ನಟಿ ಹಾಗೂ ಸಂಸದೆ ಕಂಗನಾ ರನೌತ್ ಅವರು ರಾಹುಲ್ ಗಾಂಧಿ ಬಗ್ಗೆಹೇಳಿಕೆಗೆ ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಚೈತ್ರ ವಿ ಗಿರೀಶ್ ಕುಮಾರ್ ಖಂಡನೆ
Correspondent/Political/SM News Desk
ಬೆಂಗಳೂರು,ಮಾ.23 : ನಟಿ ಹಾಗೂ ಸಂಸದೆ ಕಂಗನಾ ರನೌತ್ ಅವರು ರಾಹುಲ್ ಗಾಂಧಿ ಬಗ್ಗೆಹೇಳಿಕೆಗೆ ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಚೈತ್ರ ವಿ ಗಿರೀಶ್ ಕುಮಾರ್ ಖಂಡಿಸಿದ್ದಾರೆ ಹಾಗೂ ಸಂಸತ್ ಸದಸ್ಯರಾಗಿ ಮುಂದುವರೆಯಲು ಕಂಗನ ಅನರ್ಹರು , ಕೂಡಲೇ ಬಿಜೆಪಿ ಹಾಗೂ ಸ್ಪೀಕರ್ ಅವರ ಬಗ್ಗೆ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಭಾರತದಲ್ಲಿ ದೇಶದ ಅತ್ಯುನ್ನತ ಘನತೆ ಹೊಂದಿರುವ ಸ್ಥಳ ಸಂಸತ್ ಸಂಸತ್ತಿನಲ್ಲಿ ಸ್ಪೀಕರ್ ಪ್ರಧಾನಿ ಸೇರಿದಂತೆ ಹಿರಿಯ ಸದಸ್ಯರು ಇರುತ್ತಾರೆ ಅದೇ ರೀತಿ ದೇಶದ ಹಾಗೂ ಹೋಗುಗಳ ಚರ್ಚೆ ನಡೆಯುತ್ತದೆ. ರಾಹುಲ್ ಗಾಂಧಿಯವರು ಸಹ ಸಾಂವಿಧಾನಿಕವಾದ ವಿರೋಧ ಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಇಂತಹ ಸಂಸತ್ನಲ್ಲಿ ಆಡಳಿತ ಪಕ್ಷದಲ್ಲಿದ್ದರೂ ಸಹ ತನಗೆ ಮುಜುಗರವಾಗುತ್ತದೆ ಹಾಗೂ ರಾಹುಲ್ ಗಾಂಧಿಯವರನ್ನು ಟೆಪೋರಿಯಂದಿರುವುದು ನಿಜಕ್ಕೂ ಖಂಡನೆಯ ಹಾಗೂ ಕಂಗನಾ ರವರ ಮನಸ್ಥಿತಿ ಎಷ್ಟು ಹೀನಾಯವಾಗಿದೆ ಎಂಬುದು ತಿಳಿಯುತ್ತದೆ. ಈಗಾಗಲೇ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಕಂಗನಾ ರವರಿಗೆ ನಿಮ್ಹಾನ್ಸ್ ನಲ್ಲಿ ಚಿಕಿತ್ಸೆ ಪಡೆಯಬೇಕೆಂದು ಪತ್ರ ಬರೆದಿದ್ದಾರೆ. ಈ ರೀತಿಯ ಮನಸ್ಥಿತಿಯವರು ಸಂಸಾತ್ ಸದಸ್ಯರಾಗಿರುವುದು ನಿಜಕ್ಕೂ ಪ್ರಜಾಪ್ರಭುತ್ವಕ್ಕೆ ಮಾರಕ. ಈ ಹಿಂದೆ ರೈತ ಕಾನೂನುಗಳ ವಿರುದ್ಧ ನಡೆದ ಅತಿ ದೊಡ್ಡ ಪ್ರತಿಭಟನೆಯಲ್ಲಿ 81ರ ವಯಸ್ಸಿನ ರೈತ ಮಹಿಳೆಯ ಬಗ್ಗೆ ನೂರು ರೂಪಾಯಿಗಳ ಹೇಳಿಕೆಯನ್ನು ನೀಡಿ ಕಂಗನ ರೈತರ ವಿರೋಧಕ್ಕೆ ಗುರಿಯಾಗಿದ್ದರು. ಸುಭಾಷ್ ಚಂದ್ರ ಬೋಸ್ ಮೊದಲ ಪ್ರಧಾನಿ ಅಂತ ಹೇಳಿ ಅವರ ಸಾಮಾನ್ಯ ಜ್ಞಾನ ಎಷ್ಟೇ ಎಂಬುದು ತಿಳಿಸಿದರು. ದೇಶದ ಜನ ವಿದೇಶಕ್ಕೆ 10 ವರ್ಷದಿಂದ ಹೆಚ್ಚು ಹೊರಡುತ್ತಿದ್ದಾರೆ ಎಂದಾಗ ಜನಸಂಖ್ಯೆ ಕಡಿಮೆಯಾಗುತ್ತದೆ ಎಂಬ ಬಾಲಿಶ ಯನ್ನು ನೀಡಿದರು. ರೈತ ಮಹಿಳೆಯ ಹಾಗೂ ರೈತರ ಬಗ್ಗೆ ಹೇಳಿಕೆಗೆ ಸಿಐಎಸ್ಎಫ್ ಯೋಧ ಮಹಿಳೆ ಕಂಗನಾರಿಗೆ ಕಪಾಳ ಮೋಕ್ಷ ಮಾಡಿದ್ದು ಇಡೀ ದೇಶವೇ ನೋಡಿದೆ. ರಘುಪತಿ ರಾಜ ರಾಮ್ ಭಕ್ತಿಗೀತೆನಾ ರಾಷ್ಟ್ರಗೀತೆ ಅಂತ ಹೇಳಿ ಅವರ ಅಪಪ್ರಭುದ್ಧತೆಯನ್ನು ತಿಳಿಸಿದ್ದಂತವರು. ಇಂಥವರನ್ನ ಬಿಜೆಪಿ ಪಕ್ಷ ಸಂಸದೆ ಮಾಡಿದ್ದೆ ಅಲ್ಲದೆ ಈ ರೀತಿಯ ಹೇಳಿಕೆಗಳು ಅವರ ನಡವಳಿಕೆಗಳು ಭಾರತದ ಪ್ರಜಾಪ್ರಭುತ್ವದ ಒಬ್ಬ ಸಂಸತ್ ಸದಸ್ಯರಾಗಿ ಮುಂದುವರೆಯಲು ಅನರ್ಹರು ಎಂಬುದನ್ನ ತೋರಿಸುತ್ತದೆ ಕೂಡಲೇ ಕಂಗನ ತನ್ನ ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ರಾಹುಲ್ ಗಾಂಧಿಯವರನ್ನು ಕ್ಷಮೆಯಾಚಿಸಬೇಕು. ಅದಲ್ಲದೆ ಇಡೀ ದೇಶದ ಜನರ ಕ್ಷಮೆಯಾಚಿಸಬೇಕು. ಅಪಪ್ರಭುದ್ಧ ನಡವಳಕೆ ಮಾಡಬಾರದೆಂದು ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಚೈತ್ರ ವಿ ಗಿರೀಶ್ ಕುಮಾರ್ ಒತ್ತಾಯಿಸಿದ್ದಾರೆ.
