ರಾಜಕೀಯ ಕ್ಷೇತ್ರದಲ್ಲಿ ಮಹಿಳಾ ಮೀಸಲಾತಿ ಸಮರ್ಪಕವಾಗಿ ಜಾರಿಯಾಗಲಿ
Correspondent/Mrs.Chitra Girish/Editorial/SM News Desk
ಇಂದಿನ ನಾರಿಮಣಿಯರು ಎಲ್ಲಾ ಕ್ಷೇತ್ರಗಳಲ್ಲೂ ತನ್ನದೇ ಆದಂತಹ ಸಾಧನೆ ಗೈಯುದರೊಂದಿಗೆ, ಗಗನಯಾತ್ರಿ ಗಳಾಗಿದ್ದಾರೆ ಸರ್ಕಾರಿ ಉನ್ನತ ಹುದ್ದೆಗಳು ಕ್ರೀಡಾ ಸಾಹಿತ್ಯ ಶೈಕ್ಷಣಿಕ ವ್ಯಾಪಾರ ವಹಿವಾಟು ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಪ್ರಾಬಲ್ಯ ಮೆರೆದಿದ್ದಾರೆ . ಮಹಾತ್ಮ ಗಾಂಧಿಯವರು ಮಧ್ಯರಾತ್ರಿ ಮಹಿಳೆ ಒಬ್ಬಂಟಿಯಾಗಿ ಓಡಾಡಬೇಕೆಂಬ ಮಾರ್ಮಿಕ ನುಡಿಯೇ ಎಲ್ಲದರಲ್ಲೂ ಸ್ವಾತಂತ್ರ ಸಮಾನತೆ ಪ್ರಾತಿನಿಧ್ಯ ಸಿಗಬೇಕೆಂಬುದು ರಾಜಕೀಯ ಸಾಮಾಜಿಕ ಕ್ಷೇತ್ರದಲ್ಲಿ ಮಹಿಳೆ ರಾಷ್ಟ್ರಪತಿ ಪ್ರಧಾನಿ ಮುಖ್ಯಮಂತ್ರಿ ಸಂಸದೆ ಶಾಸಕಿ ಮಂತ್ರಿ ಎಲ್ಲವೂ ಆಗಿದ್ದ ರೆಂಬುದು ಸತ್ಯವಾದರೂ ಆದರೆ ಎಲ್ಲೋ ಒಂದೆಡೆ ರಾಜಕೀಯ ಸಾರ್ವಜನಿಕ ಜೀವನ ಕ್ಷೇತ್ರದಲ್ಲಿ ಮಹಿಳೆಯರಿಗೆ ಸಮಾನತೆ ಸ್ವಾತಂತ್ರ್ಯ ಇಲ್ಲವೆಂಬ ಪ್ರಶ್ನೆ ಮೂಡುತ್ತಿದೆ.
ಏಕೆಂದರೆ ಸಂಸತ್ತಿನಲ್ಲಿ ವಿಧಾನಸಭೆಗಳಲ್ಲಿ ಬೆರಳಣಿಕೆ ಯಷ್ಟು ಮಾತ್ರ ಮಹಿಳಾ ಪ್ರತಿನಿಧಿಗಳು ಸಿಗುತ್ತಾರೆ , ಇದು ಭಾರತದಲ್ಲಿ ಸಾಕಷ್ಟು ಚರ್ಚೆಗೂ ಗ್ರಾಸವಾಗಿ ಈಗ ಲೋಕಸಭೆಯಲ್ಲಿ 33% ಮಹಿಳಾ ಮೀಸಲಾತಿ ಮಸೂದೆ ಮಂಡನೆಯಾಗಿದೆ ಇದು ಮುಂದೆ ಎಷ್ಟು ಜಾರಿಯಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. ಮತ್ತೊಂದೆಡೆ ಗ್ರಾಮ ಸ್ವರಾಜ್ಯ ಎಂಬ ಘೋಷವಾಕ್ಯ ಗಾಂಧಿಯವರು ಹೇಳಿದರಲ್ಲಿ ಮಹಿಳೆಯರಿಗೂ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರಾತಿನಿಧ್ಯ ಸಿಗಬೇಕೆಂಬುದು ಸರಿ ಅಷ್ಟೇ. ದಶಕಗಳಿಂದಲೇ ಸ್ಥಳೀಯ ಸಂಸ್ಥೆಗಳಲ್ಲಿ ಅಂದರೆ ಗ್ರಾಮ ಪಂಚಾಯತ್. ತಾಲೂಕು ಜಿಲ್ಲಾ ಪಂಚಾಯತ್ ಪುರಸಭೆ ನಗರಸಭೆ ನಗರ ಪಾಲಿಕೆ ಇಂದಿನ ಜಿಬಿಯಗಳಲ್ಲಿ ಶೇಕಡ 50 ಮಹಿಳಾ ಮೀಸಲಾತಿ ಇದೆ.
