ಸಂಸದ ಸ್ಥಾನದಲ್ಲಿರುವವರು ಜವಾಬ್ದಾರಿಯುತವಾಗಿ ಮಾತನಾಡಲಿ...ಸಮಿತಿ ಸದಸ್ಯ ಆಜಂ‌ಪಾಷ

Correspondent/Chikkaballapura/Krishnappa/SM News Desk

Oct 10, 2025 - 08:07
 0  68
ಸಂಸದ ಸ್ಥಾನದಲ್ಲಿರುವವರು ಜವಾಬ್ದಾರಿಯುತವಾಗಿ ಮಾತನಾಡಲಿ...ಸಮಿತಿ ಸದಸ್ಯ ಆಜಂ‌ಪಾಷ

ಚಿಕ್ಕಬಳ್ಳಾಪುರ :  ಶಾಸಕ ಪ್ರದೀಪ್ ಈಶ್ವರ್  ಗ್ರಾಮೀಣ ಹಾಗೂ ನಗರ  ಪ್ರದೇಶದ ರಸ್ತೆಗಳ‌ ಅಭಿವೃದ್ದಿ ಮತ್ತು ಮೂಲಭೂತ ಸೌಲಭ್ಯಗಳಿಗೆ ಒತ್ತು ನೀಡುತ್ತಿರುವ ಹಿನ್ನೆಲೆಯಲ್ಲಿ ಕ್ಷೇತ್ರಾಧ್ಯಂತ ಶಾಸಕರ ಜನಪ್ರಿಯತೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಶಾಸಕ ಪ್ರದೀಪ್ ಈಶ್ವರ ಅವರ ಬಗ್ಗೆ  ಸಂಸದ ಡಾ ಕೆ ಸುಧಾಕರ್ ಹತಾಶರಾಗಿ  ಸತ್ತವರು ಫೋಟೋ ಹಾಕಿಸಿಕೊಳ್ಳುವುದು  ಎಂಬ ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಿರುವುದು  ಅವರಿಗೆ ಶೋಭೆ ತರತಕ್ಕದ್ದಲ್ಲ ಎಂದು ಜಿಲ್ಲಾ ಪ್ರಧಾನಮಂತ್ರಿ 15ಅಂಶಗಳ  ಸಮಿತಿ ಸದಸ್ಯ ಆಜಂ‌ಪಾಷ ಸಂಸದ ಡಾ. ಕೆ ಸುಧಾಕರ್ ಕಾರ್ಯವೈಖರಿ ಬಗ್ಗೆ ಕಿಡಿಕಾಡಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು 2013 ರಿಂದ 2023 ರ ವರೆಗೆ ಡಾ ಕೆ ಸುಧಾಕರ್ ರವರು ಶಾಸಕರಾಗಿದ್ದ ವೇಳೆ ನಗರದ ಅನೇಕ ಪ್ರತಿಷ್ಠಿತ ಬಡಾವಣೆಗಳಲ್ಲಿ ಅನೇಕ ರಸ್ತೆಗಳು ತೀವ್ರತರನಾಗಿ ಹದಗೆಟ್ಟಿದ್ದದ್ದು ಎಲ್ಲರಿಗೂ ತಿಳಿದ ವಿಷಯ ಹದಗೆಟ್ಟ ರಸ್ತೆಗಳ ಸರಿಪಡಿಸುವಂತೆ  ಸದರಿ ಬಡಾವಣೆ ಸಾರ್ವಜನಿಕರು ರಸ್ತೆಗಳ ಸಮಸ್ಯೆ ಬಗ್ಗೆ ಶಾಸಕ ಪ್ರದೀಪ್ ಈಶ್ವರ್ ಅವರ  ಗಮನಕ್ಕೆ ತಂದಾಗ ಶಾಸಕರು ಕೂಡಲೇ ಸ್ಪಂದಿಸಿ ಪ್ರಾಶಾಂತನಗರ ಹಾಗೂ ಇತರೆ ಬಡಾವಣೆಗಳಿಗೆ ರಸ್ತೆ ಅಭಿವೃದ್ಧಿ ಮಾಡಿಸಿರುವುದು ಅಭಿವೃದ್ಧಿಯ ಪ್ರತಿಕವಾಗಿ ಅಭಿಮಾನಿಗಳು ಶಾಸಕರ ಫೋಟೋ ಹಾಕಿಸಿದ್ದರೆ ಇದಕ್ಕೆ ಸತ್ತವರು ಫೋಟೋ ಹಾಕಿಸಿಕೊಳ್ಳುವುದು ಎಂದು ಸಂಸದ ಸುಧಾಕರ್ ಅವರು  ಹೇಳಿಕೆ ನೀಡುತ್ತಾರೆ

