ಮುಧೋಳ ತಾಲೂಕಿನಲ್ಲಿ ವಿನಯ್ ಆರ್ ತಿಮ್ಮಾಪುರ ರವರ ಹುಟ್ಟು ಹಬ್ಬದ ಸಂಭ್ರಮದ ಪ್ರಯುಕ್ತ ಉದ್ಯೋಗ ಮೇಳ ಮತ್ತು ಕೌಶಲ್ಯ ತರಬೇತಿ ಕಾರ್ಯಕ್ರಮ

Correspondent/Mudhol/Bagalkote/SM Newds Desk

Jan 26, 2026 - 08:49
Jan 26, 2026 - 08:55
 0  49
ಮುಧೋಳ ತಾಲೂಕಿನಲ್ಲಿ ವಿನಯ್ ಆರ್ ತಿಮ್ಮಾಪುರ ರವರ ಹುಟ್ಟು ಹಬ್ಬದ ಸಂಭ್ರಮದ ಪ್ರಯುಕ್ತ ಉದ್ಯೋಗ ಮೇಳ ಮತ್ತು ಕೌಶಲ್ಯ ತರಬೇತಿ ಕಾರ್ಯಕ್ರಮ

ಬಾಗಲಕೋಟೆ ಜ.25 : ಮುಧೋಳ ತಾಲೂಕಿನಲ್ಲಿ ವಿನಯ್ ಆರ್ ತಿಮ್ಮಾಪುರ ರವರ ಹುಟ್ಟು ಹಬ್ಬದ ಸಂಭ್ರಮದ ಪ್ರಯುಕ್ತ ಉದ್ಯೋಗ ಮೇಳ ಮತ್ತು ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ಮತ್ತು ಕ್ವಿಜ್ ಕಾಂಪಿಟೇಶನ್ ನಡೆಸಲು ಬಯಸಿದ್ದು ಯುವ ಕಾಂಗ್ರೆಸ್ ತಾಲೂಕು ಅಧ್ಯಕ್ಷರುಗಳಾದಂತಹ ಚಿನ್ನು ಅಂಬಿಯವರು ಪತ್ರಿಕಾಗೋಷ್ಠಿ ನಡೆಸಿರುತ್ತಾರೆ

ಈ ಗೋಷ್ಠಿಯಲ್ಲಿ ಯುವ ಕಾಂಗ್ರೆಸ್ ನಾಯಕರುಗಳು ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರುಬಾಗಲಕೋಟೆ ಮುಧೋಳ ವಿನಯ್ ಆರ್ ತಿಮ್ಮಾಪುರ ರವರ ಹುಟ್ಟು ಹಬ್ಬದ ಪ್ರಯುಕ್ತ ದಿನಾಂಕ 27 ಜನವರಿ 2026 ಮತ್ತು ದಿನಾಂಕ 28 ಜನವರಿ 2026 ಮಂಗಳವಾರ ಮತ್ತು ಬುಧವಾರದಂದು ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ

ಮೊದಲನೇ ದಿನ ಅಂದರೆ ದಿನಾಂಕ 27 ಜನವರಿ 2026ರಂದು ಸಾಫ್ಟ್ ಸ್ಕಿಲ್ ಟ್ರೈನಿಂಗ್ ತರಬೇತಿ ಕಾರ್ಯಗಾರವನ್ನು ಪ್ರತಿಷ್ಠಿತ ಮೋಟಿವೇಷನಲ್ ಟ್ರೈಲರ್ ಆದಂತಹ ವಿಶ್ವನಾಥ್ ರವರ ನಡೆಸಿಕೊಡಲು ನಡೆಸಿಕೊಡಲಿದ್ದಾರೆ

ಉದ್ಯೋಗ ಮೇಳದಲ್ಲಿ ಹಾಗೂ ಬೇರೆ ಕಂಪನಿಗಳಲ್ಲಿ ಸಂದರ್ಶನ ಎದುರಿಸುವುದು ಹೇಗೆ ಹಾಗೆ ಸಂದರ್ಶನ ನಡೆಸಲು ಪೂರ್ವ ತಯಾರಿ ಹೇಗಿರಬೇಕು ಮತ್ತು ಉದ್ಯಮಿಯಾಗಲು ಬಯಸುವವರು ಯಾವ ರೀತಿ ಉದ್ಯಮಿ ಯಾಗಲು ತಯಾರಿ ನಡೆಸಬೇಕು ಎಂಬುದಾಗಿ ಸಂಕ್ಷಿಪ್ತ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ

