ಹುಳದೇನಹಳ್ಳಿ ಗ್ರಾಮದ ವೆಂಕಟ ಬಾರ್‌ನಲ್ಲಿ ಅವಧಿ ಮುಗಿದ ಬಿಯರ್ ಬಾಟಲ್ ಗಳು.
Correspondent/Malur/Srinath/SM News Desk
ಮಾಲೂರು ಜ.22 : :- ಟೇಕಲ್ ಹೋಬಳಿಯ ಹುಳದೇನಹಳ್ಳಿ ಗ್ರಾಮದ ವೆಂಕಟ್ ಬಾರ್‌ಆ್ಯಂಡ್ ರೆಸ್ಟೋರೆಂಟ್ ನಲ್ಲಿ ಅವಧಿ ಮುಗಿದ ಬಿಯರ್ ಮಾರಾಟ ಮಾಡಿದ ಹಿನ್ನೆಲೆಯಲ್ಲಿ ಹಾಗೂ ಬಿಯರ್‌ಸೇವಿಸಿದ ನಂತರ ಕೆಲವರಿಗೆ ವಾಂತಿ ಮಾಡಿಕೊಂಡ ಮದ್ಯಪ್ರಿಯರು ಬಾರ್ ಮಾಲೀಕನ ಮೇಲೆ ತರಾಟೆ ತೆಗೆದುಕೊಂಡ ಘಟನೆ ಗುರುವಾರ ರಾತ್ರಿ ನಡೆದು ತಡವಾಗಿ ವರದಿಯಾಗಿದ್ದು, ಅಬಕಾರಿ ಇಲಾಖೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಕೆಲವು ಮದ್ಯಪ್ರಿಯರು ಮದ್ಯ ಖರೀದಿ ಮಾಡಿದ ಹಿನ್ನೆಲೆಯಲ್ಲಿ ಅವಧಿ ಮುಗಿದ ಬಿಯರ್ ಅನ್ನು ಕೊಡಲಾಗಿದೆ ಎಂದು ಈ ಬಗ್ಗೆ ಬಾರ್ ಮಾಲೀಕನ ಬಳಿ ತಗಾದೆ ತೆಗೆದರು. ನಂತರ ಕೆಲ ವರಿಗೆ ವಾಂತಿಯಾಗುತ್ತಿದೆ ಎಂದು ಕೂಡ ಆರೋಪಿ ಸಲಾಯಿತು. ತದ ನಂತರ ಸ್ಥಳೀಯ ಟೇಕಲ್ ಹೊರ ಠಾಣೆ ಪೊಲೀಸರು ಈ ಬಗ್ಗೆ ಸ್ಥಳಕ್ಕೆ ಆಗಮಿಸಿ ಸಮಸ್ಯೆ ಇತ್ಯರ್ಥಪಡಿಸಲು ಮುಂದಾಗಿದ್ದರು. ತರುವಾಯ ಮಾಲೂರು ಅಬಕಾರಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಅವಧಿ ಮುಗಿದ ಬಿಯರ್ ಬಾಟಲ್ ತೆಗೆದುಕೊಂಡು ಪರಿಶೀಲನೆ ಮಾಡಿ ನಂತರ ಅದನ್ನು ರಾಸಾಯನಿಕ ವಿಶ್ಲೇಷ ಣೆಗಾಗಿ ಲ್ಯಾಬ್ ಗೆ ಕಳಿಸಲಾಗಿದೆ ಎಂದು ಹಾಗೂ ಈ ವಿಚಾರವಾಗಿ ಅಬಕಾರಿ ಇಲಾಖೆಯಲ್ಲಿ ಕೇಸು ದಾಖಲಾಗಿದೆ ಎಂದು ಮಾಲೂರು ತಾಲೂಕಿನ ಅಬಕಾರಿ ನಿರೀಕ್ಷಕಿ ಶಶಿಕಲಾ ತಿಳಿಸಿದ್ದಾರೆ
