ನಾಗಮಂಗಲ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಸುರೇಶ್‌ಗೌಡ ಕಾರು ಅಪಘಾತ

Correspondent/Crime/Mandya/SM News Desk

Feb 22, 2026 - 20:07
 0  13
ನಾಗಮಂಗಲ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಸುರೇಶ್‌ಗೌಡ ಕಾರು ಅಪಘಾತ

ಬೆಂಗಳೂರು,ಫೆ.22 : ಕಾರ್ಯಕ್ರಮವೊಂದರ ನಿಮಿತ್ತ ನಾಗಮಂಗಲ ವಿಧಾನಸಭಾ ಕ್ಷೇತ್ರದ ಜೆಡಿಎಸ್‌‍ ಮಾಜಿ ಶಾಸಕ ಸುರೇಶ್‌ ಗೌಡ ಅವರು ಪ್ರಯಾಣಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಅವರು ಗಾಯಗೊಂಡಿದ್ದು, ಪ್ರಾಣಾ ಪಾಯದಿಂದ ಪಾರಾಗಿದ್ದಾರೆ. ಸುರೇಶ್‌ ಗೌಡ ಅವರು ಗನ್‌ಮ್ಯಾನ್‌ ಸೇರಿದಂತೆ ನಾಲ್ಕು ಮಂದಿಯೊಂದಿಗೆ ಕೊಪ್ಪಕ್ಕೆ ಹೋಗಿ ವಾಪಸಾಗುತ್ತಿದ್ದರು.ಮಧ್ಯರಾತ್ರಿ 12.15 ರ ಸುಮಾರಿನಲ್ಲಿ ನಾಗಮಂಗಲ -ಕೊಪ್ಪ ರಸ್ತೆಯಲ್ಲಿ ಬರುತ್ತಿದ್ದಂತೆ ಮಾಚೋಗೊಂಡನಹಳ್ಳಿ ಗೇಟ್‌ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ.

ಪರಿಣಾಮ ಸುರೇಶ್‌ ಗೌಡರ ಕೈಗೆ ಪೆಟ್ಟು ಬಿದ್ದಿದ್ದು, ಚಾಲಕನಿಗೂ ಗಂಭೀರ ಗಾಯಗಳಾಗಿವೆ. ಅಪಘಾತದ ರಭಸಕ್ಕೆ ಕಾರು ಭಾಗಶಃ ಜಖಂಗೊಂಡಿದೆ. ಕಾರು ಪಲ್ಟಿಯಾದ ತಕ್ಷಣ ಸುರೇಶ್‌ ಗೌಡ ಅವರ ಗನ್‌ವ್ಯಾನ್‌ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಸುರೇಶ್‌ ಗೌಡ ಹಾಗೂ ಚಾಲಕನನ್ನು ಮಂಡ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಕಳುಹಿಸಿದ್ದಾರೆ.ಈ ಬಗ್ಗೆ ಬಸರಾಳು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.