ಸರ್ಕಾರದ ವಿರುದ್ಧ ಅಶೋಕ್‌ ಕಿಡಿ : ಜನರ ಆರೋಗ್ಯದ ಜೊತೆ ಆಟವಾಡಬೇಡಿ

Correspondent/Bengaluru/SM News Desk

Apr 22, 2026 - 21:38
 0  3
ಸರ್ಕಾರದ ವಿರುದ್ಧ ಅಶೋಕ್‌ ಕಿಡಿ : ಜನರ ಆರೋಗ್ಯದ ಜೊತೆ ಆಟವಾಡಬೇಡಿ

ಬೆಂಗಳೂರು,ಏ.22- ತಕ್ಷಣ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಔಷಧಿಗಳ ಲಭ್ಯತೆ ಖಚಿತಪಡಿಸಬೇಕು. ಇಲ್ಲದಿದ್ದರೆ ಈ ಅನ್ಯಾಯದ ವಿರುದ್ಧ ಜನರ ಧ್ವನಿ ಇನ್ನಷ್ಟು ತೀವ್ರವಾಗಲಿದೆ, ಜನರ ಆರೋಗ್ಯದ ಜೊತೆ ಆಟವಾಡುವ ಈ ನಿರ್ಲಕ್ಷ್ಯವನ್ನು ಸಹಿಸಲಾಗುವುದಿಲ್ಲ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಎಚ್ಚರಿಕೆ ಕೊಟ್ಟಿದ್ದಾರೆ.

ತಮ ಸಾಮಾಜಿಕ ಜಾಲತಾಣ ಎಕ್‌್ಸನಲ್ಲಿ ಪೋಸ್ಟ್‌ ಮಾಡಿರುವ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಖಜಾನೆ ಖಾಲಿ ಸರ್ಕಾರಕ್ಕೆ ಔಷಧಿ ಖರೀದಿಗೂ ಗತಿ ಇಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಬಡ ರೋಗಿಗಳ ಕುಟುಂಬದವರು ಹೊರಗೆ ಔಷಧಿ ಖರೀದಿಸಬೇಕಾದ ಸ್ಥಿತಿ ಇದೆ.ಔಷಧಿ ಖರೀದಿಗೆ ಅನುಮೋದನೆ ನೀಡಲಾಗಿದೆ ಎಂದು ಸದನಕ್ಕೆ ಉತ್ತರ ನೀಡಿದ್ದ ಅನಾರೋಗ್ಯ ಇಲಾಖೆಯ ಸಚಿವ ದಿನೇಶ್‌ ಗುಂಡೂರಾವ್‌, ಸದನಕ್ಕೆ ಸುಳ್ಳು ಮಾಹಿತಿ ನೀಡಿದ್ದಾರೆಯೇ? ಎಂದು ಪ್ರಶ್ನೆ ಮಾಡಿದ್ದಾರೆ.