ಆನೇಕಲ್ ಕನ್ನಡ ಸಾಹಿತ್ಯ ಪರಿಷತ್ತು ವಿಶಾಲ ಆರಾಧ್ಯ ಅವರ ಅಂದದ ಉಡುಗೊರೆ ಹಾಗೂ ಆದೂರು ಪ್ರಕಾಶ್ ಅವರ ಕುಂಜರ ಪುಸ್ತಕ ಬಿಡುಗಡೆ

Correspondent/Anekal/Mallikarjun/SM News Desk

Mar 19, 2026 - 07:52
 0  5
ಆನೇಕಲ್  ಕನ್ನಡ ಸಾಹಿತ್ಯ ಪರಿಷತ್ತು ವಿಶಾಲ ಆರಾಧ್ಯ ಅವರ ಅಂದದ ಉಡುಗೊರೆ ಹಾಗೂ ಆದೂರು ಪ್ರಕಾಶ್ ಅವರ ಕುಂಜರ ಪುಸ್ತಕ ಬಿಡುಗಡೆ

ಆನೇಕಲ್, ಕನ್ನಡ ಸಾಹಿತ್ಯ ಪರಿಷತ್ತು ಆನೇಕಲ್ ವಿಧಾನಸಭಾ ಕ್ಷೇತ್ರದ ವತಿಯಿಂದ ವಿಶಾಲ ಆರಾಧ್ಯ ಅವರ ಅಂದದ ಉಡುಗೊರೆ ಹಾಗೂ ಆದೂರು ಪ್ರಕಾಶ್ ಅವರ ಕುಂಜರ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಆನೇಕಲ್ ನ ವಿಶ್ವಚೇತನ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿತ್ತು 

ಪುಸ್ತಕಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿಗಳಾದ ಸಂತೋಷ ಹೆಗಡೆ ವಿದ್ಯಾರ್ಥಿಗಳು ಭ್ರಷ್ಟಾಚಾರ ಮುಕ್ತ ಭಾರತವನ್ನು ನಿರ್ಮಾಣ ಮಾಡಬೇಕು ಆ ದಿಸೆಯಲ್ಲಿ ಸಂಕಲ್ಪವನ್ನು ಮಾಡಬೇಕೆಂಬ ಸಂದೇಶ ನೀಡಿದರು

ಮೊಬೈಲ್ ನ ಅಬ್ಬರದಲ್ಲಿ ಪುಸ್ತಕಗಳು ಕಳೆದುಹೋಗಿ ಆಪತ್ತಿನ ಸಮಾಜವನ್ನು ನಿರ್ಮಾಣ ಮಾಡುತ್ತಿದ್ದೇವೆ ಮಾನವೀಯತೆಯನ್ನ ಮರೆತು ಏನನ್ನು ಸಾಧಿಸಲಾಗುವುದಿಲ್ಲ ಸರ್ಕಾರಗಳು ಜನಸಾಮಾನ್ಯರ ಬಗ್ಗೆ ಯೋಚನೆ ಮಾಡಿ ಯೋಜನೆಗಳನ್ನು ತಂದು ಕಲ್ಯಾಣ  ರಾಷ್ಟ್ರವನ್ನಾಗಿ ಮಾಡಬೇಕು ವಿದ್ಯಾವಂತರು ಉನ್ನತ ಹುದ್ದೆಗಳನ್ನು ಅಲಂಕರಿಸಿ ಜನರ ತೆರಿಗೆಯನ್ನು ಲೂಟಿ ಮಾಡುವ ಕೆಲಸವನ್ನು ಮಾಡುವುದು ಮಹಾ ಅಪರಾಧವಾಗಿದೆ ಇದಕ್ಕೆ ಕಡಿವಾಣ ಹಾಕಲು ಎಲ್ಲರೂ ಒಗ್ಗಟ್ಟಾಗಬೇಕಾಗಿದೆ ಎಂದು ತಿಳಿಸಿದರು 

ವಕೀಲರಾದ ವಿಜಯಕುಮಾರ್ ಮಾತನಾಡಿ ಇಂಗ್ಲೀಷ್ ನ ವ್ಯಾಮೋಹದಲ್ಲಿ ಕನ್ನಡ ಭಾಷೆಯು ಸೊರಗಿ ಹೋಗುತಿದೆ ಕನ್ನಡಿಗರಾದ ನಾವು ಸ್ವಾಭಿಮಾನದಿಂದ ಭಾಷೆಯನ್ನು ಅಪ್ಪಿಕೊಂಡು ಉಳಿಸಿ ಬೆಳೆಸಬೇಕಾಗಿದೆ ತಾಲೂಕಿನಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ಪುಸ್ತಕಗಳು ಹೊರ ಬರುತ್ತಿರುವುದು ಉತ್ತಮ ಸಮಾಜದ ಸಂಕೇತವಾಗಿದೆ ಎಂದು ಶ್ಲಾಗಿಸಿದರು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರಕಾಶ್ ರೆಡ್ಡಿ ಪುಸ್ತಕಗಳು ಮಾನವೀಯ ಮೌಲ್ಯಗಳನ್ನು ತುಂಬಿ, ಮನುಷ್ಯನನ್ನು ಸಂತನನ್ನಾಗಿಸುತ್ತದೆ ನಮ್ಮ ಪರಂಪರೆಯನ್ನು ಉತ್ತಮಗೊಳಿಸಲು ಓದುವುದನ್ನು ಎಲ್ಲರೂ ರೂಡಿಸಿಕೊಳ್ಳಬೇಕು ಕೇವಲ ಅಂಕಗಳ ಹಿಂದೆ ಹೋಗುವುದರಿಂದ ಯಾವ ಪ್ರಯೋಜನವು ಆಗುವುದಿಲ್ಲ ಸಮಾಜದಲ್ಲಿ ಶಾಂತಿ ಸಹನೆ ಪ್ರೀತಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತವೆ ಎಂದು ಹೇಳಿದರು 

ಕಾರ್ಯಕ್ರಮದಲ್ಲಿ ಸಾಧಕರಾದ ಶ್ರಾವಣ ಲಕ್ಷ್ಮಣ್ ಬಿದರಗೆರೆ ಮೂರ್ತಿ ಗೌಡ ಹಾರಗದ್ದೆ ಮುನಿಚೌಡಪ್ಪ ಅವರನ್ನು ಸನ್ಮಾನಿಸಲಾಯಿತು ದಿವ್ಯ ಸಾನಿಧ್ಯವನ್ನು ರಾಮಣ್ಣ ಸ್ವಾಮಿಗಳು ಶಾಮಣ್ಣ ಸ್ವಾಮಿಗಳು ವಹಿಸಿದ್ದರು

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಸನೀತ ಮಮತಾ ಯಜಮಾನ್ ಪುನೀತ ಕೃಷ್ಣಮೂರ್ತಿ ವಕೀಲರಾದ ಲಕ್ಷ್ಮೀ ಸಂಪತ್ ವ್ಯಾಪಾರಿ ನಾರಾಯಣ್ ಇಲಿಯಾಜ್ ರೆಹಮತುಲ್ಲಾ ಮಾದೇಶ್ ಕರವೇ ಕಸಾಪ ಆದೂರು ಪ್ರಕಾಶ್ ಮಲ್ಲಿಕಾರ್ಜುನ ರಾಧ್ಯ ಬಿ ಮಿಲಿಟರಿ ಕುಮಾರ್  ಹಾಜರಿದ್ದರು .