ಪ್ರಧಾನಿ ನರೇಂದ್ರ ಮೋದಿ ರವರು ಅಮೆರಿಕದ ಕೃಷಿ ಉತ್ಪನ್ನಗಳಿಗೆ 0% ಸುಂಕ ವಿಧಿಸಿ ಇಡೀ ಭಾರತದ ಅನ್ನದಾತ ರೈತ ಕುಟುಂಬಗಳಿಗೆ ಅನ್ಯಾಯ - ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಚೈತ್ರ ವಿ

Correspondent/Political/SM News Desk

Feb 28, 2026 - 09:30
 0  43
ಪ್ರಧಾನಿ ನರೇಂದ್ರ ಮೋದಿ ರವರು ಅಮೆರಿಕದ ಕೃಷಿ ಉತ್ಪನ್ನಗಳಿಗೆ 0% ಸುಂಕ ವಿಧಿಸಿ ಇಡೀ ಭಾರತದ ಅನ್ನದಾತ ರೈತ ಕುಟುಂಬಗಳಿಗೆ ಅನ್ಯಾಯ -   ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಚೈತ್ರ ವಿ

ಬೆಂಗಳೂರು,ಫೆ.24 : ಇತ್ತೀಚಿನ ಬೆಳವಣಿಗೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ರವರುರವರು ಇಸ್ರೇಲ್ ಭೇಟಿ ವೇಳೆ ತಮಗೆ ಬೆಂಬಲ ನೀಡುವಂತೆ ನೃತ್ಯ ಮಾಡಿ ದೇಶದ ಘನತೆ ಗೌರವ ಮರೆಯದೆನು ಬೀದಿಗೆಳಿದಿರುವುದನ್ನು ಹೆಪ್ಸ್ಟೀನ್ ಸಂಸ್ಥೆ ವರದಿಯಲ್ಲಿ  ಉಲ್ಲೇಖವಾಗಿರುವುದು ವಿಶ್ವದ್ಯಂತ ಚರ್ಚೆಗೆ ಬಂದಿದೆ. ಅಮೆರಿಕದ ಕೃಷಿ ಉತ್ಪನ್ನಗಳಿಗೆ 0% ಸುಂಕ ವಿಧಿಸಿ ಇಡೀ ಭಾರತದ ಅನ್ನದಾತ ರೈತ ಕುಟುಂಬಗಳಿಗೆ ಅನ್ಯಾಯ ಮಾಡುವ ಮೂಲಕ ರೈತ ವಿರೋಧಿ ನೀತಿಯನ್ನ ಅನುಸರಿಸುತ್ತಿದ್ದಾರೆ ಇದಕ್ಕೆ ಪ್ರತಿಭಟಿಸಲು ಮುಂದಾದವರ ಮೇಲು ಗಧಾ ಪ್ರಹಾರ ಮಾಡುತ್ತಿದ್ದಾರೆ. ಈ ಹಿಂದೆಯೂ ರೈತ ವಿರೋಧಿ ಕಾನೂನನ್ನು ತಂದು ನೂರಾರು ದಿನಗಳ ಕಾಲ ರೈತರನ್ನ ಬೀದಿಯಲ್ಲಿ ರಸ್ತೆಯಲ್ಲಿ ಪ್ರತಿಭಟನಾಕಾರರಾಗಿ ನಿಲ್ಲಿಸಿದ ಕೀರ್ತಿ ಮೋದಿ ಸರ್ಕಾರದ್ದು, ನಂತರ ರಾಷ್ಟ್ರದ ರೈತರ ಆಕ್ರೋಶಕ್ಕೆ ಗುರಿಯಾಗಿ ತಾತ್ಕಿಲಕವಾಗಿ ಹಿಂಪಡದಿದ್ದರು. ಎ ಐ ಶೃಂಗಸಭೆಯಲ್ಲಿ ವಿದೇಶಿ ಆವಿಷ್ಕಾರಗಳನ್ನು ಸ್ವದೇಶಿ ಎಂದು ಹೇಳಿ ತಜ್ಞರ ಉತ್ತರದ ಮೂಲಕ ದೇಶಕ್ಕೆ ಮುಖಭಂಗವಾಗುವ ರೀತಿ ಮಾಡಿದ್ದಾರೆ ಎನ್ನಲಾಗಿದೆ. 