ಇದೇ ದಿನ ಎ ಎಂ ಎಸ್ ಗ್ರೂಪ್ ನ ರಂಗ ನಿಧಿ ಹಾಗೂ ಶಿವಕುಮಾರ್ ಕೆಎಂ ತಂಡದಿಂದ ಆನ್ಲೈನ್ ಕ್ವಿಜ್ ಕಾಂಪಿಟೇಶನ್ ಕೂಡ ನಡೆಸಲಾಗುವುದು ಈ ಕಾಂಪಿಟೇಶನ್ ನಲ್ಲಿ ಭಾಗವಹಿಸಲು ಇಚ್ಛಿಸುವವರು ಸ್ಮಾರ್ಟ್ ಫೋನ್ ಹೊಂದಿರುವುದು ಕಡ್ಡಾಯ ಮತ್ತು ಈ ಕಾರ್ಯಕ್ರಮಕ್ಕೆ ಆನ್ಲೈನ್ ನಲ್ಲಿ ರಿಜಿಸ್ಟ್ರೇಷನ್ ಕಡ್ಡಾಯಗೊಳಿಸಿದ್ದು ತಪ್ಪದೇ ದಿನಾಂಕ 27ರ ಬೆಳಿಗ್ಗೆ 9:00ಗೆ ಸರಿಯಾಗಿ ದಾನಮ್ಮ ದೇವಿ ಆವರಣದಲ್ಲಿ ಹಾಜರಿರಬೇಕು  

ಕ್ವಿಜ್ ಕಾಂಪಿಟೇಶನ್ ಸ್ಪರ್ಧೆಯಲ್ಲಿ ವಿಜೇತರಿಗೆ ಕ್ರಮವಾಗಿ ಮೊದಲನೇ ಬಹುಮಾನ ಒಂದು ಲಕ್ಷ ಎರಡನೇ ಬಹುಮಾನ 75,000 ಮೂರನೇ ಬಹುಮಾನ 50,000 ಹಾಗೂ 10 ಜನರಿಗೆ ಸಮಾಧಾನಕರ ಬಹುಮಾನಗಳನ್ನು ನೀಡಲಾಗುವುದು ಎಂದು ತಿಳಿಸಿರುತ್ತಾರೆ . ಅದೇ ದಿನ ಆಶುಭಾಷಣ ಸ್ಪರ್ಧೆಯನ್ನು ಸಹ ಆಯೋಜಿಸಲಾಗಿರುತ್ತದೆ ಎಂದು ಆಯೋಜಕರು ತಿಳಿಸಿರುತ್ತಾರೆ

ಅದೇ ರೀತಿ ಉದ್ಯೋಗ ಮೇಳದಲ್ಲಿ ಸುಮಾರು 65ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿದ್ದು ಸ್ಥಳೀಯ ಹಾಗೂ ಹೊರ ರಾಜ್ಯಗಳ ಮತ್ತು ಬೆಂಗಳೂರಿನ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ಬಯಸುವವರು ಈ ಮೇಳಕ್ಕೆ ಬಂದು ಭಾಗವಹಿಸಬಹುದು ಈ ಎರಡು ದಿನಗಳ ಮೇಳದಲ್ಲಿ ಯಾವುದೇ ಶುಲ್ಕ ಇರುವುದಿಲ್ಲ ಮತ್ತು 27 ರಂದು ನಡೆಯುವ ಕೌಶಲ್ಯ ತರಬೇತಿ ಕಾರ್ಯಕ್ರಮಕ್ಕೆ ಬರುವವರು ಕನಿಷ್ಠಪಕ್ಷ ಹತ್ತು ರೆಸ್ಯುಮೆಗಳನ್ನು ಕಡ್ಡಾಯವಾಗಿ ತರುವುದು ಹೆಚ್ಚಿನ ಮಾಹಿತಿಗಾಗಿ ಫೋನ್ ನಂಬರ್ 63603 21766 ಅಥವಾ 96322 50396
ಕರೆ ಮಾಡಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವುದು