ಎಂಜಿ ಮಧುಸೂದನ್ ರವರ ಹುಟ್ಟುಹಬ್ಬದ ಪ್ರಯುಕ್ತ ಲಯನ್ಸ್ ಕ್ಲಬ್ ಆಫ್ ಮಾಲೂರು ಟೌನ್, ಸಂಯೋಗದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಆರೋಗ್ಯ ತಪಾಸಣಾ ಶಿಬಿರ

Correspondent/Kolar/Srinath/SM News Desk

Feb 19, 2026 - 08:13
 0  62
ಎಂಜಿ ಮಧುಸೂದನ್ ರವರ ಹುಟ್ಟುಹಬ್ಬದ ಪ್ರಯುಕ್ತ ಲಯನ್ಸ್ ಕ್ಲಬ್ ಆಫ್ ಮಾಲೂರು ಟೌನ್, ಸಂಯೋಗದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಆರೋಗ್ಯ ತಪಾಸಣಾ ಶಿಬಿರ

ಮಾಲೂರು:- ರಾಜಕೀಯವಾಗಿ ನಾನು ನಿರುದ್ಯೋಗಿಯಾಗಿರುವುದರಿಂದ ಮತ್ತು ಸಾಂದರ್ಭಿಕವಾಗಿ ರಾಜಕೀಯ ಪಕ್ಷದವರು ನಮ್ಮನ್ನ ನಿವೃತ್ತಿಗೊಳಿಸಿರುವುದರಿಂದ ಪೂರ್ಣ ಸಮಯವನ್ನು ಲಯನ್ಸ್ ಕ್ಲಬ್ ಮೂಲಕ ಜನ ಸೇವೆ ಮಾಡಲು ಮುಂದಾಗಿದ್ದೇನೆ ಎಂದು ಲಯನ್ಸ್ ಕ್ಲಬ್ ಆಫ್ ಮಾಲೂರು ಪ್ರಾದೇಶಿಕ ಅಧ್ಯಕ್ಷ ಲಯನ್ ಮಧುಸೂದನ್ ಹೇಳಿದರು. ನಗರದ ಗಾಂಧಿ ವೃತ್ತದ ಪಟಾಲಮ್ಮ ದೇವಾಲಯದ  ಆವರಣದಲ್ಲಿ ಎಂಜಿ ಮಧುಸೂದನ್ ರವರ ಹುಟ್ಟುಹಬ್ಬದ ಪ್ರಯುಕ್ತ ಲಯನ್ಸ್ ಕ್ಲಬ್ ಆಫ್ ಮಾಲೂರು ಟೌನ್, ಮಾಲೂರು ಲಯನ್ಸ್ ಸರ್ವಿಸ್ ಟ್ರಸ್ಟ್, ಎಮ್ ವಿ ಜಿ ಆಸ್ಪತ್ರೆ ಸಂಯೋಗದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.

ನಮಗೆ ರಾಜಕೀಯ ಪಕ್ಷಗಳಲ್ಲಿ ನಿವೃತ್ತಿಯನ್ನು ಕೊಟ್ಟಿದ್ದು ಆ ನಿವೃತ್ತಿಯು ತಾತ್ಕಾಲಿಕವಾಗಿಯೋ ಅಥವಾ ಕಾಯಂ ನಿವೃತ್ತಿಯೋ ಗೊತ್ತಿಲ್ಲದಂತಾಗಿದೆ.ರಾಜಕೀಯವಾಗಿ ನಾವು ನಿರುದ್ಯೋಗಿಗಳಾಗಿರುವುದರಿಂದ ಮತ್ತು ಸಾಂದರ್ಭಿಕವಾಗಿ ರಾಜಕೀಯ ಪಕ್ಷದವರು ನಮ್ಮನ್ನ ನಿವೃತ್ತಿಗೊಳಿಸಿರುವುದರಿಂದ ಪೂರ್ಣ ಸಮಯವನ್ನು ಲಯನ್ಸ್ ಕ್ಲಬ್ ನಲ್ಲಿ ಜನ ಸೇವೆಗೆ ಮುಂದಾಗಿದ್ದೇವೆ ಸೇವೆ ಎನ್ನುವುದು ನಮ್ಮ ರಕ್ತದಲ್ಲಿದೆ ಅದರಲ್ಲಿ ಕೆಲವರು ರಾಜಕೀಯ ಪಕ್ಷವನ್ನು ಆಯ್ಕೆ ಮಾಡಿಕೊಂಡಿರುತ್ತಾರೆ, ಇನ್ನು ಕೆಲವರು ಸಂಘ ಸಂಸ್ಥೆಗಳನ್ನು ಆಯ್ಕೆ ಮಾಡಿಕೊಂಡಿರುತ್ತಾರೆ ನಾವು ಸ್ಥಳೀಯರಾಗಿದ್ದು ಇಲ್ಲಿಯೇ ಹುಟ್ಟಿ ಇಲ್ಲಿಯೇ ಬೆಳೆದು ಇದೇ ಮಣ್ಣಿನಲ್ಲಿ ಜೀವನ ಸಾಗಿಸುತ್ತಿರುವುದರಿಂದ ಇಲ್ಲಿ ಬೀಸುವ ಗಾಳಿ ಬಿಸಿಲು ಬೆಳಕಿನೊಂದಿಗೆ ನನ್ನ ಋಣ ಇದೆ ಅದನ್ನು ತೀರಿಸಲು ಜನಸೇವೆ ಮಾಡಲು ಮುಂದಾಗಿದ್ದೇನೆ. 

