ಭೂಪರಿವರ್ತನೆಯಾಗದೆ ಇ -ಖಾತೆ ಮಾಡಿರುವ ಮಾಲೂರು ನಗರ ಸಭೆ ಅಧಿಕಾರಿಗಳು...!!? ಕಾನೂನು ಕ್ರಮಕೈ ಗೊಳ್ಳುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಧರಣಿ
Correspondent/Srinath/Malur/SM News Desk
ಮಾಲೂರು :- ಭೂಪರಿವರ್ತನೆಯಾಗದೆ ಇ -ಖಾತೆ ಮಾಡಿರುವ ಮಾಲೂರು ನಗರ ಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಕಾನೂನು ಕ್ರಮಕೈ ಗೊಳ್ಳುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟಿಸಿ ಪೌರಾ ಯುಕ್ತ ಮಹದೇವ್ ರವರಿಗೆ ಮನವಿ ಸಲ್ಲಿಸಲಾಯಿತು. ಕರವೇ ತಾಲ್ಲೂಕು ಅಧ್ಯಕ್ಷ ಎಂ ಎಸ್ ಶ್ರೀನಿವಾಸ್ ಉದ್ದೇಶಿಸಿ ಮಾತನಾಡಿ ನಗರ ಸಭೆಯ ಕಂದಾಯ ಅಧಿಕಾರಿ ಚಂದ್ರು ಎಂ, ಕಂದಾಯ ನಿರೀಕ್ಷಕ ಅನಿಲ್ ಬಿ ವಿ,ನೋಡಲ್ ಅಧಿಕಾರಿ, ನಾಗರಾಜ್, ವಿಷಯ ನಿರ್ವವಾಹಕ ಮಂಜುನಾಥ್ ಸಿಂಬ್ಬಂದಿಗಳಾದ ಅನಿಲ್,ಶ್ರೀನಾಥ್ ಸೇರಿಕೊಂಡು ಮಾಲೂರು ನಗರದ ಸರ್ವೇ ನಂ 213,216ರಲ್ಲಿ ಯಾವುದೇ ಭೂ ಪರಿವರ್ತನೆ ಯಾಗಿಲ್ಲ ಯೋಜನಾ ಪ್ರಾಧಿಕಾರದಿಂದ ನಕ್ಷೆ ಅನುಮೋದನೆ ಆಗಿರುವುದಿಲ್ಲ ಅವುಗಳಲ್ಲಿಬರುವ ಅಸ್ತಿಯಲ್ಲಿ 28ಇ -ಖಾತೆಗಳನ್ನು ಮಾಡಿ ನಗರ ಸಭೆಗೆ ನಷ್ಟದ ಜತೆಗೆ ಕಾನೂನು ಬಾಹಿರವಾಗಿಅವ್ಯವಹಾರ ನಡೆಸಿದ್ದಾರೆ ತಾವು ಈ ವಿಷಯದ ಬಗ್ಗೆ ಕೂಡಲೇ ತನಿಖೆ ಮಾಡಿ ಸಂಬಂಧ ಪಟ್ಟವರ ವಿರುದ್ಧ ಕಾನೂನು ಕ್ರಮ ತೆಗೆದು ಕೊಳ್ಳಬೇಕು ಇಲ್ಲವಾದರೆ ಕರ್ನಾಟಕ ರಕ್ಷಣಾವೇದಿಕೆ ವತಿಯಿಂದ ಜಿಲ್ಲಾ ಅಧಿಕಾರಿಗಳ ಕಚೇರಿ ಮುಂದೆ ಅನಿರ್ದಿಷ್ಠ ಅವಧಿ ಧರಣಿ ಮಾಡುವುದಾಗಿತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಕರವೇ ತಾಲೂಕು ಉಪಾಧ್ಯಕ್ಷ ನಾರಾಯಣಸ್ವಾಮಿ, ಯುವ ಘಟಕದ ಅಧ್ಯಕ್ಷ ಸಂತೋಷ, ನಗರಅಧ್ಯಕ್ಷ ಸಿ ಎನ್ ನವೀನ್, ಖಜಾ oಸಿ ಚೇತನ್, ರಾಮಪ್ಪ, ಅಮರನಾರಾಯಣ, ಲವ ಆಟೋ ಅಮೀರ್, ವಿಜಿ,ಕೆ ಕೆ ಮಂಜು, ಕೃಷ್ಣಮೂರ್ತಿ, ಶಿವ ವಾಸಿಮ್, ರವೀಂದ್ರ ಸುಬ್ರಮಣಿ ಶಂಕರ್ ಪ್ರತಾಪ್ ಇತರರು ಉಪಸ್ಥಿತರಿದ್ದರು.
