ಕೇಬಲ್‌ ವೈರ್‌ ಕೊರಳಿಗೆ ಸುತ್ತಿಕೊಂಡು ಇಬ್ಬರು ಯುವಕರು ಸಾವನ್ನಪ್ಪಿರುವ ಆಘಾತಕಾರಿ ಘಟನೆ

Correspondent/Hubbali/SM News Desk

Mar 25, 2026 - 06:55
 0  7
ಕೇಬಲ್‌ ವೈರ್‌ ಕೊರಳಿಗೆ ಸುತ್ತಿಕೊಂಡು ಇಬ್ಬರು ಯುವಕರು ಸಾವನ್ನಪ್ಪಿರುವ ಆಘಾತಕಾರಿ ಘಟನೆ

ಹುಬ್ಬಳ್ಳಿ,ಮಾ.24 : ಬೈಕ್‌ನಲ್ಲಿ ಹೋಗುವಾಗ ಇಂಟರ್ನೆಟ್‌ ಸಂಪರ್ಕದ ಕೇಬಲ್‌ ವೈರ್‌ ಕೊರಳಿಗೆ ಸುತ್ತಿಕೊಂಡು ಇಬ್ಬರು ಯುವಕರು ಸಾವನ್ನಪ್ಪಿರುವ ಆಘಾತಕಾರಿ ಘಟನೆ ನಗರದ ಗೋಕುಲ್‌ ರಸ್ತೆಯ ಓಸಿಯಸ್‌‍ ಮಾಲ್‌ ಬಳಿ ನಡೆದಿದೆ.

ಮೃತರನ್ನು ತಾಜ್‌ ನಗರ ನಿವಾಸಿಗಳಾದ ಫಯಾಜ್‌ (25) ಮತ್ತು ಮೋಹಿದ್‌ (27) ಎಂದು ಗುರುತಿಸಲಾಗಿದೆ. ರಾತ್ರಿ ಗೋಕುಲ್‌ ರೋಡ್‌ ರಸ್ತೆಯಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದಾಗ, ಓಸಿಯಸ್‌‍ ಮಾಲ್‌ ಬಳಿ ಇಂಟರ್ನೆಟ್‌ ಕೇಬಲ್‌ ಜೋತು ಬಿದ್ದಿದ್ದನ್ನು ತಿಳಿಯದೆ ಮುಂದೆ ಹೋದ ಯುವಕನ ಕೊರಳಿಗೆ ವೈರ್‌ ಸುತ್ತಿಕೊಂಡಿದೆ.

ಇದೇ ವೇಳೆ ಬೈಕ್‌ ಸ್ಕಿಡ್‌ ಆಗಿ ಇಬ್ಬರ ಕುತ್ತಿಗೆಗೂ ವೈರ್‌ ಬಿಗಿದುಕೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.ಸ್ಥಳೀಯರು ಇದನ್ನು ನೋಡಿ ಕೂಡಲೇ ನೆರವಿಗೆ ಬಂದಿದ್ದು ಇಬ್ಬರನ್ನು ಕಿಮ್ಸೌ ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಿಲ್ಲ.

ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಕೇಬಲ್‌ ವೈರ್‌ಗಳನ್ನು ಸರಿಯಾಗಿ ಅಳವಡಿಸದೆ ನಿರ್ಲಕ್ಷ್ಯ ತೋರಿದವರ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ.ನಗರದಲ್ಲಿ ಈ ಘಟನೆ ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ. ಈ ಸಂಬಂಧ ಹುಬ್ಬಳ್ಳಿ ಉತ್ತರ ಸಂಚಾರಿ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.