್ಲಾ ವಾರ್ಡಗಳಿಗೆ ಭೇಟಿ ನೀಡಿ ನಗರದಎಲ್ಲಾ ವಾರ್ಡ್ ಳ ಒಳಗೆ ಹೋಗಿ ಸ್ವಚ್ಚತೆ ನೀರು ಹಾಗೂ ಮೂಲಭೂತ ಸೌಕರ್ಯಗಳು ಸಾರ್ ಜನಿಕರ ಸಮಸ್ಯೆಗಳನ್ನು ಆಲಿಸಿ ಸಮಸ್ಯಯನ್ನು ಪರಿಶೀಲನೆ ಮಾಡಿ  ಬಗೆ ಹರಿಸಬೇಕಿದೆ