ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ಜೆಡಿಎಸ್ ಪಕ್ಷದ14 ವಿವಿಧ ಘಟಕಗಳ ನೇಮಕಾತಿ ಪತ್ರ ವಿತರಣಾ ಕಾರ್ಯಕ್ರಮ
Correspondent/Bengaluru/Political/SM News Desk
ಬೆಂಗಳೂರು, ಮಾ.23 : ಇಂದು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ನೇಮಕಾತಿ ಪತ್ರ ವಿತರಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಈ ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಜಿಲ್ಲಾಧ್ಯಕ್ಷರಾದಂತಹ ಸನ್ಮಾನ್ಯ ಶ್ರೀ ಎಚ್ಎಂ ರಮೇಶ್ ಗೌಡ ರವರು ಹಾಗೂ ಬೆಂಗಳೂರು ಪಶ್ಚಿಮ ನಗರ ಜಿಲ್ಲೆಯ ಜಿಲ್ಲಾಧ್ಯಕ್ಷರಾದಂತಹ ಸನ್ಮಾನ್ಯ ಶ್ರೀ ಟಿ.ತಿಮ್ಮೇಗೌಡ ರವರು ಮತ್ತು ವಿಧಾನ ಪರಿಷತ್ ಸದಸ್ಯರಾದಂತಹ ಸನ್ಮಾನ್ಯ ಶ್ರೀ ಜವರಾಯಿಗೌಡ ರವರು ಹಾಗೂ ಮಾಜಿ ವಿಧಾನಸಭಾ ಸದಸ್ಯರಾದಂತ ಸನ್ಮಾನ್ಯ ಶ್ರೀ ಇ. ಕೃಷ್ಣಪ್ಪರವರು ಮತ್ತು ಜಿಬಿಎ ಮಹಿಳಾ ಘಟಕದ ಅಧ್ಯಕ್ಷರಾದಂತಹ ಶ್ರೀಮತಿ ಶ್ರೀ ಶೈಲ ಸಂತೋಜಿ ರಾವ್ ರವರು ಮತ್ತು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದಂತ ಸನ್ಮಾನ್ಯ ಶ್ರೀ ಆರ್ ಚೆನ್ನಕೇಶವ ಮೂರ್ತಿರವರು ಮತ್ತು ಜೆಡಿಎಸ್ ಪಕ್ಷದ ಮುಖಂಡರಾದಂತಹ ಸನ್ಮಾನ್ಯ ಶ್ರೀ ಕೃಷ್ಣಮೂರ್ತಿ ರವರು ಮತ್ತು ಇನ್ನೂ ಮುಂತಾದ ಜೆಡಿಎಸ್ ಪಕ್ಷದ ನಾಯಕರು ಮತ್ತು ಮುಖಂಡರುಗಳು ಭಾಗವಹಿಸಿದ್ದರು ಇದೇ ಸಂದರ್ಭದಲ್ಲಿ ನೂತನವಾಗಿ ಆಯ್ಕೆಗೊಂಡಂತಹ 14 ವಿವಿಧ ಘಟಕಗಳ ಅಧ್ಯಕ್ಷರುಗಳು ಉಪಾಧ್ಯಕ್ಷರುಗಳು ವಾರ್ಡ್ ಅಧ್ಯಕ್ಷರುಗಳು ಮತ್ತು ಜೆಡಿಎಸ್ ಪಕ್ಷದ ಕಾರ್ಯಕರ್ತರುಗಳು ರಾಜರಾಜೇಶ್ವರಿ ನಗರದ ಜೆಡಿಎಸ್ ಪಕ್ಷದ ಅಭಿಮಾನಿಗಳು ಸಹ ಈ ಸಂದರ್ಭದಲ್ಲಿ ಭಾಗವಹಿಸಿದ್ದರು...
