ಮುಧೋಳ ತಾಲೂಕಿನಲ್ಲಿ ಮಾನ್ಯ ಶ್ರೀ ವಿನಯ ಆರ್ ತಿಮ್ಮಾಪುರ ರವರ ಹುಟ್ಟು ಹಬ್ಬದ ಪ್ರಯುಕ್ತ ನಡೆದ ಸಂಭ್ರಮಾಚರಣೆ

Correspondent/Bagalkote/Mudhol/SM News Desk

Jan 29, 2026 - 22:00
Jan 29, 2026 - 22:01
 0  72
ಮುಧೋಳ ತಾಲೂಕಿನಲ್ಲಿ ಮಾನ್ಯ ಶ್ರೀ ವಿನಯ ಆರ್ ತಿಮ್ಮಾಪುರ ರವರ ಹುಟ್ಟು ಹಬ್ಬದ ಪ್ರಯುಕ್ತ ನಡೆದ ಸಂಭ್ರಮಾಚರಣೆ

ಬಾಗಲಕೋಟೆ ಮುಧೋಳ ಜನವರಿ 28:  ಬಾಗಲಕೋಟೆ  ಜಿಲ್ಲೆಯ ಮುಧೋಳ ತಾಲೂಕಿನಲ್ಲಿ ಮಾನ್ಯ ಶ್ರೀ ವಿನಯ ಆರ್ ತಿಮ್ಮಾಪುರ ರವರ ಹುಟ್ಟು ಹಬ್ಬದ ಪ್ರಯುಕ್ತ ನಡೆದ ಸಂಭ್ರಮಾಚರಣೆಯ ಅಂಗವಾಗಿ ಅತ್ಯಂತ ವ್ಯವಸ್ಥಿತ ಮತ್ತು ಅಚ್ಚುಕಟ್ಟಾಗಿ ಉಚಿತ ಆರೋಗ್ಯ ತಪಾಸಣೆ ಉದ್ಯೋಗ ಮೇಳ ಮತ್ತು ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ದಿನಾಂಕ ಜನವರಿ 27 ಮತ್ತು 28ರಂದು ಸುಮಾರು 3000ಕ್ಕೂ ಹೆಚ್ಚು ಜನರು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿರುತ್ತಾರೆ .

ಉದ್ಯೋಗ ಮೇಳದಲ್ಲಿ ಸುಮಾರು 900ಕ್ಕೂ ಹೆಚ್ಚು ಜನರು ಭಾಗವಹಿಸಿದ್ದು ಅದರಲ್ಲಿ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಯ್ಕೆಗೊಂಡಿರುತ್ತಾರೆ ಮತ್ತು 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾರ್ಟ್ ಲಿಸ್ಟ್ ಹೊಂದಿರುತ್ತಾರೆ ಮತ್ತು ಕೌಶಲ್ಯ ಮೇಳ ಕಾರ್ಯಕ್ರಮದಲ್ಲಿ ಸುಮಾರು 1000 ವಿದ್ಯಾರ್ಥಿಗಳು ಭಾಗವಹಿಸಿ ಕೌಶಲ್ಯ ತರಬೇತಿಯನ್ನು ಪಡೆದಿರುತ್ತಾರೆ ಅದೇ ದಿನ ನಡೆದ ರಸಪ್ರಶ್ನೆ ಕಾಂಪಿಟೇಶನ್ ನಲ್ಲಿ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಹುಮಾನವನ್ನು ಪಡೆದಿದ್ದು ಕ್ರಮವಾಗಿ 10 ಜನರಿಗೆ ಮೊದಲನೇ ಬಹುಮಾನವಾಗಿ 10 ಸಾವಿರ ರೂಪಾಯಿಗಳು ಎರಡನೇ ಬಹುಮಾನವಾಗಿ 10 ಜನರಿಗೆ 7500 ಮೂರನೇ ಬಹುಮಾನವಾಗಿ 10 ಜನರಿಗೆ 5000ಗಳನ್ನು ನಗದು ಬಹುಮಾನವಾಗಿ ಮಾನ್ಯ ಶ್ರೀ ವಿನಯ ಆರ್ ತಿಮ್ಮಾಪುರ  ರವರ ಅಭಿಮಾನಿ ಬಳಗದ ವತಿಯಿಂದ ನೀಡಲಾಯಿತು

ಅದೇ ರೀತಿ ಸುಮಾರು 1000 ಮಂದಿ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು ನಗರದ ಗಣೇಶ ದೇವಸ್ಥಾನದ ಬಳಿಯಿಂದ ಮುಖ್ಯರಸ್ತೆಯ ಮಾರ್ಗವಾಗಿ ದಾನಮ್ಮ ದೇವಾಲಯದವರೆಗೂ ಅಭಿಮಾನಿಗಳು ಮಾನ್ಯ ಶ್ರೀ ವಿನಯ್ ಆರ್ ತಿಮ್ಮಾಪುರ ರವರನ್ನು ಮೆರವಣಿಗೆಯಲ್ಲಿ ಕರೆತಂದದ್ದು ಬಹಳ ವಿಶೇಷವಾಗಿತ್ತು ನೆರೆದಿದ್ದ ಯುವ ಸಮೂಹ ಶ್ರೀಯುತರಿಗೆ ಹುಟ್ಟು ಹಬ್ಬದ ಶುಭಾಶಯಗಳು ಕೋರಿ ಅಭಿನಂದನೆ ಸಲ್ಲಿಸಿದರು ಇದೇ ಸಂದರ್ಭದಲ್ಲಿ ಕಾಂಗ್ರೆಸ್ನ ಹಲವಾರು ಪದಾಧಿಕಾರಿಗಳು ಕಾರ್ಯಕರ್ತರು ಮತ್ತು ಅಭಿಮಾನಿಗಳು ಉತ್ಸಾಹದಿಂದ ಪಾಲ್ಗೊಂಡು ಶ್ರೀಯುತರನ್ನು ಅಭಿನಂದಿಸಿದರು...