ಆದರೆ ಇಂದಿಗೂ ಅದು ಸಮರ್ಪಕವಾಗಿ ಜಾರಿಯಾಗಿಲ್ಲ ಮಹಿಳಾ ಮೀಸಲಾತಿ ಎಂಬುದು ಸಾರ್ವಜನಿಕ ಜೀವನದಲ್ಲಿ ಸಮಾಜ ಸೇವೆಯಲ್ಲಿ ರಾಜಕೀಯ ರಂಗದಲ್ಲಿ ಚಟುವಟಿಕೆಯಂದಿರುವಂತವರಿಗೆ ಆ ಸ್ಥಳೀಯವಾಗಿ ಚಾಲ್ತಿಯಲ್ಲಿರುವವರಿಗೆ ಸಿಗಬೇಕೆಂಬ ಮೂಲ ಉದ್ದೇಶದಿಂದ ಜನಸಂಖ್ಯೆ ಆಧಾರದ ಮೇಲೆ ಶೇಕಡ 50 ಮಹಿಳಾ ಮೀಸಲಾತಿ ನೀಡಲಾಗಿತ್ತು. ದೂರದೃಷ್ಟವಶಾದ್ ಗ್ರಾಮ ಪಂಚಾಯಿತಿಗಳಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಬಿಬಿಎಂಪಿಯಲ್ಲಿ ಮೀಸಲಾತಿ ದುರುಪಯೋಗವಾಗಿದೆ. ಅರ್ಹ ಮಹಿಳೆಯರಿಗೆ ಸಿಗದೇ ನಾಯಕರ ಬಂಡವಾಳ ಶಾಹಿಗಳ ಮನೆಯ ಮಹಿಳೆಯರ ಪಾಲಾಗಿ ಇಂದಿಗೂ ಅವರು ಸಾರ್ವಜನಿಕ ಜೀವನದಲ್ಲಿ ಸರಿಯಾಗಿ ಪಾಲ್ಗೊಳ್ಳದೆ ದುರ್ಬಲಗೊಂಡಿದೆ.
ಮಹಿಳಾ ಮೀಸಲಾತಿಯ ಉದ್ದೇಶವೇ ಆಯಾ ಕ್ಷೇತ್ರದಲ್ಲಿರುವ ಮಹಿಳೆಯರು ಭಾಗವಹಿಸಿ ಚುನಾಯಿತರಾಗಬೇಕು ಆಗ ಮಾತ್ರ ಸಮಾಜದ ಉನ್ನತಿ ಸಾಧ್ಯ ಎಂಬುದು. ಆದರೆ ಮಾಧ್ಯಮಗಳಲ್ಲಿ ತಾವೆಲ್ಲ ನೋಡಿರುವಂತೆ ಸಭೆಗಳಿಗಾಗಲಿ ಕೆಲಸ ಕಾರ್ಯಗಳಿಗಾಗಲಿ ಮಹಿಳೆಯರೇ ಬರದೆ ತಮ್ಮ ಗಂಡಂದಿರು ಹಾಗೂ ಮನೆಯವರು ಆಡಳಿತ ಮಾಡಿದ್ದು ಪ್ರಜಾಪ್ರಭುತ್ವಕ್ಕೆ ತಂದ ಕಳಂಕ. ಈ ನಿಟ್ಟಿನಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಮುಖಂಡರು ತಮ್ಮ ನೈತಿಕತೆ ತೋರಿಸಿ ಅರ್ಹ ರಾಜಕೀಯ ರಂಗ ಸಾರ್ವಜನಿಕ ಕ್ಷೇತ್ರದಲ್ಲಿರುವ ಮಹಿಳೆಯರಿಗೆ ಆದ್ಯತೆ ನೀಡಬೇಕು ಆಗ ಮಾತ್ರ ಸಮಾಜದ ಆಯಾ ಸ್ಥಳೀಯ ಸಂಸ್ಥೆಗಳ ಸುಗಮ ಆಡಳಿತ ಸಾಧ್ಯ. ಇನ್ನೇನು ಪಂಚಾಯತ್ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ 5 ಪಾಲಿಕೆಗಳ ಚುನಾವಣೆ ಹತ್ತಿರವಾಗಿದ್ದು ಈ ನಿಟ್ಟಿನಲ್ಲಿ ಆಯಾ ರಾಜಕೀಯ ಪಕ್ಷಗಳು ಅರ್ಹ ಮಹಿಳೆಯರಿಗೆ ಆದ್ಯತೆ ನೀಡಬೇಕೆಂಬುದು ಸಕಲ ಮಹಿಳಾ ಕುಲದ ಬೇಡಿಕೆ. ಕಳೆದ ಬಿಬಿಎಂಪಿಯಲ್ಲಿ 198ಕ್ಕೆ 100 ಮಹಿಳೆಯರಿದ್ದರೂ ಪುರುಷರಿಗಿಂತ ಹೆಚ್ಚು ಪ್ರತಿನಿಧಿಗಳಿದ್ದರೂ ಅತಿ ಹೆಚ್ಚು ಮಹಿಳೆಯರ ಅಧಿಕಾರವನ್ನು ಚಲಾಯಿಸಿದ್ದು ಅವರ ಗಂಡಂದಿರು ಹಾಗೂ ಕುಟುಂಬದವರು, ಇದರಿಂದ ಬಿಬಿಎಂಪಿ ಆಡಳಿತ ಬಹಳಷ್ಟು ತೊಂದರೆಗೊಳಗಾಗಿತ್ತು.