ಎಂತಹ ವಿಪರ್ಯಾಸ  ಇದೇ ಸಂಸದರು  ಶಾಸಕ, ಸಚಿವರಾಗಿದ್ದ ಕಾಲಾವಧಿಯಲ್ಲಿ ಅಭಿವೃದ್ಧಿ ಏನಾದ್ರು ಆಗಿದ್ರೆ   ಬರೀ ಶಂಕುಸ್ಥಾಪನೆ ದೀಪ ಬೆಳಗಿದ್ದೆ ಬೇರೇನು ಅಭಿವೃದ್ಧಿ ಆಗಿಲ್ಲ  ಇನ್ನು ರಸ್ತೆಗಳ ಕಥೆಯಂತೂ  ಹೇಳಲಾಗದ ಸ್ಥಿತಿ ಇತ್ತು. ಇಂತಹ ರಸ್ತೆಗಳನ್ನು ಹಂತಹಂತವಾಗಿ  ಅಭಿವೃದ್ಧಿಪಡಿಸುತ್ತಿರುವ ಶಾಸಕರ ಜನಪ್ರಿಯ  ಸಹಿಸದೆ ಅಸಂಬದ್ಧವಾದ  ಹೇಳಿಕೆಗಳನ್ನು ನೀಡುವ ಮೂಲಕ  ಸಂಸದ ಸುಧಾಕರ್ ಅವರು  ತನ್ನ ವರ್ಚಸ್ಸು ಹೆಚ್ಚಿಸಿಕೊಳ್ಳಲು ಮುಂದಾಗಿದ್ದಾರೆ  ಸಂಸದ ಸ್ಥಾನದಲ್ಲಿರುವ ಅವರು ಜವಾಬ್ದಾರಿಯುತವಾಗಿ ಮಾತನಾಡಲಿ  

ರಾಜಕಾರಣ ಮಾಡುವುದು ಎಲ್ಲರಿಗೂ ಗೊತ್ತಿದೆ  ಜನರಿಂದ ಶಬ್ಬಾಸ್ ಗಿಟ್ಟಿಸಿಕೊಳ್ಳುವುದಲ್ಲ  ಕೆಲಸ ಮಾಡಿ ತೋರಿಸುವುದು ಮುಖ್ಯ  ಎಂಬುದನ್ನ ಸಂಸದರು ಅರಿಯಲಿ  ಎಂದು ಪ್ರಕಟಣೆಯಲ್ಲಿ ತಿಳಿಸಿರುವ ಅವರು  ಪ್ರದೀಪ್ ಈಶ್ವರ ಅವರು ಕೈಗೊಂಡ ಅಭಿವೃದ್ಧಿ ಕೆಲಸಗಳಿಗೆ ಜನ  ಮೆಚ್ಚಿ   ಬಡಾವಣೆಗಳ ಸಾರ್ವಜನಿಕರು ಶಾಸಕರ ಚಿತ್ರ ಇರುವ ನಾಮಫಲಕಗಳನ್ನು ಹಾಕಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ  

ಇದರ ಬಗ್ಗೆ ಸಂಸದ ಸುಧಾಕರ್ ರವರು ಟೀಕಿಸುವ ಯಾವ ನೈತಿಕತೆ ಇದೆ ಎಂದು ಪ್ರಶ್ನೆ ಮಾಡಿ ಶಾಸಕ ಪ್ರದೀಪ್ ಈಶ್ವರ್ ರವರು “ನಮ್ಮೂರಿಗೆ  ನಮ್ಮ ಶಾಸಕ” ಕಾರ್ಯಕ್ರಮದಡಿ ಕ್ಷೇತ್ರದ 150ಕ್ಕೂ ಹೆಚ್ಚು ಹಳ್ಳಿಗಳಿಗೆ ಭೇಟಿ ನೀಡಿ ಅಲ್ಲಿನ‌ ಸಮಸ್ಯೆಗಳನ್ನು ಸ್ಥಳದಲ್ಲೆ ಪರಿಹರಿಸಿ ಹಾಗೂ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿನ ರಸ್ತೆಗಳನ್ನು  ದುರಸ್ಥಿ ಮಾಡಿಸುತ್ತಾ  ಬಡಾವಣೆಗಳ ರಸ್ತೆಗಳಿಗೆ ಕಾಯಕಲ್ಪ ನೀಡುತ್ತಿರುವುದರಂದ ಶಾಸಕರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ ಅಭಿವೃದ್ಧಿ ವಿಚಾರವಾಗಿ ಮಾಡುತ್ತಿರುವ ಕೆಲಸಗಳಿಗೆ ಮನ್ನಣೆ ಸಿಗುವಂತ ಹೇಳಿಕೆಗಳನ್ನು ನೀಡಿದರೆ ಸಂಸದರ ವರ್ಚಸ್ಸು  ಹೆಚ್ಚುತ್ತದೆ ಅದು ಬಿಟ್ಟು ಶಾಸಕರ ಕೆಲಸ ಕಾರ್ಯಗಳ ಬಗ್ಗೆ  ಈ ರೀತಿಯ ಹತಾಶೆ ಹೇಳಿಕೆಗಳನ್ನು ನೀಡುವುದು ನಿಲ್ಲಿಸಲಿ ಎಂದು ಪ್ರಕಟಣೆಯಲ್ಲಿ ಸದಸ್ಯ ಹಾಗೂ ಯುವ ಮುಖಂಡ ಆಜಂ‌ಪಾಷ ತಿಳಿಸಿದ್ದಾರೆ.