ತನ್ನ ತಂದೆಗೆ ಪಿಸ್ತೂಲ್‌ ತೋರಿಸಿ 10 ಲಕ್ಷ ದರೋಡೆ ಮಾಡಿರುವ ಮಗ

Correspondent/Crime/News Delhi/SM News Desk

Apr 2, 2026 - 22:11
 0  6
ತನ್ನ ತಂದೆಗೆ ಪಿಸ್ತೂಲ್‌ ತೋರಿಸಿ 10 ಲಕ್ಷ ದರೋಡೆ ಮಾಡಿರುವ ಮಗ

ನವದೆಹಲಿ,ಏ.2:  ಮಗನೇ ತನ್ನ ಸ್ನೇಹಿತನೊಂದಿಗೆ ಸೇರಿ ಹಣ ಕೊಡಲು ಸತಾಯಿಸುತ್ತಿದ್ದ ತಂದೆಗೆ ಪಾಠ ಕಲಿಸಲು ಮುಖವಾಡ ಹಾಕಿಕೊಂಡು ಹೆಲಟ್‌ ಧರಿಸಿ ಸ್ಕೂಟಿಯಲ್ಲಿ ಬಂದು ಪಿಸ್ತೂಲ್‌ ತೋರಿಸಿ 10 ಲಕ್ಷ ದರೋಡೆ ಮಾಡಿರುವ ಘಟನೆ ಪೂರ್ವ ದೆಹಲಿಯಲ್ಲಿ ನಡೆದಿದೆ. ಪ್ರಕರಣದ ವಿವರ: ನಿನ್ನೆ ಬೆಳಿಗ್ಗೆ 9 ಗಂಟೆ ಸುಮಾರಿಗೆ ಮುಖರ್ಜಿ ನಗರ ಮೂಲದ ಉದ್ಯಮಿಯೊಬ್ಬರು 112ಗೆ ಕರೆ ಮಾಡಿ ಸ್ಕೂಟಿಯಲ್ಲಿ ಬಂದ ಇಬ್ಬರು ಮುಸುಕುಧಾರಿಗಳು ಲಕ್ಷಿನಗರದಲ್ಲಿ ತಡೆದು ಪಿಸ್ತೂಲ್‌ ತೋರಿಸಿ 10 ಲಕ್ಷ ನಗದನ್ನು ದೋಚಿದ್ದಾರೆ ಉದ್ಯಮಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದರು.

ಉದ್ಯಮಿ ತನ್ನ ವ್ಯವಹಾರ ಪಾಲುದಾರನ ಪರವಾಗಿ ತನ್ನ ಸೋದರಮಾವನಿಗೆ ಹಣ ತಲುಪಿಸಲು ಹೋಗುತ್ತಿದ್ದಾಗ ಸ್ಕೂಟಿಯಲ್ಲಿ ಬಂಧ ಇಬ್ಬರು ಮುಸುಕುಧಾರಿಗಳು ಪಿಸ್ತೂಲ್‌ ತೋರಿಸಿ ಬೆದರಿಸದರಲ್ಲದೆ ತನ್ನ ಮೇಲೆ ಹಲ್ಲೆ ಕೂಡ ನಡೆಸಿದ್ದಾರೆ ಎಂದು ಉದ್ಯಮಿ ದೂರಿನಲ್ಲಿ ತಿಳಿಸಿದ್ದರು.ಎಫ್‌ಐಆರ್‌ ದಾಖಲಿಸಿಕೊಂಡ ಪೊಲೀಸರು ಈ ಮಾಹಿತಿಯನ್ನು ಪರಿಶೀಲಿಸಲು, ತಾಂತ್ರಿಕ ಕಣ್ಗಾವಲು ಕಾರ್ಯಾಚರಣೆಯನ್ನು ಪ್ರಾರಂಭಿಸಿದರು, ಶಂಕಿತರನ್ನು ಪತ್ತೆಹಚ್ಚಲು ಮತ್ತು ಅವರ ಮುಖಗಳ ಸ್ಪಷ್ಟಚಿತ್ರಣವನ್ನು ಪಡೆಯಲು ಹಲವಾರು ಸ್ಥಳಗಳಲ್ಲಿ 120 ಕ್ಯಾಮೆರಾಗಳಿಂದ ದೃಶ್ಯಾವಳಿಗಳನ್ನು ಪರಿಶೀಲಿಸಿದರು.