ಇಂದು ಪ್ರಾಮಾಣಿಕವಾಗಿ ಮತ್ತು ನಿಸ್ವಾರ್ಥವಾಗಿ ಸೇವೆ ಮಾಡುವ ಅವಶ್ಯಕತೆ ಇದೆ ಅಭಿವೃದ್ಧಿಯೆಂದರೆ ದೊಡ್ಡ ದೊಡ್ಡ ಕಟ್ಟಡಗಳನ್ನು ಹಾಗೂ ದೊಡ್ಡ ದೊಡ್ಡ ರಸ್ತೆಗಳನ್ನು ನಿರ್ಮಿಸುವುದಲ್ಲ, ಮನುಷ್ಯನು ಅವರಿಗೊಂದು ಆರೋಗ್ಯಕರವಾಗಿ ಹಾಗೂ ನೆಮ್ಮದಿಯಾಗಿ ಜೀವನ ಮಾಡಲು ಅವರಿಗೊಂದು ಉತ್ತಮವಾದ ವಾತಾವರಣ ನಿರ್ಮಾಣ ಮಾಡುವುದು ಬ್ರಷ್ಟಾಚಾರ ಮುಕ್ತ ಶಾಂತಿ ವಾತಾವರಣವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ನಮ್ಮದೊಂದು ಅಳಿಲು ಸೇವೆಯಾಗಿದ್ದು ಈ ಭಾಗದ ಜನ ನನ್ನನ್ನು ಗುರುತಿಸಿ ನನ್ನ ಸೇವೆಯನ್ನು ಬಯಸುತ್ತಿದ್ದಾರೆ ಎಲ್ಲಿಯವರೆಗೂ ಜನ ನನ್ನ ಸೇವೆಯನ್ನು ನಿರೀಕ್ಷೆಪಡುತ್ತಾರೆಯೋ ಅಲ್ಲಿಯವರೆಗೂ ನಾನು ನನ್ನ ಸೇವೆಯನ್ನು ಪ್ರಾಮಾಣಿಕವಾಗಿ ಮಾಡುತ್ತಿರುತ್ತೇನೆ ಎಂದು ನುಡಿದರು.ಕೆಲವರು ತಮ್ಮ ಹುಟ್ಟುಹಬ್ಬಗಳನ್ನು ಐಶಾರಾಮಿಕವಾಗಿ ವಿದೇಶಗಳಲ್ಲಿ ಮಾಡುತ್ತಾರೆ ಆದರೆ ನಾನು ನನ್ನ ಹುಟ್ಟುಹಬ್ಬವನ್ನು ನಮ್ಮ ಊರಿನ ಜನರೊಟ್ಟಿಗೆ ಸೇರಿ ಆರೋಗ್ಯ ತಪಾಸಣೆ ಮಾಡಿಸುವ ಮೂಲಕ ಆಚರಣೆ ಮಾಡುತ್ತಿದ್ದೇನೆ. 