ಮೇಕ್ ಇನ್ ಇಂಡಿಯಾ ಎಂದು ಕೇವಲ ಬಾಯಲ್ಲಿ ಹೇಳುವ ಮೋದಿಯವರು ಭಾರತೀಯ ಉತ್ಪನ್ನಗಳಿಗೆ ಬೆಲೆ ತರಲೆ ಇಲ್ಲ ಇಂದು ಅಮೆರಿಕ ಸೇರಿದಂತೆ ವಿದೇಶಗಳ ಮುಂದೆ ದೇಶವನ್ನು ನಗ ಪಾಟಲಿಗೆ ತಂದಿದ್ದಾರೆ. ಮೋದಿ ಅವರು ಒಂದಲ್ಲ ಎರಡಲ್ಲ ಸುಳ್ಳು ಅಧಿಕಾರಕ್ಕೆ ಬಂದಾಗ ಹೇಳುತ್ತಿದ್ದಾರೆ ಜನಧನ ಯೋಜನೆ ಯುವಕರಿಗೆ ವರ್ಷಕ್ಕೆ ಎರಡು ಕೋಟಿ ಉದ್ಯೋಗ, ಕಪ್ಪು ಹಣ ದೇಶಕ್ಕೆ ಹಿಂದಿರುಗಿಸುವುದು ಸೇರಿದಂತೆ ಯಾವ ಒಂದು ಬರವಸೆಯನ್ನು ಈಡೇರಿಸದೆ ವಿಶ್ವಾದ್ಯಂತ ಚರ್ಚೆಗೆ ಕಾರಣವಾಗಿದ್ದಾರೆ. ಕೊರೋನಾ ಸಂದರ್ಭದಲ್ಲಿ ತಟ್ಟೆ ಲೋಟ ಒಡೆಯುವ ಮೂಲಕ ಕರೋನ ಓಡಿಸುತ್ತೇನೆ ಎಂದು ಹೇಳಿ ದೇಶಾದ್ಯಂತ ಕರೆ ನೀಡಿ, ಲಕ್ಷಾಂತರ ಸಾವು ನೋವುಗಳ ನಡುವೆಯೂ ನಿಯಂತ್ರಣ ತರದಿದ್ದು ನಾವೇ ನೋಡಿದ್ದೇವ. ಕಾರ್ಮಿಕ ಕಾಯಿದೆಗಳಂತೂ 25 ಕೋಟಿಗೂ ಹೆಚ್ಚು ಕಾರ್ಮಿಕರಿಗೆ ಹಾನಿ ಉಂಟು ಮಾಡುವ ಕಾಯ್ದೆಗಳಿಗೆ ಕೈ ಹಾಕಿದ್ದು ಕಾರ್ಮಿಕ ಸಂಘಟನೆಗಳು ಕೇಂದ್ರ ಸರ್ಕಾರ ವಿರುದ್ಧ ಬೀದಿಗಿಡಿದು ಪ್ರತಿಭಟನೆ ಕೂಡ ನಡೆಸಿದವು. 

ಅವೈಜ್ಞಾನಿಕ ಆರ್ಥಿಕ ನೀತಿಗಳಿಂದ ದೇಶದ ಆರ್ಥಿಕ ಪರಿಸ್ಥಿತಿ ಜಿಡಿಪಿ ಡಾಲರ್ ವ್ಯಾಲ್ಯೂ ಕುಸಿದಿದೆ. ಯುವಕರಲ್ಲಂತೂ ಭರವಸೆಗಳು ಹುಸಿಯಾಗಿವೆ. ಇಂಥ ಸಂದರ್ಭದಲ್ಲಿ ಕೆಲ ಯುವಕರು ಎ ಐ ಶೃಂಗಸಭೆ ಎಲ್ಲಿ ಸರ್ಕಾರದ ನೀತಿ ವಿರುದ್ಧ ಪ್ರತಿಭಟಿಸುವುದನ್ನು ಅಪರಾಧವೆಂದು ಬಂಧಿಸಿದ್ದೆ ಅಲ್ಲದೆ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ಉದಯ ಬಾನು ಚಿಬ್ರನ್ನ ಬಂದಿಸಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ ಇರಬಹುದು, ಕೂಡಲೇ ಅವರನ್ನು ಬಿಡುಗಡೆಗೊಳಿಸಬೇಕು ಪ್ರತಿಭಟನೆ, ಹೋರಾಟ, ಚಳುವಳಿ, ಕೋರಿಕೆ, ಇವುಗಳಿಂದಲೇ ದೇಶದ ಸ್ವತಂತ್ರ ಬಂದಿದ್ದು ದೇಶಕ್ಕೆ ಹಲವಾರು ಕಾನೂನು ಸಾಮಾಜಿಕ ನ್ಯಾಯ ಸಿಕ್ಕಿದ್ದು ಎಂಬುದು ಪ್ರಧಾನಮಂತ್ರಿಗಳು ತಿಳಿದುಕೊಳ್ಳಬೇಕು. ಹಲವಾರು ಪ್ರಧಾನಿಯ ನ್ಯೂನ್ಯತೆಗಳನ್ನು ಎತ್ತಿ ಹಿಡಿಯುತ್ತಿದ್ದ ಯುವ ಕಾಂಗ್ರೆಸ್ಸನ್ನು ಹತ್ತಿಕ್ಕುವ ಉದ್ದೇಶದಿಂದ ಯುವ ಕಾಂಗ್ರೆಸ್ ಸಿಪಾಯಿಗಳನ್ನ ಬಂಧಿಸಿರುವುದು ಖಂಡನೀಯ. 
ಎಂದು ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಚೈತ್ರ ವಿ ರವರು ಕೇಂದ್ರ ಪ್ರಧಾನಿ ನಡೆಯನ್ನ ಖಂಡಿಸಿದ್ದಾರೆ. ಈಗಾಗಲೇ ಯುವ ಕಾಂಗ್ರೆಸ್ ಸೇರಿದಂತೆ ಯುವ ಸಂಘಟನೆಗಳು ಹಾಗೂ ಪ್ರಗತಿಪರ ಸಂಘಟನೆಗಳು, ಚಳುವಳಿಕಾರರು ಇದರ ವಿರುದ್ಧ ದನಿಯತ್ತಿದು ಮುಂದೆ ಹೋರಾಟದ ಹಾದಿ ಹಿಡಿಯಲಿದೆ.