ಇತ್ತೀಚೆಗೆ ನಮ್ಮ ಬೆಂಗಳೂರು ಪೊಲಿಟಿಕಲ್ ಆಕ್ಷನ್ ಕಮಿಟಿ (ಬಿ ಪ್ಯಾಕ್) ಆಯೋಜಿಸಿದ ಸಭೆಯಲ್ಲಿ ಜಿಬಿಎ ಉಸ್ತುವಾರಿ ಸಚಿವರಾದ ಡಿಕೆ ಶಿವಕುಮಾರ್ ಅವರು ಶೇಕಡ 50 ಮೀಸಲಾತಿ ಸಾರ್ವಜನಿಕ ಜೀವನದಲ್ಲಿ ರಾಜಕೀಯ ಜೀವನದಲ್ಲಿರುವ ಮಹಿಳೆಯರಿಗೆ ನೀಡಲಾಗುವುದೆಂದು ಘೋಷಿಸಿದ್ದಾರೆ. ಜಿಬಿಎ ಮೀಸಲಾತಿಯ ರಾಜ್ಯಪತ್ರದಲ್ಲೂ ಶೇಕಡ 50 ಮಹಿಳಾ ಮೀಸಲಾತಿ ನೀಡಿರುವುದು ಸಂತೋಷಕರ ವಿಷಯ.
ಇದು ಸಮರ್ಪಕವಾಗಿ ಜಾರಿಯಾಗಬೇಕು ಅರ್ಹ ಮಹಿಳೆಯರ ಪಾಲಾಗಬೇಕು ರಾಜಕೀಯ ನಾಯಕರ, ಅಧಿಕಾರ ಹಾಗೂ ಬಂಡವಾಳ ಶಾಹಿಗಳ ಮನೆಯವರ ಪಾಲಾಗಬಾರದು ಎಂಬುದು ಸಕಲ ಮಹಿಳಾ ರಾಜಕಾರಣಿಗಳ ಸಮಾಜ ಸೇವಕರ ಸಾರ್ವಜನಿಕ ಜೀವನದಲ್ಲಿ ತೊಡಗಿಕೊಂಡಿರುವರ ಆಗ್ರಹ. ಅದಲ್ಲದೆ ಸ್ಥಳೀಯ ಆಡಳಿತದಲ್ಲಿ ಮಹಿಳೆಯ ಪಾತ್ರ ಅವಶ್ಯಕತೆ ಕೂಡ. ಪ್ರತಿಯೊಂದು ರಾಜಕೀಯ ಪಕ್ಷಗಳ ಕರ್ತವ್ಯವು ಸಹ ಅದೇ ರೀತಿ ಪ್ರತಿಯೊಬ್ಬ ಮತದಾರರು ಯೋಚಿಸಲೇಬೇಕಾದ ಸಂಗತಿ ಮತದಾರರು ಯಾರು ಸಾರ್ವಜನಿಕ ಜೀವನದಲ್ಲಿ ರಾಜಕೀಯದಲ್ಲಿ ಸಮಾಜ ಸೇವೆಯಲ್ಲಿ ತಮ್ಮನ ತೊಡಗಿಸಿಕೊಂಡಿರುತ್ತಾರೋ ಅಂತವರನ್ನು ಆಯ್ಕೆ ಮಾಡುವುದು ಜವಾಬ್ದಾರಿ. ಮುಂದೆ ತಿಂಗಳುಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಬರುತ್ತಿದ್ದು ಈ ಬಗ್ಗೆ ರಾಜಕೀಯ ಪಕ್ಷಗಳು ದಿಟ್ಟ ನಿರ್ಧಾರ ಕೈಗೊಳ್ಳಬೇಕೆಂಬುದು ಎಲ್ಲರ ಆಶಯ.
ಚೈತ್ರ ವಿ ಗಿರೀಶ್ ಕುಮಾರ್
ಬಿಕ್ಲಿಪ್ ನಾಗರೀಕ ನಾಯಕಿ ,ಇಟ್ಟುಮಡು-ಹೊಸಕೆರೆಹಳ್ಳಿ (ಬಿ ಪ್ಯಾಕ್)
