ತಪ್ಪಿಸಿಕೊಂಡಿದ್ದ 2 ವರ್ಷದ ಮಗು ಪೋಷಕರ ಮಡಿಲಿಗೆ ಸೇರಿಸಿದ ಹೊಯ್ಸಳ ಗಿರಿನಗರ ಪೊಲೀಸರು

Correspondent/Crime/Bengaluru/SM News Desk

Jan 17, 2026 - 16:59
 0  113
ತಪ್ಪಿಸಿಕೊಂಡಿದ್ದ 2 ವರ್ಷದ ಮಗು ಪೋಷಕರ ಮಡಿಲಿಗೆ ಸೇರಿಸಿದ ಹೊಯ್ಸಳ ಗಿರಿನಗರ ಪೊಲೀಸರು

ಬೆಂಗಳೂರು,ಜ.17: ಎರಡು ವರ್ಷದ ಮಗುವನ್ನು ಹೊಯ್ಸಳ ಪೊಲೀಸರು ಹಾಗೂ ಸಿಎಫ್‌ಎಸ್‌‍ ತಂಡ ರಕ್ಷಿಸಿ ಸುರಕ್ಷಿತವಾಗಿ ಪೋಷಕರಿಗೆ ಹಸ್ತಾಂತರಿಸಿದ್ದಾರೆ.ಜ.14 ರಂದು ಬೆಳಗ್ಗೆ 10.50 ರ ಸುಮಾರಿನಲ್ಲಿ ಗಿರಿನಗರ ಪೊಲೀಸ್‌‍ ಠಾಣೆ ವ್ಯಾಪ್ತಿಯ ಅತ್ತಿಗುಪ್ಪೆ ಹೊಸಕೆರೇಹಳ್ಳಿ ಫ್ಲೈಓವರ್‌ ಸಮೀಪದ ರಸ್ತೆಯಲ್ಲಿ ಎರಡು ವರ್ಷದ ಮಗು ಒಂಟಿಯಾಗಿ ಹೋಗುತ್ತಿತ್ತು.

ಮಗುವನ್ನು ಗಮನಿಸಿದ ಸಾರ್ವಜನಿಕರೊಬ್ಬರು ತಕ್ಷಣ ತುರ್ತು ಸಹಾಯವಾಣಿ ನಮ 112ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.ಕೂಡಲೇ ಕಾರ್ಯಪ್ರವೃತ್ತರಾದ ನಮ 112 ಸಿಬ್ಬಂದಿಯವರು ಗಿರಿನಗರ ಪೊಲೀಸ್‌‍ ಠಾಣೆಯ ಹೊಯ್ಸಳ ಕರ್ತವ್ಯದಲ್ಲಿದ್ದ ಹೆಡ್‌ ಕಾನ್ಸ್ ಸ್ಟೇಬಲ್‌ ಮಾರುತಿ ಹಾಗೂ ತಂಡದವರಿಗೆ ಮಾಹಿತಿ ರವಾನಿಸಿದ್ದಾರೆ.

ಹೊಯ್ಸಳ ಸಿಬ್ಬಂದಿ ಕೇವಲ ನಾಲ್ಕು ನಿಮಿಷದೊಳಗೆ ಸ್ಥಳಕ್ಕೆ ಹೋಗಿ ಮಗುವನ್ನು ಸುರಕ್ಷಿತವಾಗಿ ರಕ್ಷಿಸಿ, ಮಗುವಿನ ಪೋಷಕರ ಬಗ್ಗೆ ಸುತ್ತಮುತ್ತ ವಿಚಾರಿಸಿದ್ದಾರೆ. ನಂತರ ಸಿಎಫ್‌ಎಸ್‌‍ ತಂಡ ಹಾಗೂ ಹೊಯ್ಸಳ ಪೊಲೀಸರ ಜಂಟಿ ಪ್ರಯತ್ನದಿಂದ ಮಗುವಿನ ಪೋಷಕರನ್ನು ಪತ್ತೆ ಮಾಡಿ ಸುರಕ್ಷಿತವಾಗಿ ಅವರಿಗೆ ಹಸ್ತಾಂತರಿಸಿದ್ದಾರೆ.