ಸರ್ಕಾರಿ ಯೋಜನೆಗಳ ಕುರಿತು ಮಾಹಿತಿ ಕಾರ್ಯಗಾರ ನಡೆಸಿದ ಯುವ ಕಾಂಗ್ರೆಸ್ ಉಪಾಧ್ಯಕ್ಷ ಚೈತ್ರಾ ವಿ ಗಿರೀಶ್ ಹಾಗೂ ಮಹಿಳಾ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ
Correspondent/Bengaluru/SM News Desk
ಬೆಂಗಳೂರು ಜ 20 : ಪದ್ಮನಾಭನಗರ ಕ್ಷೇತ್ರ ಇಟ್ಟಮಡು ವಾರ್ಡ್ ತಿಮ್ಮರಾಯ ಗೌಡ ಲೇಔಟ್ನಲ್ಲಿ ಮಹಿಳೆಯರನ್ನು ಯುವ ಕಾಂಗ್ರೆಸ್ ರಾಜ ಉಪಾಧ್ಯಕ್ಷರಾದ ಚೈತ್ರ ವಿ ಗಿರೀಶ್ ಕುಮಾರ್ ಮತ್ತು ಮಹಿಳಾ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸವಿತಾ ಜೆ ರವರು ಭೇಟಿ ಮಾಡಿ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ ಶಕ್ತಿ ಯೋಜನೆಗಳ ಹಾಗೂ ರಾಜ್ಯ ಸರ್ಕಾರದ ಯಶಸ್ವಿನಿ, ವಸತಿ ಯೋಜನೆ ಸೇರಿದಂತೆ ಸರ್ಕಾರಿ ಯೋಜನೆಗಳ ಕುರಿತು ವಿವರಿಸಿ ಅರ್ಹರಿಗೆ ಅರ್ಜಿ ಸಲ್ಲಿಸಲು ತಿಳಿಸಲಾಯಿತು.