ಇಬ್ಬರು ಶಂಕಿತರು ಮುಖರ್ಜಿ ನಗರದ ಜನದಟ್ಟಣೆಯ ಲೇನ್‌ಗಳು ಮತ್ತು ಲಕ್ಷಿನಗರದ ಅಸ್ತವ್ಯಸ್ತವಾಗಿರುವ ಪ್ರದೇಶಗಳ ಮೂಲಕ ಮುಖಗವಸು ಹಾಕಿಕೊಂಡು ಹೆಲೆಟ್‌ ಧರಿಸಿಕೊಂಡಿದ್ದರಿಂದ ಆರೋಪಿಗಳನ್ನು ಕಂಡುಹಿಡುವಲ್ಲಿ ವಿಳಂಬವಾಗಿತ್ತು.ಆರೋಪಿಗಳಿದ್ದ ಸ್ಕೂಟಿಯು ಪ್ರತಿ ಬಾರಿಯೂ,ದೆಹಲಿಯ ಜನದಟ್ಟಣೆಯ ರಸ್ತೆಗಳಲ್ಲಿ ಬಹುತೇಕ ಒಂದೇ ರೀತಿಯ ವಾಹನಗಳ ಸಾಲಿನಲ್ಲಿ ಹಾದುಹೋಗುತ್ತಿತ್ತು. 121ನೇ ಕ್ಯಾಮೆರಾದ ಪರಿಶೀಲನೆಯಲ್ಲಿ ಆರೋಪಿಗಳು ಆನಂದ್‌ವಿಹಾರ್‌ ಬಳಿ ಜನದಟ್ಟಣೆ ಇಲ್ಲದ ಕಡೆ ವಾಹನ ನಿಂತಿದೆ. ಆಗ ಸವಾರ ಉಸಿರಾಡಲು ತನ್ನ ಮುಖವಾಡವನ್ನು ಕಳಚಿದ್ದಾನೆ ಮತ್ತು ಹತ್ತಿರದ ಕ್ಯಾಮೆರಾ ಅವನ ಮುಖದ ಸ್ಪಷ್ಟಚಿತ್ರಣವನ್ನು ಸೆರೆಹಿಡಿದಿತ್ತು.

ಗುರುತಿನ ಹಂತದಲ್ಲಿಯೇ ಪ್ರಕರಣವು ಬೆರಗುಗೊಳಿಸುವ ತಿರುವು ಪಡೆದುಕೊಂಡಿತು. ದೂರುದಾರನನ್ನು ತನ್ನ ದರೋಡೆಕೋರ ಎಂದು ಗುರುತಿಸಲು ಕರೆತಂದಾಗ, ಅವನು ತನ್ನ ಸ್ವಂತ ಮಗನನ್ನು ಮುಖಾಮುಖಿಯಾಗಿ ಭೇಟಿಯಾಗಿದ್ದಾನೆ.ವಿಚಾರಣೆಯ ಸಮಯದಲ್ಲಿ 20 ವರ್ಷದ ಯುವಕ ಸ್ನೇಹಿತನೊಂದಿಗೆ ದರೋಡೆಗೆ ಯೋಜಿಸಿದ್ದು, ತನ್ನ ತಂದೆಯ ಮೇಲೆ ಕೋಪಗೊಂಡಿದ್ದೆ. ಅವರು ತನಗೆ ಹಣ ನೀಡಲು ನಿರಂತರವಾಗಿ ನಿರಾಕರಿಸುತ್ತಿದ್ದರು. ಅವರಿಗೆ ಪಾಠ ಕಲಿಸಲು ದರೋಡೆ ರೂಪಡಿಸಿದ್ದಾಗಿ ತಿಳಿಸಿದ್ದಾನೆ.ಕದ್ದ 10 ಲಕ್ಷ ರೂ.ಗಳನ್ನು ಹುಡುಗನ ಅಜ್ಜಿಯ ಮನೆಯಿಂದ ವಶಪಡಿಸಿಕೊಳ್ಳಲಾಗಿದೆ. ಇಬ್ಬರೂ ಯುವಕರು ಈಗ ಸಶಸ್ತ್ರ ದರೋಡೆಯ ಆರೋಪ ಎದುರಿಸುತ್ತಿದ್ದಾರೆ.