ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಹಿರಿಯ ಹಾಗೂ ನಿಷ್ಠಾವಂತ ಕಾಂಗ್ರೆಸ್ ಮುಖಂಡರಿಗೆ ಗೌರವ ಸಮರ್ಪಣ ಕಾರ್ಯಕ್ರಮ

Correspondent/Political/SM News Desk

Dec 30, 2025 - 18:45
 0  111
 ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಹಿರಿಯ ಹಾಗೂ ನಿಷ್ಠಾವಂತ ಕಾಂಗ್ರೆಸ್ ಮುಖಂಡರಿಗೆ ಗೌರವ ಸಮರ್ಪಣ ಕಾರ್ಯಕ್ರಮ

ಬೆಂಗಳೂರು,ಡಿ.30 : ಪದ್ಮನಾಭನಗರ ಕ್ಷೇತ್ರ ಇಟ್ಟಮಡು ವಾರ್ಡ್ನಲ್ಲಿ  ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಕ್ಷೇತ್ರದ ಹಿರಿಯ ಹಾಗೂ ನಿಷ್ಠಾವಂತ ಕಾಂಗ್ರೆಸ್ ಮುಖಂಡರಿಗೆ ಗೌರವ ಸಮರ್ಪಣ ಕಾರ್ಯಕ್ರಮವನ್ನು ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಚೈತ್ರ ವಿ ಗಿರೀಶ್ ಕುಮಾರ್, ಮಹಿಳಾ ಕಾಂಗ್ರೆಸ್ ಜಿಲ್ಲಾ  ಪ್ರಧಾನ ಕಾರ್ಯದರ್ಶಿ ಸವಿತಾ ಜೆ ಮುಂತಾದವರು ಆಯೋಜಿಸಿದರು. ಕೆಪಿಸಿಸಿ ಸಂಯೋಜಕರಾದ ಡಾ. ಸಂಜಯ್ ಗೌಡ ರವರು ಭಾಗವಹಿಸಿದ್ದು ,ಹಿರಿಯ ಮುಖಂಡರುಗಳಾದ ಮಹದೇವ ಕೆ, ಜಗದೀಶ್ ಬಿಕೆ, ಸತ್ಯನಾರಾಯಣ, ಶ್ರೀನಿವಾಸ್ ಎಚ್ ಸಿ, ರಾಮಕೃಷ್ಣ ಗೌಡ, ರಮೇಶ್, ಭೀಮೇಶ್ ಎಂ, ತಿಮ್ಮೇಗೌಡ, ಸಂತೋಷ್ ಕುಮಾರ್ ಬಾಬು, ಮಧುಸೂದನ್ ಕೆ ರವರುಗಳ ಕಾಂಗ್ರೆಸ್ ಪಕ್ಷದ ಸೇವೆಗೆ ಗೌರವ ಸಮರ್ಪಿಸಲಾಯಿತು.  ಜಿಲ್ಲಾ ಸಾಮಾಜಿಕ ಮಾಧ್ಯಮ ಜಿಲ್ಲಾಧ್ಯಕ್ಷರಾದ ವಿ ಗಿರೀಶ್ ಕುಮಾರ್, ಯುವ ಕಾಂಗ್ರೆಸ್ ಕ್ಷೇತ್ರ ಅಧ್ಯಕ್ಷರಾದ ಕಾರ್ತಿಕ್, ಬನಶಂಕರಿ ವಾರ್ಡ್ ಮುಖಂಡರಾದ ಚಾಂದ್ ಪಾಷ, ಯುವಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ವೆಂಕಟೇಶ್ , ಸ್ಥಳೀಯ ಮುಖಂಡರದ ಸ್ವಾಮಿ ಗೌಡ,  ಯುವ ಕಾಂಗ್ರೆಸ್ ಕಾರ್ಯದರ್ಶಿರಾಜೇಶ್ ಮಹದೇವ್, ಸಾಮಾಜಿಕ ಮಾಧ್ಯಮ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಳಾದ ಸಂಜಯ್ ಟಿ ಆರ್ ಮತ್ತು ತಿರುಮಲೇಶ್, ವಿ ಎನ್ ಪ್ರಸಾದ್,ಶಂಕರ್, ನಾಗೇಂದ್ರ, ಬನಶಂಕರಿ ಬ್ಲಾಕ್ ಸಾಮಾಜಿಕ ಮಾಧ್ಯಮ ಅಧ್ಯಕ್ಷರಾದ ಸರ್ದಾರ್ ಪಾಷ, ಮಲಗಂಬ ಕೃಷ್ಣ, ನಾಗೇಂದ್ರ, ಎಂಟಿಆರ್ ಮೋಹನ್, ಮಹಿಳಾ ಮುಖಂಡರಾದ ಗೀತ, ಆಕಾಶ್, ಇಟ್ಟುಮಡು ಸ್ವಾಮೀಜಿಗಳು ಸ್ಥಳೀಯ ಮಹಿಳಾ ಮುಖಂಡರು, ಹಿರಿಯರು ಉಪಸ್ಥಿತರಿದ್ದರು.