ಶೇಕಡ 50ರಷ್ಟು ಮಹಿಳಾ ಮೀಸಲಾತಿ ನೀಡಿರುವುದು ಸಂತೋಷ ತಂದಿದೆ - ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಚೈತ್ರ ವಿ ಗಿರೀಶ್ ಕುಮಾರ್

Correspondent/Benhaluru/GBA/SM News Desk

Jan 11, 2026 - 09:07
Jan 11, 2026 - 09:12
 0  107
ಶೇಕಡ 50ರಷ್ಟು ಮಹಿಳಾ ಮೀಸಲಾತಿ ನೀಡಿರುವುದು ಸಂತೋಷ ತಂದಿದೆ - ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಚೈತ್ರ ವಿ ಗಿರೀಶ್ ಕುಮಾರ್
ಶೇಕಡ 50ರಷ್ಟು ಮಹಿಳಾ ಮೀಸಲಾತಿ ನೀಡಿರುವುದು ಸಂತೋಷ ತಂದಿದೆ - ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಚೈತ್ರ ವಿ ಗಿರೀಶ್ ಕುಮಾರ್

ಗ್ರೇಟರ್ ಬೆಂಗಳೂರು ಅಥಾರಿಟಿ ಅಡಿಯಲ್ಲಿ ಬರುವ ಐದು ನಗರ ಪಾಲಿಕೆಗಳಲ್ಲಿ 369 ವಾರ್ಡ್ ಗಳ ಪೈಕಿ 174 ಶೇಕಡ 50ರಷ್ಟು ಮಹಿಳಾ ಮೀಸಲಾತಿಯನ್ನು ಪ್ರಕಟಿಸಿ ಮೀಸಲಾತಿ ಪಟ್ಟಿಯ ಕರಡು ರಾಜ್ಯ ಪತ್ರದಲ್ಲಿ ಪ್ರಕಟಿಸಲಾಗಿದೆ.

ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ಪಶ್ಚಿಮ ಮತ್ತು ದಕ್ಷಿಣ ನಗರ ಪಾಲಿಕೆಗಳಿಗೆ ಒಟ್ಟಾರೆ ಕ್ಷೇತ್ರದಲ್ಲಿ 14 ವಾರ್ಡುಗಳಿದ್ದು 10 ವಾರ್ಡುಗಳು ಮಹಿಳಾ ಮೀಸಲಾತಿಯಾಗಿರುವುದು ಸಂತೋಷಕರ ವಿಷಯ ಹಾಗೂ ತಮ್ಮ ವಾರ್ಡ್  ಆದ ಇಟ್ಟಮಡು ವಾರ್ಡ್ ಮಹಿಳಾ ಸಾಮಾನ್ಯ ಮೀಸಲಾಗಿರುವುದು ಸಂತೋಷಕರ ವಿಷಯ ಹಾಗೂ ವಾರ್ಡ್ ವ್ಯಾಪ್ತಿಯ ಇಟ್ಟಮಡು, ತಿಮ್ಮರಾಯ ಗೌಡ ಲೇಔಟ್, ಮಾರುತಿ ನಗರ, ಮಂಜುನಾಥ ನಗರ, ದತ್ತಾತ್ರೇಯ ನಗರ ಹಾಗೂ ಹೊಸಕೆರೆ ಹಳ್ಳಿಯ ಕೆಲವು ಭಾಗಗಳು ಇಟ್ಟಮಡು ವಾರ್ಡ್ ವ್ಯಾಪ್ತಿಗೆ ಬರುತ್ತಿದ್ದು ಮಹಿಳೆಯರು ಸಮಾನಾಂತರ ಸಂಖ್ಯೆಯಲ್ಲಿದ್ದಾರೆ, ಹಾಗೂ ಸಮಾಜಸೇವೆ ರಾಜಕಾರಣ ಸಾ ಸಾರ್ವಜನಿಕ ಜೀವನದಲ್ಲಿ ಮಹಿಳೆಯರೇ ಅತಿಹೆಚ್ಚಿದ್ದು ಮಹಿಳಾ ಮೀಸಲಾತಿ ನೀಡಿರುವುದು ಸಂತೋಷ ತಂದಿದೆ ಎಂದು ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಚೈತ್ರ ವಿ ಗಿರೀಶ್ ಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ. ಇದೇ ವಾರ್ಡ್ನಲ್ಲಿ ಸುಮಾರು ವರ್ಷಗಳಿಂದ ಪಕ್ಷದ ಕೆಲಸ ನಿರ್ವಹಿಸಿ ಸಮಾಜ ಸೇವೆ ಅಲ್ಲದೆ ಬೆಂಗಳೂರು ಪೊಲಿಟಿಕಲ್ ಆಕ್ಷನ್ ಕಮಿಟಿ ಇದೇ ವಾರ್ಡ್ನ ನಾಗರಿಕ ನಾಯಕಿಯಾಗಿ ಕೆಲಸ ನಿರ್ವಹಿಸುತ್ತಿದ್ದು ಜನಪ್ರತಿನಿಧಿ ಆಗುವ  ಕ್ಲಿಪ್ ತರಬೇತಿಯನ್ನು ಪಡೆದಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಅವರು ಆಕಾಂಕ್ಷೆ ಇದ್ದು , ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾದ ಸವಿತಾ ಜೆ ಇತರರು ಆಕಾಂಕ್ಷೆಗಳಾಗಿದ್ದಾರೆ. 

ಈ ವಾರ್ಡ್ನಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಗೃಹಲಕ್ಷ್ಮಿ ಪಲಾನುಭವಿಗಳಿದ್ದು, 5000ಕ್ಕೂ ಅಧಿಕ ಗೃಹಜೋತಿ ಉಚಿತ ವಿದ್ಯುತ್ ಉಪಯೋಗಿಸುತ್ತಿದ್ದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಮೇಲೆ ಜಲ ಮಂಡಳಿಯ ವಾಟರ್ ಲೈನ್, ಕಾಂಕ್ರೀಟ್ ರಸ್ತೆ, ಇತರ ಕಾಮಗಾರಿಗಳು ಬಹಳಷ್ಟು ಈ ವಾರ್ಡಿನಲ್ಲಿ ನಡೆಯುತ್ತಿದೆ.  ಮಧ್ಯಮ ಹಾಗೂ ಬಿಪಿಎಲ್ ಕುಟುಂಬಗಳೇ ಹೆಚ್ಚು ಇದ್ದು ಮಹಿಳೆಯರು ಗಾರ್ಮೆಂಟ್ ಇತರ ಕೆಲಸ ಕಾರ್ಯಗಳಿಗೆ ಉಚಿತ ಬಸ್ ಶಕ್ತಿ ಯೋಜನೆ ಹೆಚ್ಚಾಗಿ ಉಪಯೋಗಿಸುತ್ತಿದ್ದು ಅನ್ನ ಭಾಗ್ಯ ಯೋಜನೆಯು ಕಾಂಗ್ರೆಸ್ ಗೆಲುವಿಗೆ ಇಲ್ಲಿ ವರದಾನವಾಗಲಿದೆ. ಬಿಪಿಎಲ್ ಕಾರ್ಡ್, ಯಶಸ್ವಿನಿ ಕಾರ್ಡ್, ಪಿಂಚಣಿ, ಕಾರ್ಮಿಕ ಕಾರ್ಡ್ ಸೇರಿದಂತೆ ಹಲವಾರು ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಚೈತ್ರ ವಿ ಮತ್ತು ಇತರ ಕಾಂಗ್ರೆಸ್ ಕಾರ್ಯಕರ್ತರು ಶ್ರಮವಹಿಸಿದ್ದಾರೆ ಇದು ಕೂಡ ವರದಾನವಾಗಲಿದೆ.