ದಾವಣಗೆರೆ ದಕ್ಷಿಣ ವಿಧಾನಸಭಾಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಯುವ ಅಭ್ಯರ್ಥಿ ಸಮರ್ಥ್ ಶಾಮನೂರು ಯುವ ಕಾಂಗ್ರೆಸ್ ನೇತೃತ್ವದಲ್ಲಿ ಪ್ರಚಾರ
Correspondent/Political/Davangere/SM News Desk
ದಾವಣಗೆರೆ ಏ.2: ದಕ್ಷಿಣ ವಿಧಾನಸಭಾಕ್ಷೇತ್ರದ ಉಪಚುನಾವಣೆಯ ಸಂಬಂಧ ಯುವ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳ , ಉಸ್ತುವಾರಿಗಳ, ಸಭೆಯು ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ, ಕರ್ನಾಟಕ ರಾಜ್ಯ ಉಸ್ತುವಾರಿ ಶ್ರೀ ರಣದೀಪ್ ಸಿಂಗ್ ಸುರ್ಜೆವಾಲ, ಎಐಸಿಸಿ ಕಾರ್ಯದರ್ಶಿ ಅಭಿಷೇಕ ದತ್,ಅವರ ನೇತೃತ್ವದಲ್ಲಿ ಮತ್ತು ರಾಜ್ಯ ಕಾಂಗ್ರೆಸ್ ಕಾರ್ಯಾಧ್ಯಕ್ಷರಾದ , ಜಿಸಿ ಚಂದ್ರಶೇಖರ್ ಮತ್ತು ಶ್ರೀ ಮಂಜುನಾಥ ಭಂಡಾರಿ ಮತ್ತು ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷರಾದ ಶ್ರೀ ಮಂಜುನಾಥ್ ಗೌಡರವರ ಮುಂದಾಳತ್ವದಲ್ಲಿ, ರಾಜ್ಯ ಉಪಾಧ್ಯಕ್ಷರುಗಳಾದ ಚೈತ್ರ ವಿ ಗಿರೀಶ್ , ದಿವ್ಯ ಆರ್ ಕೆ, ಅಬ್ದುಲ್ ದೇಸಾಯಿ, ಕಲೀಮ್, ದೀಪಕ್ ಗೌಡ, ಬಸವರಾಜ್ , ರವರುಗಳ ನೇತೃತ್ವದಲ್ಲಿ ನಡೆಯಿತು.
ಈ ಬಾರಿ ಕಾಂಗ್ರೆಸ್ ಪಕ್ಷವು ಸಮರ್ಥ ಯುವ ಅಭ್ಯರ್ಥಿ ಸಮರ್ಥ್ ಶಾಮನೂರು ಅವರನ್ನು ಕಣಕ್ಕಿಳಿಸಿದ್ದು, ಯುವ ಕಾಂಗ್ರೆಸ್ ಪದಾಧಿಕಾರಿಗಳು ಕಾಯಾ ವಾಚಾ ಮನಸಾ ಶ್ರಮವಹಿಸಿ ಪಕ್ಷದ ಅಭ್ಯರ್ಥಿಯನ್ನು ಜಯಶೀಲರನ್ನಾಗಿಸಲು ಯುವ ಕಾಂಗ್ರೆಸ್ ಪ್ರಚಾರದ ಕಾರ್ಯವೈಕರಿ ಯೋಜನೆಗಳನ್ನು ರೂಪಿಸಲಾಯಿತು
