ಪದ್ಮನಾಭನಗರ ಕ್ಷೇತ್ರ ಇಟ್ಟುಮಡು ವಾರ್ಡ್ನಲ್ಲಿ ನಡೆದ ರಂಗೋಲಿ ಸ್ಪರ್ಧೆ
Correspondent/Bengaluru/SM News Desk
ಬೆಂಗಳೂರು,ಜ.16 : ಪದ್ಮನಾಭನಗರ ಕ್ಷೇತ್ರ ಇಟ್ಟುಮಡು ವಾರ್ಡ್ನಲ್ಲಿ ನಡೆದ ರಂಗೋಲಿ ಸ್ಪರ್ಧೆಯನ್ನು ಮಹಿಳಾ ಕಾಂಗ್ರೆಸ್ ರಾಜ್ಯ ಅಧ್ಯಕ್ಷರಾದ ಸೌಮ್ಯ ರೆಡ್ಡಿರವರು, ಮಾಜಿ ಸಂಸದರು ಎಲ್ ಆರ್ ಶಿವರಾಮೇಗೌಡರು ಹಾಗೂ ಕೆಪಿಸಿಸಿ ಸಂಯೋಜಕರಾದ ಸಂಜಯಗೌಡರವರು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಎಂವಿ ಪ್ರಸಾದ್ ಬಾಬು ಅವರು,ಕರ್ನಾಟಕ ಟಿವಿ ಹಾಗೂ ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಚೈತ್ರ ವಿ ಗಿರೀಶ್ ಕುಮಾರ್ ಆಯೋಜನೆಯಲ್ಲಿ ಕರ್ನಾಟಕ ಟಿವಿಯ ಮುಖ್ಯಸ್ಥರಾದ ಶಿವಕುಮಾರ್, ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸವಿತಾ ಜೆ, ಡಿಸಿಸಿ ಪ್ರಧಾನ ಕಾರ್ಯದರ್ಶಿ ಜಗದೀಶ್, ಚಿಕಲ್ಸಂದ್ರ ವಾರ್ಡ್ ಅಧ್ಯಕ್ಷರಾದ ಸಂತೋಷ್ ಕುಮಾರ್, ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಚೇತನ್ ನಾಯಕ್, ಇಟ್ಟ ಮಡು ವಾರ್ಡ್ ಮುಖಂಡರಾದ ಪ್ರಸಾದ್, ತಿಮ್ಮೇಗೌಡ, ರಮೇಶ್, ಜೋಗಪ್ಪ , ಸ್ವಾಮಿ ಗೌಡ, ರಾಮಕೃಷ್ಣೇಗೌಡ, ಅರುಣ್ ಕುಮಾರ್, ಶಂಕರ್ ಎಚ್ , ಹೊಸಕೆರೆಹಳ್ಳಿ ನಾಗರಿಕ ಹಿತ ರಕ್ಷಣಾ ವೇದಿಕೆ ಅಧ್ಯಕ್ಷರಾದ ಶ್ರೀನಿವಾಸ್ , ಬನಶಂಕರಿ ಮುಖಂಡರಾದ ಚಾಂದ್ ಪಾಷಾ, ಬನಶಂಕರಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಮಾಲಾಶ್ರೀ, ಧರ್ಮಗಿರಿ ವಾರ್ಡ್ ಮುಖಂಡರಾದ ಕಾಂತಮ್ಮ, ಬನಶಂಕರಿ ಬ್ಲಾಕ್ ಸಾಮಾಜಿಕ ಮಾಧ್ಯಮ ಅಧ್ಯಕ್ಷರಾದ ಸರ್ದಾರ್ ಪಾಶ, ಸಾಮಾಜಿಕ ಮಾಧ್ಯಮ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ತಿರುಮಲೇಶ್, ಮಧುಸೂದನ್, ಭಾರತಿ ನಾರಾಯಣಸ್ವಾಮಿ, ಕರ್ನಾಟಕ ಟಿವಿ ಸಿಬ್ಬಂದಿ, ಇಟ್ಟಮಡು ಮಹಿಳಾ ಮುಖಂಡರು, ನಾಗೇಂದ್ರ ನಾಗರಾಜ್, ನೂರಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು,
ತಾಲೂಕ್, ಜಿಲ್ಲಾ ಮಟ್ಟ ಹಾಗೂ ಬೆಂಗಳೂರಿನಲ್ಲಿ ಸಂಕ್ರಾಂತಿ ರಂಗೋಲಿ ಸ್ಪರ್ಧೆ
ಅರ್ಹತಾ ಸುತ್ತಿನಿಂದ ಗ್ರ್ಯಾಂಡ್ ಫಿನಾಲೆ ತನಕ ಪ್ರತೀ ಹಂತದಲ್ಲೂ ನಗದು ಬಹುಮಾನ
ಅರ್ಹತಾ ಸುತ್ತಿನ ಮೊದಲ ಬಹುಮಾನ ₹5000
ಅರ್ಹತಾ ಸುತ್ತಿನ ದ್ವಿತೀಯ ಬಹುಮಾನ ₹3000
ಅರ್ಹತಾ ಸುತ್ತಿನ ತೃತೀಯ ಬಹುಮಾನ ₹2000
