ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಜಾತ್ಯತೀತ ಜನತಾದಳ ಪಕ್ಷದ ನೂತನವಾಗಿ ಆಯ್ಕೆಗೊಂಡಂತಹ 14 ವಿವಿಧ ಘಟಕಗಳ ನೇಮಕಾತಿ ಪತ್ರ ವಿತರಣಾ ಕಾರ್ಯಕ್ರಮ

Correspondent/Political/Bengaluru/SM News Desk

Mar 24, 2026 - 08:59
Mar 24, 2026 - 09:10
 0  4
ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಜಾತ್ಯತೀತ ಜನತಾದಳ ಪಕ್ಷದ ನೂತನವಾಗಿ ಆಯ್ಕೆಗೊಂಡಂತಹ 14 ವಿವಿಧ ಘಟಕಗಳ ನೇಮಕಾತಿ ಪತ್ರ ವಿತರಣಾ ಕಾರ್ಯಕ್ರಮ

ಬೆಂಗಳೂರು, ಮಾ.23 : ಬೆಂಗಳೂರಿನ ಮಹಾಲಕ್ಷ್ಮಿ ವಿಧಾನಸಭಾ ಕ್ಷೇತ್ರದಲ್ಲಿ  ಮಾ.21ರ ಇಂದು ಜಾತ್ಯತೀತ ಜನತಾದಳ ಪಕ್ಷದ ಸಭೆಯನ್ನು ಏರ್ಪಡಿಸಲಾಗಿದ್ದು. ಈ ಸಭೆಯಲ್ಲಿ ಬೆಂಗಳೂರು ನಗರ ಜಿಲ್ಲೆಯ ಅಧ್ಯಕ್ಷರಾದಂತಹ ಸನ್ಮಾನ್ಯ ಶ್ರೀ ಎಚ್ಎಂ ರಮೇಶ್ ಗೌಡ ರವರು ಮತ್ತು ಬೆಂಗಳೂರು ಪಶ್ಚಿಮ ನಗರ ಜಿಲ್ಲೆಯ (ಪಾಲಿಕೆ) ಜಿಲ್ಲಾಧ್ಯಕ್ಷರಾದಂತಹ ಸನ್ಮಾನ್ಯ ಶ್ರೀ ಟಿ ತಿಮ್ಮೇಗೌಡ ರವರು,ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷರಾದಂತಹ ಶ್ರೀಮತಿ ಶ್ರೀ ಶೈಲಜಾ ಎಸ್ ರಾವ್ ರವರು ಮತ್ತು ಜೆಡಿಎಸ್ ಪಕ್ಷದ ವಕ್ತಾರರಾದ ಮಾನ್ಯ ಶ್ರೀ ದೇವರಾಜ್ ರವರು ಉಪಸ್ಥಿತರಿದ್ದು ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಮಾನ್ಯ ಶ್ರೀ ಎ ಎನ್ ದಯಾನಂದಮೂರ್ತಿ ರವರು ಹಾಗೂ ಮಹಿಳಾ ಘಟಕದ ಅಧ್ಯಕ್ಷರಾದಂತ ಶ್ರೀಮತಿ ಶ್ರೀ ಜಯಲಕ್ಷ್ಮಿ ಅವರು ಮತ್ತು ನೂತನವಾಗಿ ಆಯ್ಕೆಗೊಂಡ ಉಪಾಧ್ಯಕ್ಷರುಗಳು ಹಾಗೂ ವಾರ್ಡ್ ಅಧ್ಯಕ್ಷರುಗಳು ವಿವಿಧ ವಿಭಾಗಗಳ ಅಧ್ಯಕ್ಷರು ಮತ್ತು ಉಪಾಧ್ಯಕ್ಷರುಗಳು ಕಾರ್ಯದರ್ಶಿಗಳು ಹಿರಿಯ ಜೆಡಿಎಸ್ ಮುಖಂಡರುಗಳು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು ಇದೇ ಸಂದರ್ಭದಲ್ಲಿ ನೂತನವಾಗಿ ಆಯ್ಕೆಗೊಂಡಂತಹ ಉಪಾಧ್ಯಕ್ಷರುಗಳು ಹಾಗೂ ವಾರ್ಡ್ ಅಧ್ಯಕ್ಷರುಗಳಿಗೆ ನೇಮಕಾತಿ ಪತ್ರವನ್ನು ಪಕ್ಷದ ವತಿಯಿಂದ ವಿತರಿಸಲಾಯಿತು...