ಏಪ್ರಿಲ್ 11ರಂದು ಕೊಮ್ಮಘಟ್ಟ ನೈಸ್ ಗ್ರೌಂಡ್’ನಲ್ಲಿ ನಡೆಯಲಿರುವ ಜನತಾ ಸಮಾವೇಶದ ಪೂರ್ವ ಸಿದ್ಧತೆ
Correspondent/Political/Bengaluru/SM News Desk
ಬೆಂಗಳೂರು ಏ.1 : ಪಶ್ಚಿಮ ವಿಭಾಗಕ್ಕೆ ಸೇರಿದ ಯಶವಂತಪುರ ವಿಧಾನಸಭಾ ಕ್ಷೇತ್ರದ ಸಭೆಯು ಮಾಜಿ ಶಾಸಕರು ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಪಕ್ಷದ ಅಧ್ಯಕ್ಷರಾದ ಶ್ರೀ ಎಚ್ಎಂ ರಮೇಶಗೌಡ ರವರ ಅಧ್ಯಕ್ಷತೆಯಲ್ಲಿ ಹಾಗೂ ಯಶವಂತಪುರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರು ಹಾಗೂ ಹಿರಿಯ ಶಾಸಕರಾದ ಶ್ರೀ ಟಿ ಎನ್ ಜವರಾಯಿಗೌಡ ರವರ ನಾಯಕತ್ವದಲ್ಲಿ ನಡೆಯಿತು.
ಪಕ್ಷದ ಸಂಘಟನೆ ಹಾಗೂ ಏಪ್ರಿಲ್ 11ರಂದು ಕೊಮ್ಮಘಟ್ಟ ನೈಸ್ ಗ್ರೌಂಡ್’ನಲ್ಲಿ ನಡೆಯಲಿರುವ ಜನತಾ ಸಮಾವೇಶದ ಪೂರ್ವ ಸಿದ್ಧತೆ ಬಗ್ಗೆ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ವಾರ್ಡ್ ಅಧ್ಯಕ್ಷರುಗಳಿಗೆ ನೇಮಕಾತಿ ಪತ್ರಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಬೆಂಗಳೂರು ಉತ್ತರ ಜಿಲ್ಲಾ ಅಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಶ್ರೀ ಇ. ಕೃಷ್ಣಪ್ಪ ರವರು, ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಕೆ.ಎ. ತಿಪ್ಪೇಸ್ವಾಮಿ ಅವರು, ಗ್ರೇಟರ್ ಬೆಂಗಳೂರು ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಶೈಲಜಾ ಸಂತೋಜಿ ರಾವ್ ಅವರು, ಮುಖಂಡರಾಗಳಾದ ಶ್ರೀ ಹನುಮಂತ ಗೌಡರು, ಚೇತನ್, ಸಂತೋಷ್, ಮಂಜು, ಮುಖಂಡರುಗಳು, ವಾರ್ಡ್ ಅಧ್ಯಕ್ಷರುಗಳು ಹಾಗು ಕಾರ್ಯಕರ್ತರು ಉಪಸ್ಥಿತರಿದ್ದರು.