ಯುವ ಮುಖಂಡ ಪ್ರದೀಪ್ ರೆಡ್ಡಿ ಮಾತನಾಡಿ ಮಧುಸೂದನ್ ಮತ್ತು ನಾನು ಇದೇ ಊರಿನಲ್ಲಿ ಹುಟ್ಟಿ ಬೆಳೆದ ಬಾಲ್ಯ ಸ್ನೇಹಿತರಾಗಿದ್ದು ಒಟ್ಟಿಗೆ ವ್ಯಾಸಂಗವನ್ನು ಸಹ ಮಾಡಿದ್ದೇವೆ. ಮಧುಸೂದನ್ ರವರಿಗೆ ಬಾಲ್ಯದಿಂದಲೂ ಸಮಾಜ ಸೇವೆ ಮಾಡುವ ಕಾಳಜಿ ಇದೆ. ಅದನ್ನು ಮುಂದುವರಿಸಿಕೊಂಡು ಬರುತ್ತಿದ್ದು ಮಾಲೂರು ತಾಲೂಕಿನ ಬಡ ಜನತೆ ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಆಗು ಮಧುಸೂದನ್ ರವರಿಗೆ ದೇವರು ಆರೋಗ್ಯ ಐಶ್ವರ್ಯ ಅಧಿಕಾರ ಕೊಟ್ಟು ಕಾಪಾಡಲಿ ಏಕೆಂದರೆ ಕೆಲವರು   ಕಲೆಕ್ಷನ್ ಮಾಡಿ ತಮ್ಮ ಹುಟ್ಟು ಹಬ್ಬಗಳನ್ನು ಆಚರಣೆ ಮಾಡಿಕೊಂಡು ಬಿಂಬಿಸುವ ನಾಯಕರನ್ನು ನೋಡಿದ್ದೇನೆ.  ಅಂತಹ ಕಾಲದಲ್ಲಿ ತಮ್ಮ ಸ್ವಂತ ಹಣದಲ್ಲಿ ಜನಸೇವೆ ಮಾಡಿ ಜನರ ಆರೋಗ್ಯ ಚೆನ್ನಾಗಿರಬೇಕು ಎಂದು ಬಯಸುತ್ತಿರುವ ಇವರಿಗೆ ಶುಭವಾಗಲಿ ಎಂದು ನುಡಿದರು‌. ಈ ಕಾರ್ಯಕ್ರಮದಲ್ಲಿ ಎಂಜಿ ಮಧುಸೂದನ್ ರವರ ಹುಟ್ಟುಹಬ್ಬದಲ್ಲಿ ಮಾಲೂರು ಲಯನ್ ಕ್ಲಬ್ ನ ಅಧ್ಯಕ್ಷ ಆರ್ ಪ್ರಭಾಕರ್ ಸ್ವಾಭಿಮಾನಿ ಪಕ್ಷದ ಸಂಸ್ಥಾಪಕ ಹೂಡಿ ವಿಜಿಕುಮಾರ್, ರವರು ಆಗಮಿಸಿ ಶುಭಾಶಯ ಕೋರಿದರು. 

ಅದೇ ರೀತಿ ಈ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಸುಮಾರು ಸಾವಿರ ಜನಕ್ಕಿಂತ ಹೆಚ್ಚು ಸಾರ್ವಜನಿಕರು ಇದರ ಪ್ರಯೋಜನವನ್ನು ಪಡೆದರು, ಸುಮಾರು 10 ಕ್ಕಿಂತ ಹೆಚ್ಚು ನುರಿತ ತಜ್ಞರಿಂದ ಈ ಕಾರ್ಯಕ್ರಮದಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಕಾರ್ಯಕ್ರಮ ನಡೆಯಿತು .ಆರೋಗ್ಯ ತಪಾಸಣೆ ಮಾಡಿಸಲು ಬಂದಿದ್ದ ಸಾರ್ವಜನಿಕರಿಗೆ ಅನ್ನದಾನ ವ್ಯವಸ್ಥೆ ಹಾಗೂ ಉಚಿತವಾದ ಹೊದಿಕೆಯನ್ನು ಸಹ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ನ ಡೇವಿಡ್, ನಾಯಕ್, ಶಾಮಿಯಲ್, ಸುನಿತಾ, ಸ್ವಪ್ನ, ಲಯನ್ಸ್ ಶಿವು, ರವಿ, ಡಾಕ್ಟರ್ ವಿನಾಯಕ ಪ್ರಭು, ಪ್ರದೀಪ್ ರೆಡ್ಡಿ, ಮಾದನಹಟ್ಟಿ ರವಿ, ಆಟೋ ಶ್ರೀನಿವಾಸ್, ಬಾನು ತೇಜ್, ಮಿಲಿಟರಿ ರಾಮಣ್ಣ, ರಘು, ಸಾರ್ವಜನಿಕರು ಇನ್ನಿತರರು ಉಪಸ್ಥಿತರಿದ್ದರು.